ಅಚ್ಚರಿ ನಿರ್ಧಾರಕ್ಕೆ ಬಂದ ಬಿಸಿಸಿಐ.. ಕಿಂಗ್ ಕೊಹ್ಲಿಗೆ ಮತ್ತೊಮ್ಮೆ ಕ್ಯಾಪ್ಟನ್ಸಿ ಪಟ್ಟ..!

author-image
Ganesh
Updated On
ಅಚ್ಚರಿ ನಿರ್ಧಾರಕ್ಕೆ ಬಂದ ಬಿಸಿಸಿಐ.. ಕಿಂಗ್ ಕೊಹ್ಲಿಗೆ ಮತ್ತೊಮ್ಮೆ ಕ್ಯಾಪ್ಟನ್ಸಿ ಪಟ್ಟ..!
Advertisment
  • ಟೀಮ್​ ಇಂಡಿಯಾ ಟೆಸ್ಟ್​ ತಂಡಕ್ಕೆ ಶೀಘ್ರ ನೂತನ ನಾಯಕ
  • ರೋಹಿತ್​ಗೆ ಕೊಕ್​​.. ಬಾಸ್​​ಗಳ ಅಚ್ಚರಿಯ ನಿರ್ಧಾರ
  • ಕಿಂಗ್​ ಕಮ್​ಬ್ಯಾಕ್​ಗೆ ಮಹೂರ್ತ.. ಕೊಹ್ಲಿಗೆ ಟೆಸ್ಟ್ ಸಾರಥ್ಯ?

ಇಂಡೋ-ಇಂಗ್ಲೆಂಡ್​​ ಸರಣಿ, ಮುಂಬರೋ ಚಾಂಪಿಯನ್ಸ್​ ಟ್ರೋಫಿ ಅಂತಾ ಟೀಮ್​ ಇಂಡಿಯಾ ಫುಲ್​ ಬ್ಯುಸಿಯಾಗಿದೆ. ಬಿಸಿಸಿಐ ವಲಯದಲ್ಲಿ ಬೇರೆಯದ್ದೇ ಚರ್ಚೆ ನಡೀತಿದೆ. ಮಿನಿ ಒನ್​ ಡೇ ವಿಶ್ವಕಪ್​ ಗೆಲ್ಲಲು ಟೀಮ್​ ಇಂಡಿಯಾದಲ್ಲಿ ತಯಾರಿ ನಡೀತಿದ್ರೆ ಇಂಗ್ಲೆಂಡ್​ ಟೂರ್​​​ಗೆ ಬಿಸಿಸಿಐ ಪ್ಲಾನ್​ ರೂಪಿಸ್ತಿದೆ. ಕಿಂಗ್​ ಕೊಹ್ಲಿ ಮತ್ತೊಮ್ಮೆ ಪಟ್ಟಾಭಿಷೇಕ ಮಾಡಲು ಸೀಕ್ರೆಟ್ ಪ್ಲಾನ್​ ರೆಡಿಯಾಗಿದೆ.

ಬಿಗ್​ಬಾಸ್​​ಗಳ ಅಚ್ಚರಿಯ ನಿರ್ಧಾರ

ಬಾರ್ಡರ್​​-ಗವಾಸ್ಕರ್​​ ಟೆಸ್ಟ್​ ಸರಣಿಯ ಸೋಲಿನ ಬಳಿಕ ಶುರುವಾಗಿದ್ದ ನಾಯಕತ್ವದ ಬದಲಾವಣೆಯ ಚರ್ಚೆ ಸದ್ಯ ತಣ್ಣಗಾಗಿದೆ. ಆ ಪ್ರಕ್ರಿಯೆ ನಿಂತಿಲ್ಲ. ಸದ್ದಿಲ್ಲದೇ ಬಿಸಿಸಿಐ ವಲಯದಲ್ಲಿ ಟೆಸ್ಟ್​ ತಂಡಕ್ಕೆ ನೂತನ ನಾಯಕನನ್ನ ನೇಮಿಸೋ ಕಸರತ್ತು ನಡೀತಿದೆ. ಬಾರ್ಡರ್​-ಗವಾಸ್ಕರ್​ ಟೆಸ್ಟ್​ ಸರಣಿಯ ಅಂತಿಮ ಪಂದ್ಯದಲ್ಲಿ ಬೆಂಚ್​ಗೆ ಸೀಮಿತವಾಗಿದ್ದ ರೋಹಿತ್​, ಇಂಗ್ಲೆಂಡ್​ ಎದುರಿನ ಟೆಸ್ಟ್​ ಸರಣಿಯಿಂದಲೇ ಡ್ರಾಪ್​ ಆಗೋ ಸಾಧ್ಯತೆ ದಟ್ಟವಾಗಿದೆ. ರೋಹಿತ್​ಗೆ ನಾಯಕತ್ವದ ಜೊತೆಗೆ ತಂಡದಿಂದಲೂ ಕೊಕ್​ ಕೊಡಲು ಮುಂದಾಗಿರೋ ಬಿಸಿಸಿಐ ಬಾಸ್​​ಗಳು, ಹೊಸ ನಾಯಕನ ನೇಮಕದ ವಿಚಾರದಲ್ಲಿ ಅಚ್ಚರಿಯ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದ್ದಾರೆ.

ಇದನ್ನೂ ಓದಿ: ಬೂಮ್ ಬೂಮ್ ಬೂಮ್ರಾ ಭವಿಷ್ಯ ಇವತ್ತು.. BCCI ಮೇಲೆ ವಿಶ್ವ ಕ್ರಿಕೆಟ್ ತಂಡಗಳ ಕಣ್ಣು..!

publive-image

ಕೊಹ್ಲಿಗೆ ಟೆಸ್ಟ್ ಸಾರಥ್ಯ

ಕಿಂಗ್​ ಕೊಹ್ಲಿಗೆ ಟೆಸ್ಟ್​ ತಂಡದ ಸಾರಥ್ಯ ವಹಿಸಲು ಬಿಸಿಸಿಐ ಬಾಸ್​​ಗಳು ಉತ್ಸುಕರಾಗಿದ್ದಾರೆ. ರೋಹಿತ್​ ಬಳಿಕ ನಾಯಕತ್ವದ ರೇಸ್​ನಲ್ಲಿದ್ದ ವೇಗಿ ಜಸ್​​ಪ್ರಿತ್​​ ಬೂಮ್ರಾಗೆ ಇಂಜುರಿಯ ಕಾಟ ಶುರುವಾಗಿದೆ. ಶುಭ್​ಮನ್​ ಗಿಲ್​, ರಿಷಭ್​ ಪಂತ್​, ಯಶಸ್ವಿ ಜೈಸ್ವಾಲ್​ರಂತಹ ಯುವ ಆಟಗಾರರು ಭವಿಷ್ಯದ ನಾಯಕರು ಎಂದು ಗುರುತಿಸಿಕೊಂಡಿದ್ರೂ ಈಗಲೇ ತಂಡವನ್ನ ಮುನ್ನಡೆಸುವಷ್ಟು ಸಮರ್ಥರಾಗಿಲ್ಲ. ಹೀಗಾಗಿ ಮತ್ತೆ ವಾಪಾಸ್​​ ಕಿಂಗ್​ ಕೊಹ್ಲಿ ಮೊರೆ ಹೋಗಲು ಬಿಸಿಸಿಐ ಬಾಸ್​ಗಳು ನಿರ್ಧರಿಸಿದ್ದಾರೆ.

ಕೊಹ್ಲಿ ಬೆಂಬಲಕ್ಕೆ ನಿಂತ ಗಂಭೀರ್

ಮುಂದಿನ ಟೆಸ್ಟ್​ ಕ್ಯಾಪ್ಟನ್​ ಯಾರು? ಅನ್ನೋ ಪ್ರಶ್ನೆಗೆ ಟೀಮ್​ ಇಂಡಿಯಾ ಹೆಡ್​ಕೋಚ್​ ಗೌತಮ್​ ಗಂಭೀರ್​ ಕೂಡ ವಿರಾಟ್​ ಕೊಹ್ಲಿ ಅನ್ನೋ ಉತ್ತರವನ್ನೇ ನೀಡಿದ್ದಾರಂತೆ. ಬಿಸಿಸಿಐ ಜೊತೆಗಿನ ಚರ್ಚೆಯಲ್ಲಿ ಅನುಭವಿ ಕೊಹ್ಲಿಯ ಪರವಾಗಿ ಗುರು ಗಂಭೀರ್​​ ಬ್ಯಾಟಿಂಗ್​​ ನಡೆಸಿದ್ದಾರಂತೆ. ಇಷ್ಟೇ ಅಲ್ಲ. ಮತ್ತೆ ನಾಯಕತ್ವ ವಹಿಸಿಕೊಳ್ಳುವಂತೆ ಕೊಹ್ಲಿ ಜೊತೆಗೆ ಗಂಭೀರ್ ಮಾತುಕತೆಯನ್ನೂ ನಡೆಸಿದ್ದಾರೆ. ಕೊಹ್ಲಿ ಕೂಡ ಈ ವಿಚಾರದಲ್ಲಿ ಪಾಸಿಟಿವ್​ ಆಗಿ ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾಗಿದೆ. ಕ್ಯಾಪ್ಟನ್​ ಕೊಹ್ಲಿ ಕೆಳಗಡೆ ಭವಿಷ್ಯದ ನಾಯಕನನ್ನ​ ಗ್ರೂಮ್​​ ಮಾಡೋದು ಗಂಭೀರ್​ ಲೆಕ್ಕಾಚಾರವಾಗಿದೆ.

ಇದನ್ನೂ ಓದಿ: ಬಂಧನದ ಭೀತಿಯಲ್ಲಿ ರಣವೀರ್ ಅಲಹಾಬಾದಿಯಾ.. ಕ್ಷಮೆ ಕೇಳಿದ ಯೂಟ್ಯೂಬರ್..!publive-image

ಟೀಮ್​ ಇಂಡಿಯಾ ದರ್ಬಾರ್

ಕೊಹ್ಲಿ ಟೀಮ್​ ಇಂಡಿಯಾ ಕಂಡ ಮೋಸ್ಟ್​ ಸಕ್ಸಸ್​ಫುಲ್​ ಟೆಸ್ಟ್​ ಕ್ಯಾಪ್ಟನ್​. ಟೆಸ್ಟ್​ನಲ್ಲಿ ಟೀಮ್​ ಇಂಡಿಯಾವನ್ನ ನಂಬರ್​ 1 ಆಗಿ ಮೆರೆದಾಡುವಂತೆ ಮಾಡಿದ್ದ ಕೊಹ್ಲಿ. ವಿದೇಶಿ ನೆಲದಲ್ಲೂ ಟೀಮ್​ ಇಂಡಿಯಾ ಘರ್ಜಿಸುವಂತೆ ಮಾಡಿದ್ರು. ಅದ್ರಲ್ಲೂ ಆಸ್ಟ್ರೇಲಿಯಾ, ನ್ಯೂಜಿಲೆಂಡ್​, ಇಂಗ್ಲೆಂಡ್​, ಸೌತ್​ ಆಫ್ರಿಕಾದಂತಹ ಸೇನಾ ಕಂಟ್ರಿಗಳಲ್ಲೂ ತಂಡವನ್ನ ಯಶಸ್ವಿಯಾಗಿ ಮುನ್ನಡೆಸಿ ಗೆಲ್ಲಿಸಿದ್ರು.

ಕೊಹ್ಲಿ ನಾಯಕತ್ವದಲ್ಲಿ..

​ಕೊಹ್ಲಿ ನಾಯಕತ್ವದಲ್ಲಿ ಟೀಮ್​ ಇಂಡಿಯಾ 68 ಟೆಸ್ಟ್​ ಪಂದ್ಯಗಳನ್ನಾಡಿದ್ದು, ಇ ಪೈಕಿ 40 ಪಂದ್ಯಗಳಲ್ಲಿ ಜಯ ಸಾಧಿಸಿದೆ. 17 ಪಂದ್ಯಗಳಲ್ಲಿ ಸೋಲುಂಡಿದ್ದು, 11 ಟೆಸ್ಟ್​ ಡ್ರಾನಲ್ಲಿ ಅಂತ್ಯಕಂಡಿವೆ. ಕೊಹ್ಲಿ ಒಟ್ಟಾರೆ 58.82ರ ಗೆಲುವಿನ ಸರಾಸರಿ ಹೊಂದಿದ್ದಾರೆ.

ಕೊಹ್ಲಿ ಫಾರ್ಮ್​​ ಸಮಸ್ಯೆಗೆ ನಾಯಕತ್ವವೇ ಉತ್ತರ

ಬಿಸಿಸಿಐ, ಟೀಮ್​ ಮ್ಯಾನೇಜ್​ಮೆಂಟ್​ ಕೊಹ್ಲಿಗೆ ಪಟ್ಟಕಟ್ಟಲು ಉತ್ಸುಕರಾಗಿದ್ದಾರೆ. ಟೆಸ್ಟ್​ ಕ್ರಿಕೆಟ್​​ನಲ್ಲಿ ಕೊಹ್ಲಿ ರನ್​ಗಳಿಕೆಗೆ ಪರದಾಡ್ತಿದ್ದಾರೆ. ವೈಫಲ್ಯದ ಸುಳಿಗೆ ಸಿಲುಕಿರುವ ವಿರಾಟ್​ ಕೊಹ್ಲಿ, ತಂಡವನ್ನ ಸಮರ್ಥವಾಗಿ ಮುನ್ನಡೆಸ್ತಾರಾ ಎಂಬ ಪ್ರಶ್ನೆಗಳು ಸಹಜವಾಗಿಯೇ ಕೇಳಿ ಬರ್ತಿವೆ. ಆದ್ರೆ, ಇತಿಹಾಸ ಕೊಹ್ಲಿ ಸಮಸ್ಯೆಗೆ ನಾಯಕತ್ವವೊಂದೇ ಪರಿಹಾರ ಎಂದು ಹೇಳ್ತಿದೆ.

ಇದನ್ನೂ ಓದಿ: 2 ವರ್ಷ ಫ್ರಿಡ್ಜ್​ನಲ್ಲಿಟ್ಟ ಸಾಂಬಾರ್ ತಿಂದು ಭಾವುಕಳಾದ ಮಹಿಳೆ; ಇದರ ಹಿಂದೆ ಇರೋದು ಕರುಳು ಹಿಂಡುವ ಕಥೆ!

publive-image

ಕೊಹ್ಲಿ ಬ್ಯಾಟಿಂಗ್​​

ಟೀಮ್​ ಇಂಡಿಯಾ ನಾಯಕನಾಗಿದ್ದ ಅವಧಿಯಲ್ಲಿ ಆಡಿದ 68 ಪಂದ್ಯಗಳಲ್ಲಿ 5864 ರನ್​ಗಳಿಸಿದ್ದ ಕೊಹ್ಲಿ ಬರೋಬ್ಬರಿ 54.80ರ ಸರಾಸರಿ ಹೊಂದಿದ್ರು. 20 ಶತಕ ಸಿಡಿಸಿ ಮಿಂಚಿದ್ರು. ಆದ್ರೆ, ನಾಯಕತ್ವ ತ್ಯಜಿಸಿದ ಬಳಿಕ 24 ಟೆಸ್ಟ್​ ಆಡಿರೋ ವಿರಾಟ್, ಕೇವಲ​ 268 ರನ್​ಗಳಿಸಿದ್ದಾರೆ. ಕೇವಲ 32.51ರ ಸರಾಸರಿ ಹೊಂದಿದ್ದು, 3 ಶತಕ ಸಿಡಿಸಿದ್ದಾರೆ.

ನಾಯಕನಾಗಿದ್ದಾಗ 54.80ರ ಅದ್ಭುತ ಸರಾಸರಿ ಹೊಂದಿದ್ದ ಕೊಹ್ಲಿ, ಪಟ್ಟ ತ್ಯಜಿಸಿದ ಬಳಿಕ ರನ್​ಗಳಿಕೆಗೆ ತಡಕಾಡಿದ್ದಾರೆ. ಕಳೆದೊಂದು ವರ್ಷದಿಂದ ಅಂತೂ ಹೀನಾಯ ಪ್ರದರ್ಶನ ನೀಡಿದ್ದಾರೆ. ಬಿಸಿಸಿಐ ಬಾಸ್​​ಗಳು ಮತ್ತೆ ಕೊಹ್ಲಿಗೆ ಪಟ್ಟ ಕಟ್ಟೋ ಪ್ರಯತ್ನದ ಮಾಡ್ತಿರೋದ್ರ ಈ ಲೆಕ್ಕಾಚಾರವೂ ಇದೆ. ಆದ್ರೆ, ಅಂದು ಬೇಸರದಲ್ಲಿ ದಿಢೀರ್​ ಎಂದು ಪಟ್ಟ ತ್ಯಜಿಸಿದ್ದ ಕೊಹ್ಲಿ, ಇದೀಗ ಬಿಸಿಸಿಐ ಮತ್ತೆ ಆಫರ್​ ನೀಡಿದ್ರೆ ಒಪ್ಪಿಕೊಳ್ತಾರಾ.? ಕಾದು ನೋಡಬೇಕು.

ಇದನ್ನೂ ಓದಿ: ಮೈದಾನದಲ್ಲೇ ಕಣ್ಣೀರಿಟ್ಟ ಕ್ಯಾಪ್ಟನ್​ ರೋಹಿತ್​ ಶರ್ಮಾ; ಈ ಬಗ್ಗೆ ಏನಂದ್ರು ಹಿಟ್​ಮ್ಯಾನ್​?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment