/newsfirstlive-kannada/media/post_attachments/wp-content/uploads/2024/10/ASHWIN_KOHLI-1.jpg)
ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ರವಿಚಂದ್ರನ್ ಅಶ್ವಿನ್ ಅವರು ಮತ್ತೊಮ್ಮೆ ತಮ್ಮ ಕೈಚಳಕ ತೋರಿಸಿದ್ದಾರೆ. ಕಿವೀಸ್ನ ಪ್ರಮುಖ ಮೂವರು ಬ್ಯಾಟ್ಸ್ಮನ್ಗಳ ವಿಕೆಟ್ ಪಡೆದು ಸಂಭ್ರಮಿಸಿದ್ದಾರೆ.
ಮಹಾರಾಷ್ಟ್ರದ ಪುಣೆಯಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದುಕೊಂಡ ಕಿವೀಸ್ ನಾಯಕ ಟಾಮ್ ಲಾಥಮ್ ಅವರು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಓಪನರ್ ಆಗಿ ಕ್ರೀಸ್ಗೆ ಆಗಮಿಸಿದ ಲಾಥಮ್ 15 ರನ್ ಗಳಿಸಿ ಆಡುವಾಗ ಅಶ್ವಿನ್ ಅವರ ಎಲ್ಬಿ ಬಲೆಗೆ ಬಿದ್ದರು. ಬ್ಯಾಟಿಂಗ್ ಮುಂದುವರೆಸಿದ್ದ ಇನ್ನೊಬ್ಬ ಓಪನರ್ ಕಾನ್ವೆ 76 ರನ್ಗಳಿಂದ ಆಡುವಾಗ ಅಶ್ವಿನ್ ಬೌಲಿಂಗ್ನಲ್ಲಿ ವಿಕೆಟ್ ಕೀಪರ್ ಪಂತ್ಗೆ ಕ್ಯಾಚ್ ಕೊಟ್ಟ ಪೆವಿಲಿಯನ್ಗೆ ನಡೆದರು. ಲಾಥಮ್ ಬಳಿಕ ಕ್ರೀಸ್ಗೆ ಬಂದಿದ್ದ ವಿಲ್ ಯಂಗ್ರನ್ನ 18 ರನ್ಗೆ ಅಶ್ವಿನ್ ಔಟ್ ಮಾಡಿದರು.
ಇದನ್ನೂ ಓದಿ:ಐಪಿಎಲ್ನಲ್ಲಿ ಹೆಚ್ಚು ಶತಕ ಸಿಡಿಸಿದ ಬ್ಯಾಟ್ಸ್ಮನ್ ಯಾರು.. ಲಿಸ್ಟ್ನಲ್ಲಿ RCB ಸ್ಟಾರ್ ಪ್ಲೇಯರ್ ಇದ್ದಾರಾ?
ಈ ಮೂಲಕ ತಂಡದಲ್ಲಿ ಮೊದಲ ಮೂರು ವಿಕೆಟ್ಗಳನ್ನ ಆರ್ ಅಶ್ವಿನ್ ಅವರು ಪಡೆದು ಖುಷಿ ವ್ಯಕ್ತಪಡಿಸಿದರು. ಇನ್ನುಳಿದಂತೆ ವಾಷಿಂಗ್ಟನ್ ಸುಂದರ್ ಅವರು ರಚಿನ್ ರವೀಂದ್ರ ಹಾಗೂ ಟಾಮ್ ಬ್ಲಂಡೆಲ್ ಅವರನ್ನು ಔಟ್ ಮಾಡಿ ತಂಡಕ್ಕೆ ದೊಡ್ಡ ಕೊಡುಗೆ ಕೊಟ್ಟರು ಎನ್ನಬಹುದು. ಏಕೆಂದರೆ ಕಳೆದ ಪಂದ್ಯದಲ್ಲಿ ಸೆಂಚುರಿಸಿ ಸಿಡಿಸಿ ಗೆಲುವಿಗೆ ಕಾರಣವಾಗಿದ್ದ ರಚಿನ್ 65 ರನ್ಗೆ ಇದೀಗ ಔಟ್ ಆಗಿದ್ದಾರೆ. ಡಿವೋನ್ ಕಾನ್ವೆ ಹಾಗೂ ರಚಿನ್ ರವೀಂದ್ರ ಕೆಲ ಹೊತ್ತು ಬ್ಯಾಟಿಂಗ್ ಮಾಡಿ ತಂಡಕ್ಕೆ ಆಸರೆಯಾದರು. ಆದರೆ ಅಶ್ವಿನ್ ಸ್ಪಿನ್ಗೆ ಕಾನ್ವೆ ಅವರು ಪಂತ್ಗೆ ಕ್ಯಾಚ್ ಕೊಟ್ಟು ಹೊರ ನಡೆದರು.
ಇದನ್ನೂ ಓದಿ: IND vs NZ; ಯುವ ಬ್ಯಾಟರ್ ಸರ್ಫರಾಜ್ ಖಾನ್ ಮೇಲೆ ಬೆಟ್ಟದಷ್ಟು ನಿರೀಕ್ಷೆ.. ಯಾಕೆ ಗೊತ್ತಾ?
ಸದ್ಯ ಮೊದಲ ದಿನದ ಸೆಕೆಂಡ್ ಸೆಸನ್ ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ 5 ವಿಕೆಟ್ ಕಳೆದುಕೊಂಡು 201 ರನ್ಗಳಿಂದ ಬ್ಯಾಟಿಂಗ್ ಮುಂದುವರೆಸಿದೆ. ಇನ್ನೂ ಬೂಮ್ರಾ, ಅಕ್ಷದೀಪ್ ಹಾಗೂ ಜಡೇಜಾ ಅವರು ಬೌಲಿಂಗ್ ಮಾಡಿದರೂ ವಿಕೆಟ್ ಇನ್ನು ಪಡೆದಿಲ್ಲ. ಸುಂದರ್ ಹಾಗೂ ಅಶ್ವಿನ್ ಅವರು ವಿಕೆಟ್ ಕಬಳಿಸಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ