newsfirstkannada.com

VIDEO: ನಟಿ ರಾಧಿಕಾ ಪಂಡಿತ್​ ಬಗ್ಗೆ ಯಾರಿಗೂ ಗೊತ್ತಿಲ್ಲದ ವಿಚಾರ ಬಹಿರಂಗ; ಏನದು?

Share :

Published May 28, 2024 at 4:25pm

  ಕೊನೆಯ ಕ್ಷಣದವರೆಗೂ ನಮ್ಮ ಜೊತೆಗೆ ಇದ್ದಿದ್ದು ರಾಧಿಕಾ ಪಂಡಿತ್‌

  ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್ ಆಗುತ್ತಿದೆ ಈ ವಿಡಿಯೋ

  ರಾಧಿಕಾ ಪಂಡಿತ್‌ ಅವರ ಸಹಾಯಕ್ಕೆ ಮನಸೋತ ಅಭಿಮಾನಿಗಳು

ಸ್ಯಾಂಡಲ್‌ವುಡ್‌ ನಟಿ ರಾಧಿಕಾ ಪಂಡಿತ್‌ ಅವರು ಕನ್ನಡದ ಪ್ರತಿಭಾವಂತ ಕಲಾವಿದೆ. ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಿದ ತಮ್ಮ ಅಭಿನಯ ಸಾಮರ್ಥ್ಯದಿಂದಲೇ ಅಭಿಮಾನಿಗಳ ಮನಸ್ಸನ್ನು ಗೆದ್ದುಕೊಂಡಿದ್ದರು. ಆದರೆ ರಾಧಿಕಾ ಪಂಡಿತ್‌ ಅವರ ಬಗ್ಗೆ ಯಾರಿಗೂ ಗೊತ್ತಿರದ ವಿಚಾರವೊಂದನ್ನು ಅಶೋಕ್ ಕಶ್ಯಪ ಪತ್ನಿ ರೇಖಾರಾಣಿ ಬಹಿರಂಗ ಪಡಿಸಿದ್ದಾರೆ.

ಇದನ್ನೂ ಓದಿ: ‘ಚಂದ್ರಮುಖಿ ಪ್ರಾಣ ಸಖಿ’ ಸಿನಿಮಾ ನಿರ್ಮಾಪಕ ಸ್ವಾಗತ್​ ಬಾಬು ವಿಧಿವಶ

2014ರಲ್ಲಿ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಸಾಧಕರ ಸೀಟ್​ನಲ್ಲಿ ಕುಳಿತುಕೊಂಡಿದ್ದ ನಟಿ ರಾಧಿಕಾ ಪಂಡಿತ್ ಅವರ ಬಗ್ಗೆ ಕೆಲವೊಂದು ವಿಚಾರಗಳನ್ನು ನಿರ್ಮಾಪಕಿ ರೇಖಾರಾಣಿ ಬಿಚ್ಚಿಟ್ಟಿದ್ದಾರೆ. ಹೌದು, ನಟ ರಮೇಶ್​ ಅರವಿಂದ್ ನಿರೂಪಣೆಯಲ್ಲಿ ಮೂಡಿ ಬಂದಿದ್ದ ವೀಕೆಂಡ್ ವಿತ್ ರಮೇಶ್​ ಸೀಸನ್​ 1ಗೆ ಸ್ಯಾಂಡಲ್‌ವುಡ್‌ ನಟಿ ರಾಧಿಕಾ ಪಂಡಿತ್​ಗೆ ಸಾಧಕರ ಸೀಟ್​ನಲ್ಲಿ ಕುಳಿತುಕೊಂಡಿದ್ದರು. ಈ ವೇಳೆ ನಟಿ ರಾಧಿಕಾ ಪಂಡಿತ್​ ಅಶೋಕ್ ಕಶ್ಯಪ ಪತ್ನಿ ರೇಖಾರಾಣಿ ಅವರಿಗೆ ಸಹಾಯ ಮಾಡಿದ್ದು ಹೇಗೆ ಎಂಬುವುದರ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ. ಇದೇ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಈ ವಿಡಿಯೋ ನೋಡಿದ ಅದೆಷ್ಟೋ ಅಭಿಮಾನಿಗಳು ನಟಿ ರಾಧಿಕಾ ಪಂಡಿತ್‌ ಅವರ ಸಹಾಯಕ್ಕೆ ಮನಸೋತಿದ್ದಾರೆ.

2007ರಲ್ಲಿ ಅಶೋಕ್ ಕಶ್ಯಪ ನಿರ್ದೇಶನದ ‘ನಂದ ಗೋಕುಲ’ ಧಾರಾವಾಹಿಯಲ್ಲಿ ನಟಿಸಿದ್ದರು. ಈ ಸೀರಿಯಲ್‌ನಲ್ಲಿ ಅಡಿಷನ್ ಇಲ್ಲದೇ ಆಯ್ಕೆಯಾದ ನಟಿ ರಾಧಿಕಾ ಪಂಡಿತ್‌ ತಮ್ಮ ಅದ್ಭುತ ನಟನೆಯ ಮೂಲಕ ಸಾಕಷ್ಟು ಜನರ ಗಮನ ಸೆಳೆದರು. ಇದೇ ವಿಚಾರವಾಗಿ ಮಾತಾಡಿದ ರೇಖಾರಾಣಿ ಅವರು, ರಾಧಿಕಾ ಪಂಡಿತ್ ಹಳೆಯ ಋಣವನ್ನು ಸಂದಾಯ ಮಾಡಬೇಕಾಗಿದೆ. ಯಾವುದೇ ಧಾರಾವಾಹಿ ನಿರ್ಮಾಪಕರಾಗಲಿ, ದುಡ್ಡು, ಶ್ರಮ ಹಾಗೂ ಟ್ಯಾಲೆಟ್​ ಹಾಕುತ್ತಾರೆ. ಮುಖ್ಯವಾಗಿ ಜೀವನವನ್ನೇ ಅದಕ್ಕಾಗಿ ಮುಡಿಪಾಗಿ ಇಡುತ್ತಾರೆ. ಯಾವುದೇ ಒಬ್ಬ ಕಲಾವಿದ ಮಧ್ಯೆನೇ ಕೈ ಕೊಟ್ಟು ಹೋದರೇ ನಾವು ಮಣ್ಣು ಪಾಲಾಗುತ್ತೇವೆ. ತುಂಬಾ ಜನ ಆರ್ಟಿಸ್ಟ್​ಗಳಿಗೆ ಗೊತ್ತಿಲ್ಲ. ಅರ್ಧದಲ್ಲೇ ಬಿಟ್ಟು ಹೊರಟು ಹೋಗುತ್ತಾರೆ. ಆದರೆ ನಾನು ಧಾರಾವಾಹಿ ಮಾಡಬೇಕಾದರೇ ರಾಧಿಕಾಗೆ ಸಿನಿಮಾ ಆಫರ್​ಗಳು ಬಂದಿತ್ತು. ತುಂಬಾ ಒಳ್ಳೆ ಒಳ್ಳೆಯ ಸಿನಿಮಾ ಆಫರ್​ಗಳು ಬಂತು. ಆದರೆ ಈಕೆ ಹೋಗಲಿಲ್ಲ. ಇದರ ಜೊತೆಗೆ ಅಶೋಕ್ ಕಶ್ಯಪ್‌ ಅವರಿಗೆ ಬ್ಲಡ್ ಕ್ಯಾನ್ಸರ್‌ ಇದೆ ಅಂತ ಗೊತ್ತಾಯ್ತು. ಆದರೂ ಕೂಡ ಕಡೆಯ ದಿನದವರೆಗೂ, ಕೊನೆಯ ಕ್ಷಣದವರೆಗೂ ನಾವು ಸೀರಿಯಲ್​​ ಮಗಿಸುವವರೆಗೂ ಈಕೆ ನಮ್ಮ ಜೊತೆ ಇದಿದ್ದರಿಂದ ನಾನು ಸೀರಿಯಲ್​ಗೆ ಹಾಕಿದ್ದ ದುಡ್ಡು ವಾಪಸ್​ ಬಂತು. ನನಗೆ ಹೆಚ್ಚಿನ ಪ್ರಮಾಣದಲ್ಲಿ ಲಾಭ ತಂದುಕೊಟ್ಟಿದ್ದರಿಂದ ಆ ಹಣದಿಂದ ನಾನು ಅಶೋಕ್ ಕಶ್ಯಪ್‌ ಅವರನ್ನು ಉಳಿಸಿಕೊಳ್ಳುವುದಕ್ಕೆ ಆಯ್ತು. ನಿನಗೆ ಎಷ್ಟು ಥ್ಯಾಂಕ್ಸ್​​ ಹೇಳಿದ್ರೂ ಸಾಕಾಗಲ್ಲ. ಒಂದು ಆರ್ಟಿಸ್ಟ್​ ಮನೆ ಹಾಳು ಮಾಡಬಹುದು ಅಥವಾ ಉದ್ಧಾರ ಮಾಡ್ತಾರೆ. ನಿಮ್ಮಂತ ಆರ್ಟಿಸ್ಟ್​ಗಳು ಕರ್ನಾಟಕಕ್ಕೆ ಬೇಕು ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ನಟಿ ರಾಧಿಕಾ ಪಂಡಿತ್​ ಬಗ್ಗೆ ಯಾರಿಗೂ ಗೊತ್ತಿಲ್ಲದ ವಿಚಾರ ಬಹಿರಂಗ; ಏನದು?

https://newsfirstlive.com/wp-content/uploads/2024/05/radika-pandith3.jpg

Load More