ವೈದ್ಯೆಯ ಅತ್ಯಾಚಾರ ಕೊಲೆ ಪ್ರಕರಣ ವಿರುದ್ಧ ಆಶಿಕಾ ರಂಗನಾಥ್ ಕೆಂಡ
ಇದು ಎಲ್ಲಿ ಬೇಕಾದರು, ಯಾರಿಗೆ ಬೇಕಾದರೂ ಆಗಬಹುದು ಎಚ್ಚರ
ಇನ್ಸ್ಟಾಗ್ರಾಮ್ನಲ್ಲಿ ಆಕ್ರೋಶ ಹೊರಹಾಕಿದ ಕನ್ನಡದ ನಟಿ ಆಶಿಕಾ
ಬೆಂಗಳೂರು: ಕೊಲ್ಕತ್ತಾದ ಆರ್ಜಿ ಕರ್ ಮೆಡಿಕಲ್ ಕಾಲೇಜಿನಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಸದ್ಯ ಇಡೀ ದೇಶವನ್ನೇ ಆಕ್ರೋಶದ ಅಂಚಿಗೆ ತಂದು ನಿಲ್ಲಿಸಿದೆ. ಆ ಬರ್ಬರ, ಆಕೆಯ ಮೇಲೆ ನಡೆದ ಕ್ರೌರ್ಯವನ್ನು ಕೇಳಿದ ಜನರು, ರಾಕ್ಷಸತ್ವದ ಸೀಮೆಯನ್ನೂ ದಾಟಿದ ನೀಚರು ಮಾತ್ರ ಇಂತಹ ಕೆಲಸವನ್ನು ಮಾಡುತ್ತಾರೆ ಎಂದೇ ತಮ್ಮ ಸಂಕಟವನ್ನು ಹೊರ ಹಾಕುತ್ತಿದ್ದಾರೆ.
ಅತ್ಯಾಚಾರ ಕೊಲೆಗಳು ನಡೆದಾಗಲೆಲ್ಲಾ, ಇಡೀ ಸಾಮಾಜವೇ ಎದ್ದು ನಿಂತು ಅದರ ವಿರುದ್ಧ ಆಕ್ರೋಶದ ಕಹಳೆಯನ್ನು ಊದುತ್ತದೆ. ಕೊಲ್ಕತ್ತಾದಲ್ಲಿ ನಡೆದ ಭೀಭತ್ಸ ಘಟನೆಯಿಂದ ಸ್ಯಾಂಡಲ್ವಡ್ ನಟಿ ಆಶಿಕಾ ರಂಗನಾಥ್ ಕೂಡ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಇದನ್ನೂ ಓದಿ: 3 ಹೆಂಡ್ತಿಯರ ಬಿಟ್ಟು 4ನೇ ಮದುವೆ.. ವೈದ್ಯೆಯ ರೇಪ್ & ಮರ್ಡರ್ ಹಂತಕನಿಗಿದೆ ಕರಾಳ ಚಾಳಿ; ಏನದು?
ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಕೊಲ್ಕತ್ತಾದ ಬರ್ಬರತೆಯ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ. ಎಲ್ಲ ವೈದ್ಯಕೀಯೇತರ ವೃತ್ತಿಯಲ್ಲಿರುವವರೇ ಅರ್ ಜಿ ಕರ್ ಮೆಡಿಕಲ್ ಕಾಲೇಜ್ನಲ್ಲಿ ನಡೆದ ಘಟನೆ ಕೇವಲ ವೈದ್ಯರಿಗೆ ಸಂಬಂಧಿಸಿದ ಸಮಸ್ಯೆಯಲ್ಲ, ದಯವಿಟ್ಟು ಅರಿತುಕೊಳ್ಳಿ, ಆ ಮಹಿಳೆ ಕೆಲಸ ಮಾಡುವ ಜಾಗದಲ್ಲಿಯೇ ಸುರಕ್ಷಿತವಾಗಿಲ್ಲ ಅಂದ್ರೆ ಮತ್ತೆಲ್ಲಿ? ಇದು ನಿರ್ಭಯಾ ಪ್ರಕರಣಕ್ಕಿಂತ ಏನು ಕಡಿಮೆಯಿಲ್ಲ.
ಇದನ್ನೂ ಓದಿ: ನೀಲಿ ಚಿತ್ರಗಳನ್ನು ನೋಡೋ ಚಟ.. ವೈದ್ಯ ರೇಪ್ & ಮರ್ಡರ್ ಭಯಾನಕ ಸತ್ಯ ಬಹಿರಂಗ; ಆಗಿದ್ದೇನು?
ಕೆಲವು ನಾಯಕರು ಹೇಳುವ ಪ್ರಕಾರ ಮಧ್ಯರಾತ್ರಿ ಹೆಣ್ಣು ಮಕ್ಕಳು ರಸ್ತೆಯಲ್ಲಿ ಓಡಾಡಬಾರದು ಅಂತೆ. ಆದ್ರೆ ಅವಳು ಹೋಗಿದ್ದು ನೈಟ್ ಡ್ಯೂಟಿಗೆ, ಅತ್ಯಂತ ನೆಮ್ಮದಿಯ ವಲಯದಲ್ಲಿ ಇದ್ದಂತವಳು. ಅವಳಿಗೆ ಅಲ್ಲಾದರೂ ರಕ್ಷಣೆ ಸಿಕ್ಕಿದ್ಯಾ. ಈ ತರಹದ್ದು ಯಾರಿಗೆ ಬೇಕಾದರೂ, ಎಲ್ಲಿ ಬೇಕಾದರೂ, ಯಾವ ಸಮಯದಲ್ಲಿ ಬೇಕಾದರೂ ಕೂಡ ಆಗಬಹುದು. ಇದನ್ನೂ ಆದಷ್ಟು ಗಂಭೀರವಾಗಿ ಪರಿಗಣಿಸಬೇಕು. ಆರೋಪಿಗೆ ತಕ್ಕ ಶಿಕ್ಷೆಯಾಗಬೇಕು. ಆ ಶಿಕ್ಷೆ ಇಂತಹ ಸೈಕೋಪಾತ್‌ಗಳಿಗೆ ದೊಡ್ಡ ಉದಾಹರಣೆಯಾಗಿ ನಿಲ್ಲಬೇಕು ಎಂದ ಆಶಿಕಾ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ