/newsfirstlive-kannada/media/post_attachments/wp-content/uploads/2025/03/ashwani_kumar_MI.jpg)
ಮುಂಬೈ ಇಂಡಿಯನ್ಸ್ ಪರ ಡೆಬ್ಯೂ ಮಾಡಿರುವ ಅಶ್ವನಿ ಕುಮಾರ್ ಆಕ್ರಮಣದ ಬೌಲಿಂಗ್​ ದಾಳಿಗೆ ಕೋಲ್ಕತ್ತಾ ನೈಟ್ ರೈಡರ್ಸ್​ ಬ್ಯಾಟ್ಸ್​ಮನ್​ಗಳು ಕ್ಲೀನ್ ಬೋಲ್ಡ್​ ಆಗಿದ್ದಾರೆ. 3 ಓವರ್ ಮಾಡಿರುವ ಅಶ್ವನಿ ಕುಮಾರ್ ಅವರು ಚೊಚ್ಚಲ ಪಂದ್ಯದಲ್ಲೇ 4 ವಿಕೆಟ್ ಪಡೆದು ಸಂಭ್ರಮಿಸಿದ್ದಾರೆ. ಇದರಿಂದ ಕೆಕೆಆರ್​ 16.2 ಓವರ್​ನಲ್ಲೇ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು ಕೇವಲ 117 ರನ್​ಗಳ ಗುರಿ ನೀಡಿದೆ.
ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಅವರು ವಾಂಖೆಡೆಯಲ್ಲಿ ಟಾಸ್ ಗೆದ್ದು ಎದುರಾಳಿ ಕೆಕೆಆರ್ ಅನ್ನು ಬ್ಯಾಟಿಂಗ್​ಗೆ ಆಹ್ವಾನ ಮಾಡಿದರು. ನಾಯಕ ಪಾಂಡ್ಯ ಯೋಜನೆಯಂತೆ ಕೆಕೆಆರ್ ಬ್ಯಾಟ್ಸ್​ಮನ್​ಗಳ ಮೇಲೆ ಮುಂಬೈ ಬೌಲರ್ಸ್​ ಸವಾರಿ ನಡೆಸಿದರು. ಓಪನರ್ ಸುನಿಲ್ ನರೈನ್​​ ಅವರನ್ನು ಡಕೌಟ್ ಮಾಡುವ ಮೂಲಕ ಬೋಲ್ಟ್​ ಮುಂಬೈಗೆ ಉತ್ತಮ ಬೌಲಿಂಗ್ ಆರಂಭ ಒದಗಿಸಿದರು. ನರೈನ್ ಬೆನ್ನಲ್ಲೇ ಡಿಕಾಕ್ ಕೂಡ ಕೇವಲ 1 ರನ್​ಗೆ ಯಂಗ್ ಬೌಲರ್​ ಅಶ್ವನಿ ಕುಮಾರ್​ಗೆ ಕ್ಯಾಚ್ ನೀಡಿ ಹೊರ ನಡೆದರು.
ಇದನ್ನೂ ಓದಿ: ಕುಂಭಮೇಳದ ವೈರಲ್ ಬ್ಯೂಟಿ ಮೊನಾಲಿಸಾಗೆ ಬಿಗ್ ಶಾಕ್.. ಸಿನಿಮಾ ಆಫರ್ ಕೊಟ್ಟಿದ್ದ ಡೈರೆಕ್ಟರ್ ಅರೆಸ್ಟ್​! ಯಾಕೆ?
/newsfirstlive-kannada/media/post_attachments/wp-content/uploads/2025/03/ashwani_kumar_MI_1.jpg)
ಇದಾದ ಮೇಲೆ 3ನೇಯವರಾಗಿ ಕ್ರೀಸ್​​ಗೆ ಆಗಮಿಸಿದ ಕೆಕೆಆರ್ ಕ್ಯಾಪ್ಟನ್​ ಅಜಿಂಕ್ಯಾ ರಹಾನೆಗೆ ಕೇವಲ 11 ರನ್​ಗೆ ಅಶ್ವನಿ ಕುಮಾರ್ ಪೆವಿಲಿಯನ್ ದಾರಿ ತೋರಿಸಿದರು. ರಿಂಕು ಸಿಂಗ್ 17 ರನ್​ ಗಳಿಸಿ ಆಡುವಾಗ ಅಶ್ವನಿ ಕುಮಾರ್ ಬೌಲಿಂಗ್​ನಲ್ಲಿ ಕ್ಯಾಚ್ ಕೊಟ್ಟು ಔಟ್ ಆದರು. ಇವರಾದ ಮೇಲೆ 19 ರನ್​ ಗಳಿಸಿ ಮನೀಶ್ ಪಾಂಡ್ಯ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಆದರೆ ಈ ವೇಳೆ ಬೌಲಿಂಗ್ ದಾಳಿಗೆ ಇಳಿದ ಅಶ್ವನಿ ಕುಮಾರ್, ಮನೀಶ್ ಪಾಂಡ್ಯ ಹಾಗೂ ಆ್ಯಂಡ್ರೆ ರಸೆಲ್ ಅವರನ್ನ ಕ್ಲೀನ್ ಬೋಲ್ಡ್ ಮಾಡಿ ಸಂಭ್ರಮಿಸಿದರು.
ಚೊಚ್ಚಲ ಪಂದ್ಯದಲ್ಲೇ ಅಶ್ವನಿ ಕುಮಾರ್ ಪ್ರಮುಖವಾದ 4 ವಿಕೆಟ್ ಕಬಳಿಸಿ ಫುಲ್ ಖುಷಿಯಾಗಿದ್ದಾರೆ. ದೀಪಕ್ ಚಹಾರ್ 2 ವಿಕೆಟ್ ಸೇರಿ ಉಳಿದ ನಾಲ್ವರು ಬೌಲರ್ಸ್ ತಲಾ ಒಂದೊಂದು ವಿಕೆಟ್ ಪಡೆದರು. ಕೋಲ್ಕತ್ತಾ ನೈಟ್​ ರೈಡರ್ಸ್​ ಪರ ಅಂಗ್‌ಕ್ರಿಶ್ ರಘುವಂಶಿ ಅವರ 26 ರನ್​ ಬಿಟ್ಟರೇ ಉಳಿದ ಯಾವ ಬ್ಯಾಟರ್ ಕೂಡ ಈ ಗಡಿ ದಾಟಲಿಲ್ಲ. ಹೀಗಾಗಿ ಕೆಕೆಆರ್ 16.2 ಓವರ್​ನಲ್ಲಿ ಆಲೌಟ್ ಆಗಿ ಕೇವಲ 117 ರನ್​ಗಳ ಟಾರ್ಗೆಟ್ ನೀಡಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
 Follow Us