/newsfirstlive-kannada/media/post_attachments/wp-content/uploads/2024/12/ASHWIN-4.jpg)
- ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್ಬೈ ಹೇಳಿದ ಅಶ್ವಿನ್
- ಗಬ್ಬಾ ಟೆಸ್ಟ್ ಡ್ರಾ ಆಗ್ತಿದ್ದಂತೆ ನಿವೃತ್ತಿ ಘೋಷಿಸಿದ ಅಶ್ವಿನ್
- ಟೀಂ ಇಂಡಿಯಾಗೆ ದೊಡ್ಡ ಆಘಾತ ನೀಡಿದ ಅಶ್ವಿನ್
ಭಾರತದ ಲೆಜೆಂಡರಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬ್ರಿಸ್ಬೇನ್ ಟೆಸ್ಟ್ ಮಳೆಯಿಂದಾಗಿ ಡ್ರಾ ಎಂದು ಘೋಷಣೆ ಆಯ್ತು. ಬೆನ್ನಲ್ಲೇ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯುತ್ತಿರುವುದಾಗಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಅಶ್ವಿನ್ ಹೇಳಿದ್ದೇನು..?
ನನ್ನ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಇಂದು ಕೊನೆಯ ದಿನ. ಭಾರತೀಯ ಕ್ರಿಕೆಟ್ ಆಟಗಾರನಾಗಿ ಇದು ನನ್ನ ಕೊನೆಯ ದಿನ. ನನ್ನಲ್ಲಿ ಇನ್ನೂ ಕ್ರಿಕೆಟಿಗನ ಕುರುಹುಗಳು ಉಳಿದಿವೆ. ಸ್ಕಿಲ್ಸ್ ಕ್ಲಬ್‌ನಲ್ಲಿ ಇದು ಕೊನೆಯ ದಿನವಷ್ಟೇ. ಈ ನನ್ನ ಸುದೀರ್ಘ ಜರ್ನಿಯಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ಇತರೆ ಎಲ್ಲಾ ಸಹ ಆಟಗಾರ ಜೊತೆಗಿನ ಸುದೀರ್ಘ ಪ್ರಯಾಣವನ್ನು ಆನಂದಿಸುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ:Ashwin: ಪದೇ ಪದೆ ಬೆಂಚ್ ಕಾಯಿಸ್ತಿದ್ದ ಕ್ಯಾಪ್ಟನ್, ಕೋಚ್ -ಅಶ್ವಿನ್ ದಿಢೀರ್ ನಿವೃತ್ತಿಗೆ ಅಸಲಿ ಕಾರಣ ಇಲ್ಲಿದೆ..!
ಅಶ್ವಿನ್ ಸಾಧನೆ ಏನು..?
ನಿವೃತ್ತಿ ಘೋಷಣೆಗೂ ಮೊದಲೇ ಅಶ್ವಿನ್ ವಿಚಾರ ಕ್ರಿಕೆಟ್ ಅಂಗಳದಲ್ಲಿ ಗುಲ್ ಎದ್ದಿತ್ತು. 38 ವರ್ಷದ ಸ್ಪಿನ್ ಮಾಂತ್ರಿಕ ವಿಕೆಟ್ ಉರಳಿಸುವುದರಲ್ಲಿ ಎರಡನೇ ಲೀಡಿಂಗ್ ಬೌಲ್ರ್ ಆಗಿದ್ದರು. ನವೆಂಬರ್ 6 2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ದೆಹಲಿಯಲ್ಲಿ ನಡೆದ ಟೆಸ್ಟ್ ಮ್ಯಾಚ್ ಮೂಲಕ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್ ಅಂಗಳಕ್ಕೆ ಪದಾರ್ಪಣೆ ಮಾಡಿದ್ದರು. ಒಟ್ಟು 106 ಟೆಸ್ಟ್ ಮ್ಯಾಚ್​ಗಳನ್ನು ಆಡಿರುವ ಅಶ್ವಿನ್ ಒಟ್ಟು 537 ವಿಕೆಟ್​ಗಳನ್ನು ಕಬಳಿಸಿದ್ದರು. ಐದು ದಿನದ ಟೆಸ್ಟ್ ಮಾದರಿಯ ಕ್ರಿಕೆಟ್​ನಲ್ಲಿ ಕುಂಬ್ಳೆ ಈ ಹಿಂದೆ 619 ವಿಕೆಟ್​ಗಳನ್ನು ಉರುಳಿಸಿ ಸಾಧನೆ ಮಾಡಿದ್ದರು.
ಅಶ್ವಿನ್ ಒಟ್ಟು 41ವಿಶ್ವ ಚಾಂಪಿಯನ್​​ಶಿಪ್ ಮ್ಯಾಚ್​ಗಳನ್ನು ಆಡಿದ್ದು 195 ವಿಕೆಟ್​ಗಳನ್ನು ಪಡೆದಿದ್ದಾರೆ. ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಆಟಗಾರರಾಗಿ ಅಶ್ವಿನ್ ದಾಖಲೆ ಬರೆದಿದ್ದಾರೆ. ಟೆಸ್ಟ್ ಕ್ರಿಕಟ್ ಆಚೆ 116 ಏಕ ದಿನ ಪಂದ್ಯಗಳನ್ನು ಅಶ್ವಿನ್ ಆಡಿದ್ದಾರೆ ಹಾಗೂ 65 ಟಿ20 ಪಂದ್ಯಗಳನ್ನು ಆಡಿದ್ದು ತಲಾ 156 ಮತ್ತು 72 ವಿಕೆಟ್​ಗಳನ್ನು ಕಬಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ