/newsfirstlive-kannada/media/post_attachments/wp-content/uploads/2024/11/UKRAINE-RUSSIA-WAR-1.jpg)
21ನೇ ಶತಮಾನದ ಭಯಾನಕ ಯುದ್ಧಕ್ಕೆ ಈಗ ಸಾವಿರ ದಿನ. ಎರಡನೇ ಮಹಾಯುದ್ಧದ ಬಳಿಕ ಇಂತಹದೊಂದು ಸಮರವನ್ನು ಯುರೋಪ್ ದೇಶಗಳು ಇದೇ ಮೊದಲ ಬಾರಿ ಕಂಡಿವೆ. ಒಂದಷ್ಟು ತಿಂಗಳುಗಳಲ್ಲಿ ಈ ಯುದ್ಧ ಮುಗಿದು ಹೋಗಬಹುದು. ಶಾಂತಿ ಸ್ಥಾಪನೆ ಆಗಬಹುದು ಎಂದೇ ಎಲ್ಲರೂ ನಂಬಿದ್ದರು. ಆದ್ರೆ ರಷ್ಯಾ ಹಾಗೂ ಉಕ್ರೇನ್ ನಡುವೆ ನಡೆಯುತ್ತಿರುವ ಈ ಯುದ್ಧಕ್ಕೆ ಸಾವಿರ ದಿನಗಳು ತುಂಬಿದರೂ ಕೂಡ ನಿಲ್ಲುವ ಯಾವ ಲಕ್ಷಣಗಳು ಕಾಣುತ್ತಿಲ್ಲ.
ಈ ಮಹಾಯುದ್ಧದಲ್ಲಿ ಉಕ್ರೇನ್ ತನ್ನದೆಲ್ಲವನ್ನೂ ಬಹುತೇಕ ಕಳೆದುಕೊಂಡಿದೆ. ಎಲ್ಲಾ ಮಹಾನಗರಗಳು, ಪಟ್ಟಣಗಳು ಹಳ್ಳಿಗಳು ನೆಲಸಮಗೊಂಡಿವೆ. ಸಾಕಷ್ಟು ಪ್ರಾಣಹಾನಿಗಳು, ಆಸ್ತಿ ನಾಶಗಳು ಎಲ್ಲವೂ ಇಂದಿಗೂ ಕೂಡ ಜಾರಿಯಲ್ಲಿವೆ. ಇದು ಮುಗಿಯದ ಯುದ್ಧವೆಂದೇ ಹೆಸರು ಪಡೆದಿದೆ.
ಈ ಒಂದು ಯುದ್ಧದಲ್ಲಿ ಉಕ್ರೇನ್ ತನ್ನ 80 ಸಾವಿರ ಸೈನಿಕರನ್ನು ಕಳೆದುಕೊಂಡಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. 80 ಸಾವಿರ ಸೈನಿಕರು ಮರಣವನ್ನಪ್ಪಿದ್ದರೆ 4 ಲಕ್ಷಕ್ಕೂ ಅಧಿಕ ಸೈನಿಕರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಇತ್ತ ಕಡೆ ರಷ್ಯಾದಲ್ಲಿಯೂ ಕೂಡ ಹತ್ತಿರ ಹತ್ತಿರ 2 ಲಕ್ಷ ಜನ ಸೈನಿಕರು ಮೃತಪಟ್ಟಿರುವ ವರದಿಯಾಗಿದ್ದು ಸುಮಾರು 4 ಲಕ್ಷಕ್ಕೂ ಅಧಿಕ ಸೈನಿಕರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.
ಉಕ್ರೇನ್ ನ್ಯೂಯೊ ನಾಜಿಯೆಂಬ ಪಾಶ್ಚಾತ್ಯ ದೇಶಗಳ ನಿಯಂತ್ರಣದಲ್ಲಿದೆ, ನ್ಯಾಟೊ ಸೇನೆಯನ್ನು ಸೇರಲು ಸಜ್ಜಾಗಿದೆ. ಇದು ರಷ್ಯಾದ ಸುರಕ್ಷತೆಗೆ ಮಹಾ ಅಡ್ಡಿಯೆಂದು ರಷ್ಯಾದ ಅಧ್ಯಕ್ಷ ವ್ಲಾಡಮಿರ್ ಪುಟಿನ್ ಉಕ್ರೇನ್ ವಿರುದ್ಧ ಸಮರ ಸಾರಿದರು. ಯುದ್ಧ ಶುರುವಾಗಿ ಇಂದಿಗೆ ಬರೋಬ್ಬರಿ ಸಾವಿರ ದಿನಗಳು ಆಗಿವೆ. ಆದ್ರೆ ಯುದ್ಧ ಮಾತ್ರ ಇಂದಿಗೂ ಕೂಡ ಜಾರಿಯಲ್ಲಿಯೇ ಇದೆ. ಈ ಒಂದು ಯುದ್ಧದಲ್ಲಿ ಆಗಸ್ಟ್ 31, 2024ರ ಪ್ರಕಾರ ಸುಮಾರು 11743 ನಾಗರಿಕರು ಪ್ರಾಣ ಕಳೆದುಕೊಂಡಿದ್ದರೆ, 24,614 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಯುನೈಟೆಡ್ ನೇಷನ್ ಹಾಗೂ ಉಕ್ರೇನ್ ಹೇಳುವ ಪ್ರಕಾರ ಈ ಸಂಖ್ಯೆ ಇನ್ನೂ ಹೆಚ್ಚಿದೆಯಂತೆ. ಈ ಒಂದು ಯುದ್ಧದಲ್ಲಿ ರಷ್ಯಾ ಸೇನೆ ಸುಮಾರು 589 ಮಕ್ಕಳನ್ನು ಹತ್ಯೆ ಮಾಡಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:ಕೋಮಾಗೆ ಜಾರಿದ ಇರಾನ್ನ ಸುಪ್ರೀಂ ಲೀಡರ್? ಖಮೇನಿ ಆಫೀಸ್ನಿಂದ ಬಂದ ಮಾಹಿತಿ ಏನು?
ಇನ್ನು ರಷ್ಯಾ ಹೆಚ್ಚು ಕಡಿಮೆ ಉಕ್ರೇನ್ನನ್ನು ತನ್ನ ವಶಕ್ಕೆ ಪಡೆದಿದೆ. ಉಕ್ರೇನ್ ಐದು ಭಾಗವನ್ನು ಅದು ತನ್ನ ತೆಕ್ಕೆಗೆ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ. ಒಂದು ಗ್ರೀಸ್ ದೇಶದ ಭಾಗದಷ್ಟು ಉಕ್ರೇನ್ನನ್ನು ರಷ್ಯಾ ವಶಪಡಿಸಿಕೊಂಡಿದೆ.2022ರ ವೇಳೆಗಾಗಲೇ, ಉತ್ತರ, ಪೂರ್ವ ಹಾಗೂ ದಕ್ಷಿಣ ಉಕ್ರೇನ್ ಮೇಲೆ ರಷ್ಯಾ ತನ್ನ ಹಿಡಿತವನ್ನು ಸಾಧಿಸಿದೆ. ಕಿವ್ನ ಉತ್ತರ ಭಾಗ ಮತ್ತು ಡಿನ್ಪೊ ರಿವರ್ನ ದಕ್ಷಿಣ ಭಾಗದ ಮೇಲೆ ರಷ್ಯಾ ತನ್ನ ಬಾವುಟವನ್ನು ನೆಟ್ಟಿದೆ ಎಂದು ಹೇಳಲಾಗುತ್ತಿದೆ.
ಇನ್ನು ಈ ಯುದ್ಧದ ಬಳಿಕ ಉಕ್ರೇನ್ ತನ್ನ ಆರ್ಥಿಕ ಸ್ಥಿತಿಯನ್ನು ಕಳೆದುಕೊಂಡಿದೆ. ಯುದ್ಧಕ್ಕೂ ಮುನ್ನ ಇದ್ದ ಅದರ ಆರ್ಥಿಕ ಪ್ರಗತಿಯೂ ಯುದ್ಧದ ನಂತರ ಶೇಕಡಾ 33ರಷ್ಟು ಈಗ ಕುಸಿದಿದೆ. ವಿಶ್ವ ಬ್ಯಾಂಕ್, ಯುರೋಪಿಯನ್ ಕಮಿಷನ್ ಹಾಗೂ ಉಕ್ರೇನ್ ಸರ್ಕಾರ ನಡೆಸಿದ ಅಧ್ಯಯನದ ಪ್ರಕಾರ ಈ ಯುದ್ಧದಿಂದ ಉಕ್ರೇನ್ಗೆ ಸುಮಾರು 152 ಬಿಲಿಯನ್ ಡಾಲರ್ಗಳಷ್ಟು ಆಸ್ತಿಪಾಸ್ತಿ ನಾಶವಾಗಿದೆಯಂತೆ
ಇದನ್ನೂ ಓದಿ: ತಾರಕಕ್ಕೇರಿದ ಸಂಘರ್ಷ; ಇಸ್ರೇಲ್ ಪ್ರಧಾನಿ ಮನೆ ಮೇಲೆ ದಿಢೀರ್ ದಾಳಿ; ಏನಾಯ್ತು?
ರಷ್ಯಾ ಉಕ್ರೇನ್ನ ಮೂಲಸೌಕರ್ಯಗಳನ್ನೇ ಗುರಿಯಾಗಿಟ್ಟುಕೊಂಡು ದಾಳಿ ನಡೆಸಿದೆ. ಎಲ್ಲ ವ್ಯವಸ್ಥೆಗಳನ್ನು ಧ್ವಂಸಗೊಳಿಸಿದೆ. ಯುದ್ಧ ಸದಾ ವಿನಾಶವನ್ನೇ ತರುತ್ತದೆ. ಸದ್ಯ ಉಕ್ರೇನ್ನಲ್ಲಿ ಎಲ್ಲೆ ಸುತ್ತಿದರು ವಿನಾಶದ ಕುರುಹುಗಳೇ ಕಾಣುತ್ತಿವೆ. ಮುಂದೆ ಇನ್ನೂ ಭೀಕರವಾದ ವಿನಾಶಗಳು ಸಂಭವಿಸುವ ಸಾಧ್ಯತೆಯೂ ಇದೆ. ಸಾವಿರ ದಿನದ ಸಮರಕ್ಕೆ ಅಂತ್ಯವೆಂದು ಅಂತ ಉಕ್ರೇನ್ ನಾಗರಿಕರು ಕಾಯುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ