ಬಾಲ್ಯದ ಕೋಚ್​​ಗೆ ನೆಹ್ರಾ ಗುರು ದಕ್ಷಿಣೆ; ಬಾಡಿಗೆ ಮನೆಯಲ್ಲಿದ್ದ ಗುರುವಿಗೆ ಅರಮನೆ ನೀಡಿದ ಕತೆ..!

author-image
Ganesh
Updated On
ಬಾಲ್ಯದ ಕೋಚ್​​ಗೆ ನೆಹ್ರಾ ಗುರು ದಕ್ಷಿಣೆ; ಬಾಡಿಗೆ ಮನೆಯಲ್ಲಿದ್ದ ಗುರುವಿಗೆ ಅರಮನೆ ನೀಡಿದ ಕತೆ..!
Advertisment
  • ಹೃದಯವಂತಿಕೆಯಲ್ಲಿ ದೊಡ್ಡ ಶ್ರೀಮಂತ ಆಶಿಶ್ ನೆಹ್ರಾ
  • ಗುಜರಾತ್ ಟೈಟನ್ಸ್​ ತಂಡದ ಕೋಚ್ ಆಗಿರುವ ನೆಹ್ರಾ
  • Driven- The Virat Kohli Story ಪುಸ್ತಕದಲ್ಲಿ ರಿವೀಲ್

ಭಾರತೀಯ ಕ್ರಿಕೆಟ್ ತಂಡದ ಮಾಜಿ ವೇಗಿ ಆಶಿಶ್ ನೆಹ್ರಾ (Ashish Nehra) ಸದ್ಯ ಗುಜರಾತ್ ಟೈಟಾನ್ಸ್‌ ಫ್ರಾಂಚೈಸಿಯ ಕೋಚ್ ಆಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಗುಜರಾತ್ ಚೊಚ್ಚಲ ಋತುವಿನಲ್ಲಿಯೇ (2022) ಪ್ರಶಸ್ತಿಯನ್ನು ಗೆದ್ದುಕೊಂಡಿತು. ಐಪಿಎಲ್ 2025ಕ್ಕೂ ಮೊದಲು ನೆಹ್ರಾ ಮಾನವೀಯ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ತಮ್ಮ ಗುರುವಿಗೆ ಗುರುದಕ್ಷಿಣೆಯಾಗಿ ಮನೆಯೊಂದನ್ನು ಕಟ್ಟಿಸಿಕೊಟ್ಟಿರುವ ವಿಚಾರ ಬೆಳಕಿಗೆ ಬಂದಿದೆ.

ತಮ್ಮ ಬಾಲ್ಯದ ತರಬೇತುದಾರ ತಾರಕ್ ಸಿನ್ಹಾಗೆ (Tarak Sinha) ಮನೆ ಒಂದನ್ನು ಉಡುಗೊರೆಯಾಗಿ ನೀಡಿದ್ದರು. ತಾರಕ್ ಸಿನ್ಹಾ ಅವರು ದೆಹಲಿಯಲ್ಲಿ Sonnet Cricket Club ಹುಟ್ಟುಹಾಕಿದ್ದರು. ನೆಹ್ರಾ ಟೀಂ ಇಂಡಿಯಾಗೆ ಎಂಟ್ರಿ ಪಡೆಯುವಲ್ಲಿ ಇವರ ಪಾತ್ರ ಪ್ರಮುಖವಾಗಿದೆ. ಪತ್ರಕರ್ತ ವಿಜಯ್ ಲೋಕಪಳ್ಳಿ ‘Driven- The Virat Kohli Story’ ಎಂಬ ಪುಸ್ತಕವನ್ನು ಬರೆದಿದ್ದಾರೆ. ಅದರಲ್ಲಿ ನೆಹ್ರಾ ಗುರು ದಕ್ಷಿಣೆಯಾಗಿ ಕೋಚ್​ಗೆ ಮನೆ ಕಟ್ಟಿಸಿಕೊಟ್ಟ ವಿಚಾರವನ್ನು ಬಹಿರಂಗವಾಗಿದೆ.

ಇದನ್ನೂ ಓದಿ: ಕೊಹ್ಲಿ ಮಂಡಿ ನೋವು ಬಗ್ಗೆ ಮಹತ್ವದ ಮಾಹಿತಿ ನೀಡಿದ ಗಿಲ್.. ಇಂಗ್ಲೆಂಡ್ ಸಿರೀಸ್ ಆಡಲ್ವಾ?

publive-image

ಸಿನ್ಹಾ ಅವರ ಕ್ರಿಕೆಟ್ ಅಕಾಡೆಮಿಯಲ್ಲಿ ನೆಹ್ರಾ ಕೂಡ ಆಡುತ್ತಿದ್ದರು. ಒಂದು ದಿನ ಕೋಚ್ ಅಕಾಡೆಮಿಗೆ ತಡವಾಗಿ ಬಂದಿದ್ದರು. ಇದು ನೆಹ್ರಾ ಗಮನಕ್ಕೆ ಬಂದಿದೆ. ಯಾಕೆ ತಡವಾಗಿ ಬಂದ್ರಿ ಅಂತಾ ನೆಹ್ರಾ ಕೇಳಿದ್ದಾರೆ. ತಡವಾಗಿ ಬಂದು ನೀವು ಮಕ್ಕಳಿಗೆ ಏನು ಕಲಿಸುತ್ತೀರಿ ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ್ದ ಸಿನ್ಹಾ.. ಮಗನೇ, ನೀನು ಅರಮನೆಯಲ್ಲಿ ವಾಸಿಸುತ್ತೀಯ, ನಾನು ಬಾಡಿಗೆಗೆ ವಾಸಿಸುತ್ತಿದ್ದೇನೆ. ಎರಡು ದಿನಗಳಲ್ಲಿ ಮನೆ ಖಾಲಿ ಮಾಡಬೇಕೆಂದು ಮಾಲೀಕರು ನೋಟಿಸ್ ನೀಡಿದ್ದಾರೆ. ಮನೆ ಹುಡುಕಲು ಹೋಗಿದ್ದೆ ಎಂದಿದ್ದರಂತೆ.

ಒಂದು ದಿನ ನೆಹ್ರಾ 3 ಗಂಟೆ ತಡವಾಗಿ ಅಭ್ಯಾಸಕ್ಕೆ ಬಂದಿದ್ದರು. ಅಲ್ಲಿಗೆ ಬಂದ ನೆಹ್ರಾ ತಮ್ಮ ಪ್ಯಾಂಟ್ ಜೇಬಿನಿಂದ ಕೀಲಿ ತೆಗೆದು ಸಿನ್ಹಾ ಕೈಗೆ ನೀಡಿದ್ದಾರೆ. ಬಾಡಿಗೆ ಮನೆಯಲ್ಲಿರುವ ಗುರುದೇವರು ನೀವು. ಮನೆ ಖರೀದಿಸಲು ಕನಿಷ್ಠ ಮೂರು ದಿನ ಬೇಕಾಗುತ್ತದೆ. ಇದು ನಿಮ್ಮ ಹೊಸ ಮನೆ. ನವೀಕರಣ ಕೆಲಸ ನಡೆಯುತ್ತಿದೆ. ಮುಂದಿನ 10 ದಿನದಲ್ಲಿ ನೀವು ಸ್ಥಳಾಂತರಗೊಳ್ಳಬಹುದು ಅಂದ್ರಂತೆ ನೆಹ್ರಾ. ಇದೇ ವೇಳೆ ನೆಹ್ರಾ, ಟೀಂ ಇಂಡಿಯಾಗೆ ಎಂಟ್ರಿಯಾಗಲು ಸಿನ್ಹಾ ಮಾಡಿದ ಸಹಾಯವನ್ನು ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ: DelhiElectionResults: ಎಎಪಿಗೆ ಆಘಾತದ ಮೇಲೆ ಆಘಾತ; ಕೇಜ್ರಿವಾಲ್‌ ಗೆಲ್ಲುವ ಸಾಧ್ಯತೆ ಎಷ್ಟಿದೆ?

ಯಾರು ತಾರಕ್ ಸಿನ್ಹಾ?

ಭಾರತದ ಅತ್ಯುತ್ತಮ ಕೋಚ್​​ಗಳಲ್ಲಿ ತಾರಕ್ ಸಿನ್ಹಾ ಕೂಡ ಒಬ್ಬರಾಗಿದ್ದರು. 1969ರಲ್ಲಿ ಇವರು ದೆಹಲಿಯಲ್ಲಿ Sonnet Cricket Club ಕ್ರಿಕೆಟ್ ಹುಟ್ಟುಹಾಕಿದರು. ಅಲ್ಲಿಂದ ಟೀಂ ಇಂಡಿಯಾ ಕ್ರಿಕೆಟ್​ಗೆ ಅದ್ಭುತ ಪ್ರತಿಭೆಗಳನ್ನು ಪರಿಚಯಿಸುತ್ತ ಬಂದಿದ್ದರು. ಆಶಿಶ್ ನೆಹ್ರಾ, ಆಕಾಶ್ ಚೋಪ್ರಾ, ಅಜುಂಮ್ ಚೋಪ್ರಾ, ಶಿಖರ್ ಧವನ್ ಕೂಡ ಇವರ ಗರಡಿಯಲ್ಲಿ ಬೆಳೆದವರು.

ವಿಕೆಟ್ ಕೀಪರ್ ರಿಷಬ್ ಪಂತ್ ಕೂಡ ಸಿನ್ಹಾ ಅವರ ಶಿಷ್ಯರಾಗಿದ್ದಾರೆ. ಸಿನ್ಹಾ ಅವರು 2001, 2002ರಲ್ಲಿ ಭಾರತದ ಮಹಿಳಾ ತಂಡದ ಕೋಚ್ ಆಗಿ ಸೇವೆ ಸಲ್ಲಿಸಿದ್ದಾರೆ. ಧ್ರೋಣಾಚಾರ್ಯ ಪುರಸ್ಕಾರಕ್ಕೂ ಭಾಜನರಾಗಿದ್ದರು. 2018ರಲ್ಲಿ ಇವರು ಧ್ರೋಣಾಚಾರ್ಯ ಪ್ರಶಸ್ತಿ ಸ್ವೀಕರಿಸಿದ್ದರು. 201ರಲ್ಲಿ ಕ್ಯಾನ್ಸರ್​ನಿಂದ ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ: 10, 20 ಕೋಟಿ ಅಲ್ಲವೇ ಅಲ್ಲ.. ಧನಶ್ರೀಗೆ ಚಹಾಲ್ ಕೊಟ್ರಂತೆ ಕೋಟಿ ಕೋಟಿ ಹಣ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment