newsfirstkannada.com

ಚಳಿ ಲೆಕ್ಕಕ್ಕೇ ಇಲ್ಲ.. ನಿದ್ದೆ-ಗಿದ್ದೆ ಬಿಟ್ಟು ಬೀದಿಗೆ ಇಳಿದ ಆಶಾ ವರ್ಕರ್ಸ್​; ಇವರ ಬೇಡಿಕೆ ಏನೇನು..?

Share :

Published February 14, 2024 at 7:58am

    ಸಿದ್ದರಾಮಯ್ಯ ಸರ್ಕಾರಕ್ಕೆ ಪ್ರತಿಭಟನೆಯ ಬಿಸಿ

    ಇಂದಿನಿಂದ ಎರಡು ದಿನ ಬೆಂಗಳೂರಲ್ಲಿ ಬೃಹತ್ ಪ್ರತಿಭಟನೆ

    ರಾಜ್ಯದ ಮೂಲೆ ಮೂಲೆಯಿಂದ ಬಂದಿರುವ ಕಾರ್ಯಕರ್ತೆಯರು

ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಶಾ ಕಾರ್ಯಕರ್ತೆಯರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.

ಫೆಬ್ರವರಿ 16ರಂದು ಬಜೆಟ್ ಮಂಡನೆಗೆ ರಾಜ್ಯ ಸರ್ಕಾರ ತಯಾರಿ ನಡೆಸ್ತಿದ್ರೆ, ಇತ್ತ ಬಜೆಟ್​ಗೂ ಮುನ್ನವೇ ಸರ್ಕಾರಕ್ಕೆ ಆಶಾ ಕಾರ್ಯಕರ್ತೆಯರ ಪ್ರತಿಭಟನೆಯ ಬಿಸಿ ತಟ್ಟಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ನಿನ್ನೆ ಬೆಳಗ್ಗೆಯಿಂದಲೇ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಪ್ರತಿಭಟನೆ ನಡೆಸ್ತಿದ್ದು, ಇಂದೂ ಕೂಡ ಹೋರಾಟ ಮುಂದುವರೆಯಲಿದೆ.

ಬೇಡಿಕೆಗಳು ಏನೇನು..?

  1. ಆರ್‌ಸಿಎಚ್‌ ಪೋರ್ಟಲ್‌ ಪ್ರಾಬ್ಲಂ ನಿವಾರಿಸಬೇಕು
  2. ಕಾರ್ಯಕರ್ತೆಯರಿಗೆ ಮಾಸಿಕವಾಗಿ 15 ಸಾವಿರ ಸಂಬಳ
  3. ಮೊಬೈಲ್ ಆಧಾರಿತ ಕೆಲಸಗಳನ್ನು ಮಾಡಿಸಬಾರದು
  4. ಗಂಭೀರ ಕಾಯಿಲೆಗೆ ಒಳಗಾಗಿರುವ ಕಾರ್ಯಕರ್ತರಿಗೆ ಸಂಬಳ ಸಹಿತ ರಜೆ
  5. ಕಳೆದ ನಾಲ್ಕು ವರ್ಷಗಳಿಂದ ಆಶಾ ಡೈರಿ ಸಿಕ್ಕಿಲ್ಲ, ಅದನ್ನು ನೀಡಬೇಕು
  6. ಕಳೆದ ಮೂರು ವರ್ಷದಿಂದ ನೀಡದಿರುವ ಸಮವಸ್ತ್ರವನ್ನ ನೀಡಬೇಕು

ಇವತ್ತಿನಿಂದ ಎರಡು ದಿನ ಸಾವಿರಾರು ಆಶಾ ಕಾರ್ಯಕರ್ತೆಯರಿಂದ ಪ್ರತಿಭಟನೆ ನಡೆಯಲಿದೆ. ರಾಜ್ಯದ ಮೂಲೆ ಮೂಲೆಯಿಂದ ಆಶಾ ಕಾರ್ಯಕರ್ತೆಯರು ಆಗಮಿಸಿದ್ದಾರೆ. ಬೆಳಗ್ಗೆ 11 ಗಂಟೆಯಿಂದ ಪ್ರತಿಭಟನೆ ಆರಂಭವಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಳಿ ಲೆಕ್ಕಕ್ಕೇ ಇಲ್ಲ.. ನಿದ್ದೆ-ಗಿದ್ದೆ ಬಿಟ್ಟು ಬೀದಿಗೆ ಇಳಿದ ಆಶಾ ವರ್ಕರ್ಸ್​; ಇವರ ಬೇಡಿಕೆ ಏನೇನು..?

https://newsfirstlive.com/wp-content/uploads/2024/02/ASHA-WORKERS-1.jpg

Load More