ಕೇವಲ 23 ವಯಸ್ಸು, ಮೊದಲ ಯತ್ನದಲ್ಲೇ IAS ಪಾಸ್​.. ಎಸ್​ಐ ಮಗನ ಯಶಸ್ಸಿನ ಗುಟ್ಟೇನು?

author-image
Bheemappa
Updated On
ಕೇವಲ 23 ವಯಸ್ಸು, ಮೊದಲ ಯತ್ನದಲ್ಲೇ IAS ಪಾಸ್​.. ಎಸ್​ಐ ಮಗನ ಯಶಸ್ಸಿನ ಗುಟ್ಟೇನು?
Advertisment
  • UPSC ಪರೀಕ್ಷೆ ಮೊದಲ ಯತ್ನದಲ್ಲೇ ಪಾಸ್​ ಮಾಡೋದು ಸುಲಭವಲ್ಲ
  • ಎಎಸ್​ಐ ಪುತ್ರನ ಯುಪಿಎಸ್​​ಸಿಗಾಗಿ ಮಾಡಿದ ಟೈಮ್​ಟೇಬಲ್ ಹೇಗಿತ್ತು?
  • 23ನೇ ವಯಸ್ಸಿನಲ್ಲೇ ದೇಶದ ಉನ್ನತ ಹುದ್ದೆಯ ಅರ್ಹತೆ ಪಡೆದ ಆಶಿಶ್

ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‍ಸಿ)ವು 2024ನೇ ಸಾಲಿನ ನಾಗರೀಕ ಸೇವಾ ಪರೀಕ್ಷೆಯ (ಸಿಎಸ್‍ಇ) ಫಲಿತಾಂಶವನ್ನು ಏಪ್ರಿಲ್​ 22 ರಂದು ಬಿಡುಗಡೆ ಮಾಡಿದೆ. ಪರೀಕ್ಷೆಯಲ್ಲಿ 1,009 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದು ಇದರಲ್ಲಿ ಇಡೀ ದೇಶಕ್ಕೆ ಶಕ್ತಿ ದುಬೆ ಪ್ರಥಮ ಸ್ಥಾನ ಪಡೆದಿದ್ದಾರೆ. ಇದರ ಜೊತೆಗೆ ಸಹಾಯಕ ಸಬ್ ಇನ್​​ಸ್ಪೆಕ್ಟರ್ (ಎಎಸ್‌ಐ)ರೊಬ್ಬರ ಮಗ 23ನೇ ವಯಸ್ಸಿನಲ್ಲಿ, ಮೊದಲ ಯತ್ನದಲ್ಲೇ ಯುಪಿಎಸ್​​ಸಿ ಪರೀಕ್ಷೆಯನ್ನ ಪಾಸ್ ಮಾಡಿ, ಪೋಷಕರಿಗೆ ಘನತೆ ತಂದಿದ್ದಾರೆ.

publive-image

ಗ್ವಾಲಿಯರ್​ನ ಎಎಸ್‌ಐ ನರೇಶ್ ರಘುವಂಶಿ ಅವರ ಮಗ ಆಶಿಶ್ ರಘುವಂಶಿ 2024ರ ನಾಗರಿಕ ಸೇವಾ ಪರೀಕ್ಷೆಯಲ್ಲಿ 202ನೇ ಶ್ರೇಣಿ ಪಡೆದಿದ್ದಾರೆ. ಇದರಲ್ಲಿ ವಿಶೇಷ ಎಂದರೆ ಆಶಿಶ್ 23ನೇ ವಯಸ್ಸಿಯಲ್ಲಿ, ಯುಪಿಎಸ್​ಸಿ ಪರೀಕ್ಷೆಯ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗಿರುವುದು ಅವರ ಓದಿನ ಕಡೆಗೆ ಇರುವ ಆಸಕ್ತಿ ತೋರಿಸುತ್ತದೆ. ಯುಪಿಎಸ್​ಸಿ ಪರೀಕ್ಷೆಗಾಗಿಯೇ ಓದಲು ಆರಂಭಿಸಿದ್ದ ಆಶಿಶ್ ರಘುವಂಶಿ, ವಿಶೇಷವಾದ ಟೈಮ್ ಟೇಬಲ್​ ಸಿದ್ಧ ಪಡಿಸಿ ಅದರಂತೆ ಸ್ಟಡಿ ಮಾಡಿದ್ದರು. ಹೀಗಾಗಿಯೇ ದೇಶದ ಉನ್ನತ ಹುದ್ದೆಗೆ ಇಂದು ಅರ್ಹತೆ ಪಡೆದುಕೊಂಡಿದ್ದಾರೆ.

ಮಧ್ಯಪ್ರದೇಶದ ಅಶೋಕನಗರದ ಡಂಗೌರಾ ಗ್ರಾಮದ ಆಶಿಶ್​ ರಘುವಂಶಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ನಗರದಲ್ಲಿರುವ ತಾರಾ ಸದನ ಶಾಲೆಯಲ್ಲಿ ಮುಗಿಸಿದರು. ಆಶಿಶ್ ಬಾಲ್ಯದಿಂದಲೂ ಐಎಎಸ್​ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ದೇಶಕ್ಕೆ ಸೇವೆ ಸಲ್ಲಿಸಬೇಕೆಂದು ಬಯಸಿದ್ದರು. ಇದಕ್ಕಾಗಿ ಆಶಿಶ್​ ಪ್ರೌಢಶಾಲೆಯಿಂದ ತಯಾರಿ ನಡೆಸುತ್ತಿದ್ದರು ಎನ್ನಲಾಗಿದೆ. ಪಿಯುಸಿ ಮುಗಿದ ಮೇಲೆ ದೆಹಲಿಯ ವಿಶ್ವವಿದ್ಯಾಲಯದಲ್ಲಿ ಬಿ.ಕಾಮ್ ಪೂರ್ಣಗೊಳಿಸಿದ್ದರು ಅಷ್ಟೇ. ಇದಾದ ಮೇಲೆ ಉನ್ನತ ಪರೀಕ್ಷೆಗೆ ತಯಾರಿ ನಡೆಸಿದ್ದರು.

ಇದನ್ನೂ ಓದಿ:UPSC ಟಾಪರ್​ ಶಕ್ತಿ ದುಬೆ ಯಾರು.. ಇವರ ವಿದ್ಯಾಭ್ಯಾಸ ಹೇಗಿತ್ತು? ಸಾಧನೆಯ ಗುಟ್ಟೇನು?

publive-image

ಆಶಿಶ್ ರಘುವಂಶಿಯ ಐಎಎಸ್​ ಟೈಮ್​ಟೇಬಲ್ ಹೇಗಿತ್ತು?
ಯುಪಿಎಸ್​ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು ಎಂದರೆ ಸಾಮಾನ್ಯ ವಿಷಯವಲ್ಲ. ಓದಿನಲ್ಲಿ ತಪಸ್ಸು ಮಾಡಿ ಯಶಸ್ಸು ಗಳಿಸಬೇಕು. ಇದಕ್ಕೆ ಶ್ರಮ, ಶ್ರದ್ಧೆ, ಶಿಸ್ತು, ತಾಳ್ಮೆ, ಶಾಂತಿ ಎಲ್ಲವೂ ಒಟ್ಟುಗೂಡಬೇಕು. ಇದರಂತೆ ಆಶಿಶ್ ರಘುವಂಶಿ ಯುಪಿಎಸ್​ಸಿಗೆ ತಯಾರಿ ನಡೆಸಿದ್ದರು. ಹೀಗಾಗಿ ನಿತ್ಯ 8 ರಿಂದ 10 ಗಂಟೆಗಳವರೆಗೆ ನಿರಂತರವಾಗಿ ಓದುತ್ತಿದ್ದರು. ಸೋಶಿಯಲ್​ ಮೀಡಿಯಾದಿಂದ ಸಂಪೂರ್ಣವಾಗಿ ದೂರ ಇದ್ದರು. ಇನ್​​ಸ್ಟಾ, ಟ್ವಿಟರ್, ಫೇಸ್​ಬುಕ್​ ಇಂತಹವುಗಳನ್ನು ಬಳಕೆಯೇ ಮಾಡಿರಲಿಲ್ಲ. ಇದರಿಂದಾಗಿ ದೇಶದ ಅತ್ಯುನ್ನತ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲಿ 202ನೇ ಶ್ರೇಣಿಯಲ್ಲಿ ಪಾಸ್ ಆಗಿದ್ದಾರೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment