ಮುಹೂರ್ತಕ್ಕೂ ಮುನ್ನ ಶಾಕ್ ಕೊಟ್ಟ ಹುಡುಗಿ.. ಹಾರ್ಟ್ ಅಟ್ಯಾಕ್‌ ಹೈಡ್ರಾಮಾ; ಸಿನಿಮಾ ಮೀರಿಸುತ್ತೆ ಈ ಸ್ಟೋರಿ!

author-image
Gopal Kulkarni
Updated On
ಇದೆಂಥಾ ಅನಿಷ್ಟ ಪದ್ಧತಿ! ಇಲ್ಲಿ ಬಾಡಿಗೆಗೆ ಸಿಗುತ್ತಾರಂತೆ ಹೆಣ್ಣುಮಕ್ಕಳು! ಏನಿದು ಸ್ಟೋರಿ?
Advertisment
  • ಮದುವೆಯ ಮುಹೂರ್ತದ ಸಮಯಕ್ಕೆ ಮಂಟಪಕ್ಕೆ ಬಾರದ ಮದುಮಗಳು
  • ಬ್ಯೂಟಿಪಾರ್ಲರ್​ನಲ್ಲಿ ಹೃದಯಾಘಾತವಾಗಿ ತೀರಿ ಹೋದಳೆಂದ ಕುಟುಂಬ
  • ಪೊಲೀಸರು ತನಿಖೆ ಆರಂಭಿಸಿದಾಗ ಬಯಲಿಗೆ ಬಂತು ನಡೆದ ಅಸಲಿ ಸತ್ಯ!

ಉತ್ತರಪ್ರದೇಶದಲ್ಲಿ ಈಗೀಗ ಮದುವೆಗಳ ವಿಚಿತ್ರವೇನಿಸುವ ಟರ್ನ್​ಗಳನ್ನು ತೆಗೆದುಕೊಳ್ಳುತ್ತೀವೆ. ಇತ್ತೀಚೆಗೆ ಮದುಮಗ ಡಾನ್ಸ್​ ಮಾಡಿದ ಎಂಬ ಒಂದೇ ಕಾರಣಕ್ಕೆ ಹುಡುಗಿ ತಂದೆ ಮದುವೆಯನ್ನೇ ಕ್ಯಾನ್ಸಲ್ ಮಾಡಿ ಎಲ್ಲರನ್ನೂ ಕರೆದುಕೊಂಡ ಹೋದ ಘಟನೆ ನಡೆದಿತ್ತು. ಈಗ ಮತ್ತೊಂದು ಘಟನೆ ಅದೇ ಉತ್ತರಪ್ರದೇಶದಲ್ಲಿ ನಡೆದಿದೆ. ಈ ಮದುವೆಯ ಸ್ಟೋರಿ ಯಾವ ಸಸ್ಪೆನ್ಸ್ ಸಿನಿಮಾಗೂ ಕೂಡ ಕಡಿಮೆಯಿಲ್ಲ. ಆ ಮಟ್ಟದ ಟ್ವಿಸ್ಟ್ ಟರ್ನ್​ ಇದರಲ್ಲಿದೆ.

ಮುಜಫರಾನಗರದಲ್ಲಿ ಒಂದು ಮದುವೆ ನಡೆದಿತ್ತು. ಇನ್ನೇನು ಮದುಮಗಳು ಸಿಂಗಾರಗೊಳ್ಳಲು ಮುಹೂರ್ತಕ್ಕೂ ಕೊಂಚ ಮುನ್ನ ಬ್ಯೂಟಿ ಪಾರ್ಲರ್​​ಗೆ ಹೋಗಿದ್ದಾಳೆ ಅಷ್ಟೇ, ಆಮೇಲೆ ಮದುವೆಯ ಮಂಟಪಕ್ಕೆ ಬರಲಿಲ್ಲ. ಏನಾಯ್ತು ಎಂದು ಗಂಡಿನ ಕಡೆಯವರು ಕೇಳಿದಾಗ ಬ್ಯೂಟಿ ಪಾರ್ಲರ್​ಗೆ ಹೋದಾಗ ಅವಳಿಗೆ ಅಲ್ಲಿಯೇ ಹಾರ್ಟ್ ಅಟ್ಯಾಕ್ ಆಯ್ತು. ಮೀರುತ್​ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ಮಾರ್ಗಮಧ್ಯವೇ ಅಸುನೀಗಿದಳು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬರೀ 1 ರೂಪಾಯಿ ಮದುವೆ.. ದಾಖಲೆ ಜೊತೆ ಮೆಸೇಜ್ ಕೊಟ್ರು ವೈದ್ಯ ದಂಪತಿ; ವಧು ಅಪ್ಪ ಬಿಕ್ಕಳಿಸುತ್ತಾ ಹೇಳಿದ್ದೇನು?

ಈ ಒಂದು ಸುದ್ದಿಯನ್ನು ಕೇಳಿ ದಿಗ್ಭಾಂತ್ರರಾದ ಗಂಡಿನ ಕಡೆಯವರು ಹೊರಟು ಹೋಗಿದ್ದಾರೆ. ಈ ವಿಷಯ ದೊಡ್ಡದಾಗಿ ಸದ್ದು ಮಾಡಿದೆ. ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ. ವಿಷಯ ತಿಳಿದ ಪೊಲೀಸರು ಹುಡುಗಿಯ ಮನೆಗೆ ಬಂದು ಅವರ ಕುಟುಂಬದವರನ್ನು ಪ್ರಶ್ನಿಸಿದ್ದಾರೆ. ಸರಿಯಾದ ಉತ್ತರ ಬಾರದಿದ್ದಕ್ಕೆ ಕೂಡಲೇ ತನಿಖೆಯನ್ನು ಕೈಗೊಂಡಿದ್ದಾರೆ. ಒಂದೊಂದೇ ಸಿಸಿಟಿವಿಯನ್ನು ಪರಿಶೀಲಿಸಿದ್ದಾರೆ.

ಆಗ ಮತ್ತೊಂದು ಹುಡುಗಿಯ ಜೊತೆ ಮದುವೆಯಾಗಬೇಕಿದ್ದ ಹುಡುಗಿ ಬ್ಯೂಟಿ ಪಾರ್ಲರ್​ನಿಂದ ಆಚೆ ಹೊರಟಿರುವುದು ಸಿಸಿಟಿವಿಯಲ್ಲಿ ಪತ್ತೆಯಾಗಿದೆ. ಕೂಡಲೇ ಮರಳಿ ಹುಡುಗಿಯ ತಂದೆಯನ್ನು ವಿಚಾರಣೆಗೆ ಒಳಪಡಿಸಿದಾಗ ಅವರು ಮಂಡಿ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಿಸಿದ್ದಾರೆ.

ಎಫ್​ಐಆರ್​​ನಲ್ಲಿ ಹುಡುಗಿಯ ತಂದೆ ನನ್ನ ಮಗಳನ್ನು ಅವಳ ಸ್ನೇಹಿತೆ ಕಿಡ್ನಾಪ್ ಮಾಡಿದ್ದಾಳೆ ಎಂದು ಉಲ್ಲೇಖಿಸಿದ್ದಾರೆ. ಬ್ಯೂಟಿಪಾರ್ಲರ್​​ನ ಸಿಸಿಟಿವಿಯಲ್ಲಿ ಮದುಮಗಳು ಮತ್ತು ಆಕೆಯ ಸ್ನೇಹಿತೆ ಆಚೆ ಹೋಗಿರುವ ದೃಶ್ಯಗಳು ಕಂಡು ಬಂದಿದೆ. ಉಳಿದ ಹಲವು ಸಿಸಿಟಿವಿ ಫೂಟೇಜ್ ಹಾಗೂ ಕಾಲ್​ ರೆಕಾರ್ಡ್​ಗಳನ್ನು ಜಾಲಾಡಿದಾಗ ಹುಡುಗಿ ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ ಇರುವುದು ಗೊತ್ತಾಗಿದೆ.

ಇದನ್ನೂ ಓದಿ: ಮದುವೆ ಮುರಿಯಲು ಕಾರಣವಾಯ್ತು ಥಾರ್ ಕಾರು; ವರನ ಕಡೆಯವರೆಲ್ಲಾ ಕಂಬಿ ಹಿಂದೆ ಹೋಗಿದ್ಯಾಕೆ?

ಕೂಡಲೇ ಮಧ್ಯಪ್ರದೇಶದ ಪೊಲೀಸರನ್ನು ಸಂಪರ್ಕಿಸಿದ ಯುಪಿ ಪೊಲೀಸರು ಅವರ ಸಹಾಯದೊಂದಿಗೆ ಮಹಿಳೆಯನ್ನು ಆಕೆಯ ಗೆಳತಿಯ ಮನೆಯಲ್ಲಿರುವುದನ್ನು ಪತ್ತೆ ಮಾಡಿದ್ದಾರೆ. ಅಲ್ಲಿಂದ ಆಕೆಯನ್ನು ಕರೆದುಕೊಂಡು ಬಂದು ವಿಚಾರಣೆಗೆ ಒಳಪಡಿಸಿದ್ದಾರೆ.

ಕೋರ್ಟ್ ಎದುರಿಗೆ ಆಕೆಯನ್ನು ಹಾಜರುಪಡಿಸಿದಾಗ ಯುವತಿ ನನಗೆ ಮದುವೆ ಇಷ್ಟವಿರಲಿಲ್ಲ. ಆದರೂ ಕೂಡ ನನ್ನನ್ನು ಜಾನ್ಸಿಯಿಂದ ಇಲ್ಲಿಗೆ ಕರೆದುಕೊಂಡು ಬಂದು ಮದುವೆ ಮಾಡಲು ನನ್ನ ಕುಟುಂಬದವರು ಯತ್ನಿಸಿದರು. ಹೀಗಾಗಿ ಮದುವೆಯಿಂದ ತಪ್ಪಿಸಿಕೊಂಡು ಹೋಗಲು ಸ್ನೇಹಿತೆಯ ಸಹಾಯ ಪಡೆದೆ ಎಂದು ಹೇಳಿದ್ದಾಳೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment