/newsfirstlive-kannada/media/post_attachments/wp-content/uploads/2025/02/ELAN-MUSK.jpg)
ಎಲಾನ್ ಮಸ್ಕ್ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ. ಇತ್ತೀಚೆಗೆ ಆತನೇ ಹೇಳಿಕೊಂಡಂತೆ ನನಗೆ ಹಲವಾರು ದೇಶದಲ್ಲಿ ಹಲವಾರು ಜೈವಿಕ ಮಕ್ಕಳು ಇದ್ದಾರೆ ಅಂತ ಹೇಳಿದ್ದರು. ವಿರ್ಯದಾನದ ಮೂಲಕ ನಾನು ಹಲವು ಮಕ್ಕಳಿಗೆ ಜನ್ಮ ನೀಡಿದ್ದೇನೆ ಎಂದು ಕೂಡ ಹೇಳಿದ್ದರು. ಈಗ ಖ್ಯಾತ ಇನ್ಫ್ಲೂಯೆನ್ಸರ್ ಹಾಗೂ ಅಂಕಣಕಾರ್ತಿ ಆಶ್ಲೇಯ್ ಎಸ್ಟಿ ಕ್ಲೇರ್, ನಾನು ಎಲಾನ್ ಮಸ್ಕ್ನ 13ನೇ ಮಗುವಿಗೆ ಜನ್ಮ ನೀಡಿದ್ದೇನೆ ಎಂದು ಹೇಳಿ ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ.
ಇತ್ತೀಚೆಗೆ ಅಂದ್ರೆ ಶುಕ್ರವಾರದಂದು ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ರಿವೀಲ್ ಮಾಡಿರುವ ಆಶ್ಲೇಯ್ ಎಸ್ಟಿ ಕ್ಲೇರ್, ನಾನು ಇತ್ತೀಚೆಗೆ ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದೇನೆ ಅದರ ತಂದೆ ಎಲಾನ್ ಮಸ್ಕ್ ಎಂದು ಸುದ್ದಿಯನ್ನು ಹಂಚಿಕೊಂಡಿದ್ದಾರೆ.
Alea Iacta Est pic.twitter.com/gvVaFNTGqn
— Ashley St. Clair (@stclairashley)
Alea Iacta Est pic.twitter.com/gvVaFNTGqn
— Ashley St. Clair (@stclairashley) February 15, 2025
">February 15, 2025
ಐದು ತಿಂಗಳುಗಳ ಹಿಂದೆ ನಾನು ಮಗುವಿಗೆ ಜನ್ಮ ನೀಡಿದ್ದೆ ಮಗುವಿನ ಜನ್ಮದ ಖಾಸಗಿತನ ಹಾಗೂ ರಕ್ಷಣೆಗಾಗಿ ನಾನು ಇಲ್ಲಿಯವರೆಗೂ ನಾನು ಏನೂ ಹೇಳಿರಲಿಲ್ಲ ಈಗ ಹೇಳಬೇಕಾದ ಸಂದರ್ಭ ಬಂದಿದ್ದರಿಂದ ಹೇಳಿದ್ದೇನೆ ಎಂದು ಅವರು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.ಎಲಾನ್ ಮಸ್ಕ್ ಈ ಮಗುವಿನ ತಂದೆ ನಾನು ಈ ಹಿಂದೆ ಎಂದಿಗೂ ಕೂಡ ಇದನ್ನು ಹೇಳಿಕೊಂಡಿದ್ದಿಲ್ಲ ಕಾರಣ ಮಗುವಿನ ಖಾಸಗಿತನದ ಮೇಲೆ ಯಾವುದೇ ಪ್ರಭಾವ ಬೀರದಿರಲೆಂದು, ಆದರೆ ಈಗ ಹೇಳಿಕೊಂಡಿದ್ದೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಭಾರತದ ಈ ಜಾಗಗಳು ನಿಮಗೆ ಯುರೋಪ್ನಲ್ಲಿರುವ ಫೀಲ್ ಕೊಡುತ್ತವೆ.. ಎಲ್ಲಿವೆ ಈ ಜಾಗಗಳು? ಹೇಗಿವೆ?
ನಾನು ನನ್ನ ಮಗುವನ್ನು ಸುರಕ್ಷಿತ ವಾತಾವರಣದಲ್ಲಿ ಬೆಳೆಯಲಿ ಎಂದು ಆಶಿಸುತ್ತೇನೆ. ಈ ಕಾರಣದಿಂದಾಗಿಯೇ ನಾನು ಮಾಧ್ಯಮಗಳನ್ನು ಆ ಮಗುವಿನ ಖಾಸಗಿತನಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳಿ ಎಂದು ಕೇಳಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ನಾನು ಎಲಾನ್ ಮಸ್ಕ್ನ 13ನೇ ಮಗುವಿಗೆ ಜನ್ಮ ನೀಡಿದ್ದೇನೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ