/newsfirstlive-kannada/media/post_attachments/wp-content/uploads/2025/03/ashutosh_sharma.jpg)
ಗ್ರೇಟ್ ಫಿನಿಶರ್ ಅಶುತೋಷ್ ಶರ್ಮಾ ಬ್ಯಾಟಿಂಗ್ ಬಲದಿಂದ ಇಡೀ ತಂಡದ ದಿಕ್ಕನ್ನೇ ಬದಲಾಯಿಸುವ ಛಲದಂಕ. ಡೆಲ್ಲಿ ತಂಡವನ್ನು ಸೋಲಿನ ಸುಳಿಯಿಂದ ಪಾರು ಮಾಡಿ, ರೋಚಕ ಗೆಲುವು ತಂದು ಕೊಟ್ಟ ಬ್ಯಾಟರ್. ಕ್ರಿಕೆಟ್ ಜರ್ನಿ ಆರಂಭಿಸಿದ್ದ ಅಶುತೋಷ್, ನಿಜ ಜೀವನದಲ್ಲೂ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಆದರೆ ಅವರ ಕ್ರಿಕೆಟ್ ಗಾಢ್ ಫಾದರ್ ಯಾರೆಂದು ನೋಡುತ್ತ ಹೋದರೆ..
ಕೋಚ್ ಚಂದ್ರಕಾಂತ್ ಪಂಡಿತ್ ಆಗಮನದಿಂದ ಡಿಪ್ರೆಶನ್ಗೆ ಹೋಗಿದ್ದ ಅಶುತೋಷ್ ಶರ್ಮಾ ಅಂತಿಮವಾಗಿ ತವರಿನ ತಂಡವನ್ನೇ ಬಿಟ್ಟು ರೇಲ್ವೇಸ್ ಸೇರಿದ್ದರು. ಆಗ ಮೆಂಟರ್ ಆಗಿ ಕೈ ಹಿಡಿದವರು ಎಂದರೆ ಮಾಜಿ ಕ್ರಿಕೆಟರ್ ನಮನ್ ಓಜಾ. ಇವರು ಅಶುತೋಷ್ಗೆ ಬೆನ್ನುಲುಬಾಗಿ ನಿಂತರು. ಮುಂದೆ ಇವರ ಬ್ಯಾಟಿಂಗ್ ಪರ್ಫಾಮೆನ್ಸ್ ಚೆನ್ನಾಗಿದ್ದರಿಂದ ಪಂಜಾಬ್ ಕಿಂಗ್ಸ್ಗೆ ಎಂಟ್ರಿಕೊಟ್ಟರು. ಇದೇ ವೇಳೆ ಅಶುತೋಷ್ಗೆ ಗಾಢ್ ಫಾದರ್ ಆಗಿ ಶಿಖರ್ ಧವನ್ ಸಿಕ್ಕರು.
ಕಳೆದ ಸೀಸನ್ ಅಂದರೆ 2024ರಲ್ಲಿ ಪಂಜಾಬ್ ಕ್ಯಾಪ್ಟನ್ ಆಗಿದ್ದ ಶಿಖರ್ ಧವನ್ ಅವರು ಅಶುತೋಷ್ ಟ್ಯಾಲೆಂಟ್ ಗುರುತಿಸಿ ಬ್ಯಾಕ್ ಮಾಡಿದರು. ಇದು ಅವರ ಬದುಕಿನ ಬಹುದೊಡ್ಡ ಹೆಜ್ಜೆ ಆಯಿತು. ಹೇಗೆಂದರೆ ಸಿಕ್ಕ ಅವಕಾಶವನ್ನ ಎರಡೂ ಕೈಗಳಲ್ಲಿ ಬಾಚಿಕೊಂಡ ಬ್ಯಾಟರ್, ಮ್ಯಾಚ್ ವಿನ್ನರ್ ಆಗಿ ಹೊರಹೊಮ್ಮಿದರು. ಅಷ್ಟೇ ಅಲ್ಲ, ಅಶುತೋಷ್ ಬ್ಯಾಟಿಂಗ್ಗೆ ಕ್ರಿಕೆಟ್ ಲೋಕ ಸಲಾಂ ಎಂದಿತು.
ಇದನ್ನೂ ಓದಿ:ಚೆನ್ನೈ ಬತ್ತಳಿಕೆಯಲ್ಲಿ ಭಾರೀ ಬ್ರಹ್ಮಾಸ್ತ್ರ.. RCB ಮೇಲೆ ಪ್ರಯೋಗಿಸಲು ಧೋನಿ ಬಿಗ್ ಪ್ಲಾನ್!
ಲಕ್ನೋ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್ ಮಾಡುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಅಶುತೋಷ್ ಶರ್ಮಾ ಗೆಲ್ಲಿಸಿದರು. ಇದು ಅವರ ಜೀವನದ ಬಹುಮುಖ್ಯವಾದ ಪಂದ್ಯವಾಗಿತ್ತು. ಏಕೆಂದರೆ 210 ರನ್ಗಳ ಟಾರ್ಗೆಟ್ ಮಾಡಿದ್ದು ಯಾರೂ ಕೂಡ ಊಹಿಸಲಾರದ್ದು ಆಗಿತ್ತು. ಇನ್ನು ಪಂದ್ಯ ಗೆಲುವಿನ ಸಂಭ್ರಮದಲ್ಲಿ ಅಶುತೋಷ್ ಶರ್ಮಾ, ತನ್ನ ಗಾಢ್ ಫಾದರ್ ಶಿಖರ್ ಧವನ್ಗೆ ವಿಡಿಯೋ ಕಾಲ್ ಮಾಡಿ ಖುಷಿ ಹಂಚಿಕೊಂಡರು.
ಕಳೆದ ಬಾರಿ ಇವರ ಬ್ಯಾಟಿಂಗ್ ಅನ್ನು ಗಮನದಲ್ಲಿ ಇಟ್ಟುಕೊಂಡು ಡೆಲ್ಲಿ ಫ್ರಾಂಚೈಸಿ ಜಿದ್ದಿಗೆ ಬಿದ್ದು ಅಶುತೋಷ್ಗೆ 3.8 ಕೋಟಿ ಹಣ ಕೊಟ್ಟು ತಂಡಕ್ಕೆ ಸೇರಿಸಿಕೊಂಡಿತು. ಸದ್ಯ ಫ್ರಾಂಚೈಸಿ ಇಟ್ಟ ಭರವಸೆಯನ್ನ ಮೊದಲ ಪಂದ್ಯದಲ್ಲೇ ಉಳಿಸಿಕೊಂಡಿದ್ದಾರೆ. ಗ್ರೇಟ್ ಫಿನಿಶರ್ ಬ್ಯಾಟಿಂಗ್ ನೋಡಿ ಭಾರತ ತಂಡದಲ್ಲೂ ಅವಕಾಶ ಕೊಡಿ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಒಂದು ವೇಳೆ ಇದೇ ಬ್ಯಾಟಿಂಗ್ ಅಬ್ಬರ ಮುಂದುವರೆದ್ರೆ ಕಲ್ಲು-ಮುಳ್ಳಿನ ದಾರಿಯಲ್ಲಿ ಬಂದ ಈ ಛಲದಂಕನಿಗೆ ಬ್ಲ್ಯೂ ಜೆರ್ಸಿ ಧರಿಸೋದು ಪಕ್ಕಾ ಆಗುತ್ತೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ