newsfirstkannada.com

ಅಶ್ವಿನ್​​ಗೆ ಅನ್ಯಾಯ -ಕೊಹ್ಲಿ ಕುರಿತ ಹೇಳಿಕೆ ಬೆನ್ನಲ್ಲೇ ಎಬಿಡಿಯಿಂದ ಮತ್ತೊಂದು ಸ್ಫೋಟಕ ಸ್ಟೇಟ್​​ಮೆಂಟ್..!

Share :

Published February 25, 2024 at 11:30am

  ಅಶ್ವಿನ್​ ಬಗ್ಗೆ ಲೆಜೆಂಡರಿ ಎಬಿ ಡಿವಿಲಿಯರ್ಸ್ ಏನೆಂದು ಹೇಳಿದ್ದಾರೆ?

  ರೋಹಿತ್ ಬದಲಿಗೆ ಅಶ್ವಿನ್​​ಗೆ ಟೆಸ್ಟ್ ನಾಯಕರನ್ನಾಗಿ ಮಾಡಬೇಕಿತ್ತು

  ತಂಡ ಮುನ್ನಡೆಸುವ ಹಾಗೂ ಮಾರ್ಗದರ್ಶನದ ಕಲೆ ಅಶ್ವಿನ್​ ಬಳಿ ಇದೆ

ಟೀಮ್ ಇಂಡಿಯಾದ ಸಕ್ಸ​ಸ್​ನಲ್ಲಿ ಅಶ್ವಿನ್, ಬಹುಮುಖ್ಯ ಪಾತ್ರ ವಹಿಸಿದ್ದಾರೆ ಅನ್ನೋದು ಓಪನ್​ ಸೀಕ್ರೆಟ್​. ಆದ್ರೆ, ಇಂಥಾ ಅಶ್ವಿನ್​ಗೆ ಆಗಿದ್ದು ಅಪಮಾನಾವ?. ಮ್ಯಾಚ್ ವಿನ್ನರ್ ಪ್ಲೇಯರ್ ಆಗಿದ್ರೂ, ಮಾಡ್ರನ್ ಡೇ ಲೆಜೆಂಡ್ ಆಗಿದ್ರೂ, ಟೀಮ್ ಇಂಡಿಯಾದಲ್ಲಿ ಮನ್ನಣೆ ಸಿಗಲಿಲ್ವಾ?. ಹೀಗೋದು ಚರ್ಚೆ ನಡೀತಿದೆ. ಅದ್ಯಾಕೆ ಈ ಚರ್ಚೆ ಅಂತೀರಾ?.

ರವಿಚಂದ್ರನ್ ಅಶ್ವಿನ್.. ಟೀಮ್ ಇಂಡಿಯಾದ ಸ್ಟಾರ್ ಬೌಲರ್. ಚೆಂಡನ್ನ ಬುಗರಿಯಂತೆ ತಿರುಗಿಸಿ ಬ್ಯಾಟ್ಸ್​ಮನ್​ಗಳ ಗಿರಗಿಟ್ಲೆ ಆಡಿಸೋ ಆಫ್ ಸ್ಪಿನ್ನರ್. ಏಕಾಂಗಿಯಾಗಿ ಹಲವು ಪಂದ್ಯಗಳನ್ನ ಗೆಲ್ಲಿಸಿಕೊಟ್ಟ ಅಪದ್ಭಾಂದವ. 36ರ ವಯಸ್ಸಲ್ಲೂ ಶರವೇಗದಲ್ಲಿ ದಾಖಲೆಗಳನ್ನ ಧೂಳೀಪಟ ಮಾಡ್ತಿರುವ ಮಾಡ್ರನ್ ಡೇ ದಿಗ್ಗಜ. 500 ವಿಕೆಟ್ ಸಾಧನೆಗೈದ ಛಲದಂಕ ಮಲ್ಲ. ಸದ್ಯ ಇಂಗ್ಲೆಂಡ್‌ ಟೆಸ್ಟ್ ಸರಣಿಯನ್ನಾತ್ತಿರುವ ಅಶ್ವಿನ್, ಇತ್ತಿಚೆಗಷ್ಟೇ ಟೆಸ್ಟ್ ಕರಿಯರ್​ನಲ್ಲಿ 500 ವಿಕೆಟ್‌ ಉರುಳಿಸಿದ ಸಾಧನೆ ಮಾಡಿದ್ದಾರೆ. ಇದಕ್ಕಾಗಿ ಪ್ರಶಂಸೆಗಳ ಸುರಿಮಳೆ ವ್ಯಕ್ತವಾಗಿದೆ. ಆದ್ರೆ, ಇಷ್ಟೆಲ್ಲ ಸಾಧನೆ ಮಾಡಿದ ಅಶ್ವಿನ್​​​ಗೆ ಟೀಮ್ ಇಂಡಿಯಾದಿಂದ ಆಗಿರೋದು ಮಾತ್ರ ಅನ್ಯಾಯವಂತೆ.

ಅಶ್ವಿನ್​, ಟೀಮ್ ಇಂಡಿಯಾ ಪರ 3 ಮಾದರಿಯಲ್ಲಿ ಕಣಕ್ಕಿಳಿಯುತ್ತಿದ್ದ ಸ್ಪಿನ್ ಮಾಂತ್ರಿಕ. ಎಲ್ಲ ಫಾರ್ಮೆಟ್​ನಲ್ಲೂ ತನ್ನದೇ ಚಾಪು ಮೂಡಿಸಿದ್ದ ಅಶ್ವಿನ್, ತನ್ನ ಸ್ಪಿನ್ ಮ್ಯಾಜಿಕ್​ನಿಂದ ಅಲ್ಲ. ಬ್ಯಾಟಿಂಗ್​ನಿಂದಲೂ ಪಂದ್ಯಗಳನ್ನ ಗೆಲ್ಲಿಸಿಕೊಟ್ಟಿದ್ದಾರೆ. ಮಾಡ್ರನ್ ಡೇ ಲೆಜೆಂಡ್​ ಆಗಿದ್ದಾರೆ. ಹೀಗಾದ್ರೂ ಅಶ್ವಿನ್​, ಟೀಮ್ ಇಂಡಿಯಾದಲ್ಲಿ ಸೂಕ್ತ ಸ್ಥಾನಮಾನವೇ ಸಿಕ್ಕಿಲ್ಲ. ನಾಯಕತ್ವದ ಸ್ಥಾನಕ್ಕೆ ಬೆಸ್ಟ್​ ಚಾಯ್ಸ್​ ಆಗಿದ್ದರೂ, ಕ್ಯಾಪ್ಟನ್ಸಿ ಪಟ್ಟ ದಕ್ಕಲಿಲ್ಲ.

2 ವರ್ಷಗಳ ಹಿಂದಿತ್ತು ನಾಯಕನಾಗುವ ಚಾನ್ಸ್​!

ಅಶ್ವಿನ್ ಮೂರು ಫಾರ್ಮೆಟ್​ನಲ್ಲಿ ಆಡಿದ್ರೂ, ಅತಿ ಹೆಚ್ಚು ಪಂದ್ಯಗಳನ್ನಾಡಿದ್ದು, ಸಕ್ಸಸ್​ ಸಿಕ್ಕಿದ್ದು ಮಾತ್ರ ಟೆಸ್ಟ್​ ಕ್ರಿಕೆಟ್​ನಲ್ಲಿ. ಸ್ಪಿನ್​ ಮ್ಯಾಜಿಕ್​ ಮಾಡೋದು ಮಾತ್ರವಲ್ಲ, ಅತ್ಯತ್ತಮ ಲೀಡರ್ ಆ್ಯಂಡ್ ಗೇಮ್ ರೀಡಿಂಗ್​ನಲ್ಲೂ ಪಂಟರ್​. ಹೀಗಾಗಿ ಟೆಸ್ಟ್​ ಕ್ರಿಕೆಟ್​ನಲ್ಲಿ ನಾಯಕನಾಗುವ ಎಲ್ಲ ಲಕ್ಷಣಗಳಿತ್ತು. ಆದ್ರೆ, ಅದು ಕೈಗೆಟುಕಲೇ ಇಲ್ಲ. ಈ ಬಗ್ಗೆ ತುಟಿ ಬಿಚ್ಚಿರುವ ಲಿಟ್ಲ್​ ಮಾಸ್ಟರ್​ ಸುನಿಲ್​ ಗವಾಸ್ಕರ್, ಅಶ್ವಿನ್​​ಗೆ ನಾಯಕತ್ವ ನೀಡದಿರುವ ಬಗ್ಗೆ ಬೇಸರವನ್ನ ಹೊರಹಾಕಿದ್ದಾರೆ.

ಟೆಸ್ಟ್ ನಾಯಕ ಗೌರವ ಸಿಗಬೇಕಿತ್ತು!

2 ವರ್ಷಗಳ ಹಿಂದೆ ವಿರಾಟ್ ಕೊಹ್ಲಿ ನಾಯಕತ್ವ ತೊರೆದ, ನಂತರ ಅಶ್ವಿನ್​ರನ್ನ ನಾಯಕನನ್ನಾಗಿ ಮಾಡಬೇಕಿತ್ತು. ಅಶ್ವಿನ್ ಒಬ್ಬ ಅದ್ಭುತ ಆಟಗಾರ. ಸಂಪೂರ್ಣ ಜವಾಬ್ದಾರಿಯೊಂದಿಗೆ ನಾಯಕನ ಪಾತ್ರ ನಿರ್ವಹಿಸುವ ಸಾಮರ್ಥ್ಯ ಇತ್ತು. ರೋಹಿತ್​ರನ್ನ 3 ಸ್ವರೂಪಗಳ ನಾಯಕರನ್ನಾಗಿ ಮಾಡಬಾರದಿತ್ತು. ಇದರಿಂದಾಗಿ ರೋಹಿತ್ ಒತ್ತಡದಲ್ಲಿದ್ದಾರೆ. ರೋಹಿತ್ ಬದಲಿಗೆ ಅಶ್ವಿನ್​​ಗೆ ಟೆಸ್ಟ್ ನಾಯಕರನ್ನಾಗಿ ಮಾಡಬೇಕಿತ್ತು.

ಸುನಿಲ್ ಗವಾಸ್ಕರ್, ಮಾಜಿ ಕ್ರಿಕೆಟರ್​

ಆ ಒಂದು ಕಾರಣಕ್ಕಾಗಿಯೇ ಸಿಗಲಿಲ್ವಾ ನಾಯಕತ್ವ..?

ಟೀಮ್ ಇಂಡಿಯಾ ಟೆಸ್ಟ್​ ತಂಡದಲ್ಲಿ ಮೋಸ್ಟ್​ ಎಕ್ಸ್​ಪೀರಿಯನ್ಸ್​ ಪ್ಲೇಯರ್ ಅಶ್ವಿನ್. ಸಹ ಆಟಗಾರರಿಗೆ ಬೆಂಬಲಕ್ಕೆ ನಿಲ್ಲುವ ಅಶ್ವಿನ್ ಯುವ ಆಟಗಾರರ ಪಾಲಿಗೆ ಮಾರ್ಗದರ್ಶಕರಾಗಿದ್ದಾರೆ. ನಾಯಕನಾಗಿ ತಂಡವನ್ನ ಮುನ್ನಡೆಸುವ ಸಾಮರ್ಥ್ಯವೂ ಇದೆ. ಆದ್ರೆ, ವಿದೇಶಿ ಪ್ರವಾಸಗಳು ಅಶ್ವಿನ್​ ನಾಯಕತ್ವ ಕನಸಿಗೆ ಹಿನ್ನಡೆಯಾದ್ವು. ಏಷ್ಯನ್​ ಕಂಡೀಷನ್ಸ್​ನಲ್ಲಿ ಪಸ್ಟ್ ಚಾಯ್ಸ್ ಪ್ಲೇಯರ್ ಆಗಿರುವ ಅಶ್ವಿನ್, SENA ರಾಷ್ಟ್ರಗಳಲ್ಲಿ ಬೆಂಚ್​ ಕಾಯ್ತಿದ್ದಾರೆ.

ಅಶ್ವಿನ್ ನಾಯಕತ್ವಕ್ಕೆ ಅಡ್ಡಿಯಾಯ್ತು!

ಅಶ್ವಿನ್ ಮೆದುಳು ಓವರ್ ಟೈಮ್ ಕೆಲಸ ಮಾಡುತ್ತದೆ. ಇದು ಇತರರಿಗಿಂತ ಹೆಚ್ಚಾಗಿ ಅಶ್ವಿನ್​ರನ್ನೇ ನಾಯಕತ್ವಕ್ಕೆ ಪರಿಗಣಿಸಲು ಆದ್ಯತೆ ನೀಡುತ್ತೆ. ಆದರೆ, ಕಳೆದ ಕೆಲವು ವರ್ಷಗಳಿಂದ ಅಶ್ವಿನ್​​​​​​ರನ್ನ ವಿದೇಶಿ ಟೆಸ್ಟ್‌ಗಳಲ್ಲಿ ಪರಿಗಣಿಸಲಾಗಿಲ್ಲ. ಇದು ಅಶ್ವಿನ್​ ನಾಯಕತ್ವಕ್ಕೆ ಅಡ್ಡಿಯಾಗಿದೆ.

ಸುನಿಲ್ ಗವಾಸ್ಕರ್, ಮಾಜಿ ಕ್ರಿಕೆಟರ್

ಆರ್​.ಅಶ್ವಿನ್​ಗೆ ಸಿಗಲಿಲ್ವಾ ಟೀಮ್ ಇಂಡಿಯಾದಲ್ಲಿ ಮನ್ನಣೆ..?

ಆರ್​.ಅಶ್ವಿನ್​.. ಟೀಮ್ ಇಂಡಿಯಾದ ಮ್ಯಾಚ್ ವಿನ್ನರ್ ಅನ್ನೋದು ಅಕ್ಷರಶಃ ನಿಜ. ಆದ್ರೆ, ಇಂಥಹ ಮ್ಯಾಚ್​ ವಿನ್ನರ್​​ಗೆ ಟೀಮ್ ಇಂಡಿಯಾದಲ್ಲಿ ಸೂಕ್ತ ಸ್ಥಾನಮಾನವೇ ಸಿಕ್ಕಿಲ್ಲ ಅನ್ನೋದೂ ಅಷ್ಟೇ ನಿಜ.! ಇದನ್ನ ಸೌತ್ ಆಫ್ರಿಕನ್ ಲೆಜೆಂಡ್ ಎಬಿ ಡಿವಿಲಿಯರ್ಸ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಶ್ವಿನ್ ಒಬ್ಬ ಅದ್ಭುತ ಆಟಗಾರ.. ಆದರೆ, ಟೀಮ್ ಇಂಡಿಯಾ ಪರ ಅಶ್ವಿನ್​​ ನಿರ್ವಹಿಸಿದ ಪಾತ್ರಕ್ಕೆ ಸಾಕಷ್ಟು ಮನ್ನಣೆ ಪಡೆದಿಲ್ಲ. ಎಂತಹ ಲೆಜೆಂಡ್ ಪ್ಲೇಯರ್. ಅಶ್ವಿನ್ ಎದುರು ಹಲವು ವರ್ಷಗಳಿಂದ ಆಡಿದ್ದೇನೆ. ವಿಶಿಷ್ಟ ವಿಷಯವೆಂದರೆ ಅಶ್ವಿನ್ ಎತ್ತರದ ವ್ಯಕ್ತಿ. ಆದ್ದರಿಂದ ನ್ಯಾಚುರಲ್ ವೇರಿಯೇಷನ್ ಹಾಗೂ ಬೌನ್ಸ್ ಹೊಂದಿದ್ದಾರೆ. ತಮ್ಮ ಮಣಿಕಟ್ಟಿನೊಂದಿಗೆ ಬದಲಾವಣೆ ಮಾಡಬಹುದು. ಹೆಚ್ಚು ಅಂಡರ್ ಕಟ್​, ಸ್ವಲ್ಪ ಬೌನ್ಸ್ ಹೆಚ್ಚಿಸಬಹುದು. ಅವರ ಬಳಿ ಕೇರಂ ಬಾಲ್ ಇದೆ. ಲೆಗ್ ಸ್ಪಿನ್ ಕೂಡ ಇದೆ. ಅಶ್ವಿನ್ ಎಲ್ಲ ರೀತಿಯ ಎಸೆತಗಳನ್ನು ಬೌಲ್ ಮಾಡುತ್ತಾರೆ. ನನ್ನ ಪ್ರಕಾರ ಆತನ ಬಲ ಗೇಮ್ ಬಗೆಗಿನ ಇರುವ ನಾಲೆಡ್ಜ್​​.

ಎಬಿ ಡಿವಿಲಿಯರ್ಸ್, ಮಾಜಿ ಕ್ರಿಕೆಟರ್​​

ಎಬಿ ಡಿವಿಲಿಯರ್ಸ್ ಹೇಳಿದ್ದು ನೂರಕ್ಕೆ ನೂರರಷ್ಟು ಸತ್ಯ. ಅಶ್ವಿನ್​​ರಲ್ಲಿ, ಕ್ರಿಕೆಟ್​ ನಾಲೆಡ್ಜ್​ ಜೊತೆಗೆ ತಂಡವನ್ನ ಮುನ್ನಡೆಸುವ ಹಾಗೂ ಮಾರ್ಗದರ್ಶನ ನೀಡುವ ಕಲೆಗಾರಿಕೆಯೂ ಇತ್ತು. ಆದ್ರೆ, ಇಂಥಹ ಆಟಗಾರನಿಗೆ ಟೆಸ್ಟ್​ ತಂಡದ ನಾಯಕತ್ವ ಇರಲಿ, ಉಪ ನಾಯಕನ ಸ್ಥಾನಮಾನವೂ ಸಿಗದಿರೋದು ನಿಜಕ್ಕೂ ವಿಪರ್ಯಾಸ. ಈಗಾಗ್ಲೇ ಅಶ್ವಿನ್​ರ ವಯಸ್ಸು 37ರ ಗಡಿದಾಟಿದೆ. ಹೀಗಾಗಿ ಮುಂದೆ ನಾಯಕತ್ವ ಸಿಗೋದೂ ಕನಸೇ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಅಶ್ವಿನ್​​ಗೆ ಅನ್ಯಾಯ -ಕೊಹ್ಲಿ ಕುರಿತ ಹೇಳಿಕೆ ಬೆನ್ನಲ್ಲೇ ಎಬಿಡಿಯಿಂದ ಮತ್ತೊಂದು ಸ್ಫೋಟಕ ಸ್ಟೇಟ್​​ಮೆಂಟ್..!

https://newsfirstlive.com/wp-content/uploads/2023/07/ASHWIN_IND_WI_TEST-1.jpg

Load More