/newsfirstlive-kannada/media/post_attachments/wp-content/uploads/2024/08/GAMBHIR.jpg)
ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಭಾರೀ ಮುಖಭಂಗ ಅನುಭವಿಸಿದೆ. ಸುಲಭವಾಗಿ ಗೆಲ್ಲಲು ಅವಕಾಶವಿದ್ದ ಮೊದಲ ಪಂದ್ಯವನ್ನು ಟೀಂ ಇಂಡಿಯಾ ಕೈಯಾರೆ ಕೈಚೆಲ್ಲಿದೆ. ಈ ಬೆನ್ನಲ್ಲೇ ಟೀಂ ಇಂಡಿಯಾ ಕ್ರಿಕೆಟ್ ಅಭಿಮಾನಿಗಳು ಕೋಚ್ ಗೌತಮ್ ಗಂಭೀರ್ ನಡೆಯನ್ನು ಪ್ರಶ್ನಿಸುತ್ತಿದ್ದಾರೆ.
ಇದೀಗ ಟೀಂ ಇಂಡಿಯಾದ ಮಾಜಿ ಬೌಲರ್​​​ ಆಶಿಶ್ ನೆಹ್ರಾ, ಗಂಭೀರ್ ತಂತ್ರದ ವಿರುದ್ಧ ಹರಿಹಾಯ್ದಿದ್ದಾರೆ. ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ತಂತ್ರವು ಸರಿಯಾಗಿಲ್ಲ. ಈ ಸರಣಿಗೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಬದಲಿಗೆ ಬೇರೆ ಆಟಗಾರರನ್ನೇ ಬಳಸಿಕೊಳ್ಳಬೇಕಿತ್ತು. ಇಬ್ಬರು ಆಟಗಾರರಿಗೆ ವಿಶ್ರಾಂತಿ ನೀಡಬೇಕಿತ್ತು ಎಂದಿದ್ದಾರೆ.
ಗೌತಮ್ ಗಂಭೀರ್ ಕೋಚ್ ಆಗಿ ಹೊಸಬರು. ಅವರು ಅನುಭವಿ ಆಟಗಾರರೊಂದಿಗೆ ಸ್ವಲ್ಪ ಸಮಯ ಕಳೆಯಲು ಬಯಸುತ್ತಾರೆ, ಆದರೆ ಈ ಸರಣಿಯಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಬೇಕಿತ್ತು ಎಂದು ನಾನು ನಂಬುತ್ತೇನೆ. ಈ ಇಬ್ಬರು ಆಟಗಾರರ ಜಾಗದಲ್ಲಿ ಬೇರೆಯವರನ್ನು ಆಡಿಸಬಹುದಿತ್ತು. ಗೌತಮ್ ಗಂಭೀರ್ ವಿದೇಶಿ ಕೋಚ್ ಅಲ್ಲ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯೊಂದಿಗೆ ಪರಿಪೂರ್ಣ ಸಮನ್ವಯ ರಚಿಸಲು ಬಯಸುತ್ತಾರೆ. ಇಬ್ಬರು ಹಿರಿಯ ಆಟಗಾರರ ಜಾಗದಲ್ಲಿ ಯುವ ಆಟಗಾರರಿಗೆ ಅವಕಾಶ ಸಿಗಬೇಕಿತ್ತು ಎಂದಿದ್ದಾರೆ.
ವಾಸ್ತವವಾಗಿ ರೋಹಿತ್ ಶರ್ಮಾ ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ವಿರಾಟ್ ಕೊಹ್ಲಿ ರನ್​ ಗಳಿಸಲು ಕಷ್ಟಪಡ್ತಿದ್ದಾರೆ. ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ 47 ಎಸೆತಗಳಲ್ಲಿ 58 ರನ್ ಗಳಿಸಿದ್ದರು. ವಿರಾಟ್ ಕೊಹ್ಲಿ 32 ಎಸೆತಗಳಲ್ಲಿ 24 ರನ್ ಗಳಿಸಿದ್ದರು. ಎರಡನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ 44 ಎಸೆತಗಳಲ್ಲಿ 64 ರನ್ ಗಳಿಸಿದ್ದರು. ಕೊಹ್ಲಿ 19 ಎಸೆತಗಳಲ್ಲಿ 14 ರನ್ ಗಳಿಸಿ ಔಟ್ ಆಗಿದ್ದಾರೆ. ಮೊದಲ ಏಕದಿನ ಪಂದ್ಯ ಟೈ ಆದರೆ, ಎರಡನೇ ಪಂದ್ಯದಲ್ಲಿ 32 ರನ್‌ಗಳ ಅಂತರದಿಂದ ಭಾರತ ಸೋತಿದೆ.
ಇದನ್ನೂ ಓದಿ:ಟಿವಿ ಲೈವ್​ನಲ್ಲೇ ಚಪ್ಪಲಿಯಿಂದ ಹೊಡೆದ ಸ್ಟಾರ್ ನಟಿ ಲಾವಣ್ಯ; ಅಸಲಿಗೆ ಆಗಿದ್ದೇನು..?
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್