newsfirstkannada.com

ಕ್ರೈಂ ಬ್ರ್ಯಾಂಚ್ ಎಎಸ್​ಐ ಮೇಲೆ ಗುಂಡು ಹಾರಿಸಿ ಬರ್ಬರ ಹತ್ಯೆ..

Share :

Published July 3, 2024 at 8:47am

Update July 3, 2024 at 8:48am

  ಮನೆ ಬಳಿ ವಾಕಿಂಗ್ ಮಾಡ್ತಿದ್ದಾಗ ಭೀಕರ ಕೊಲೆ

  ಬೈಕ್​​ನಲ್ಲಿ ಬಂದ ದುಷ್ಕರ್ಮಿಗಳಿಂದ ಫೈರಿಂಗ್

  ಸುದ್ದಿ ತಿಳಿದು ಆಘಾತಕ್ಕೆ ಒಳಗಾದ ಕುಟುಂಬಸ್ಥರು

ಹರಿಯಾಣದ ಕರ್ನಾಲ್​​ನಲ್ಲಿ ಪೊಲೀಸ್ ಅಧಿಕಾರಿ ಮೇಲೆ ಗುಂಡು ಹಾರಿಸಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಯಮುನಾನಗರದ ಕ್ರೈಂಬ್ರಾಂಚ್​ ಎಎಸ್​ಐ ಸಂಜೀವ್ ಕುಮಾರ್​​ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ವರದಿಗಳ ಪ್ರಕಾರ ಪೊಲೀಸ್ ಅಧಿಕಾರಿಯ ಮನೆಯ ಸಮೀಪವೇ ಕೊಲೆ ಮಾಡಲಾಗಿದೆ. ವಾಕಿಂಗ್ ಮಾಡುತ್ತಿದ್ದಾಗ ಬೈಕ್​​ನಲ್ಲಿ ಬಂದ ದುಷ್ಕರ್ಮಿಗಳು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಸಂಜೀವ್ ಹರಿಯಾಣ ಪೊಲೀಸ್ ಠಾಣೆಯ ಸಿಬ್ಬಂದಿಯಾಗಿದ್ದು, ಯಮುನಾಗರದ ರಾಜ್ಯ ಅಪರಾಧ ವಿಭಾಗದಲ್ಲಿ ಎಎಸ್​ಐ ಆಗಿ ನೇಮಕಗೊಂಡಿದ್ದರು.

ಇದನ್ನೂ ಓದಿ:ಇಳಿಜಾರಿನಲ್ಲಿ ಬ್ರೇಕ್ ಫೇಲ್​​.. ಗಾಬರಿಯಾದ ಪ್ರಯಾಣಿಕರು ಮಾಡಿದ್ದೇನು ಗೊತ್ತಾ..?

ಹಣೆಯ ಭಾಗಕ್ಕೆ ಮತ್ತು ಸೊಂಟಕ್ಕೆ ಗುಂಡು ಹೊಕ್ಕಿದೆ. ಗಂಭೀರ ಸ್ಥಿತಿಯಲ್ಲಿದ್ದ ಸಂಜೀವ್​​ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು ಸಾವನ್ನಪ್ಪಿದ್ದಾರೆ. ಕೃತ್ಯದ ಬಳಿಕ ಪೊಲೀಸರು ಮತ್ತು ಹಿರಿಯ ಅಧಿಕಾರಿಗಳ ತಂಡ ಘಟನಾ ಸ್ಥಳಕ್ಕೆ ತಲುಪಿದೆ. ಅಲ್ಲಿ ಕೆಲವು ಬುಲೆಟ್ ಶೆಲ್​ಗಳು ಬಿದ್ದಿದ್ದವು. ಅವುಗಳನ್ನು ವಶಕ್ಕೆ ಪಡೆಯಲಾಗಿದೆ. ಸುದ್ದಿ ತಿಳಿದು ಕುಟುಂಬಸ್ಥರು ಆಘಾತಕ್ಕೆ ಒಳಗಾಗಿದ್ದಾರೆ.

ಇದನ್ನೂ ಓದಿ:ಟೀಂ ಇಂಡಿಯಾದಲ್ಲಿ ದಿಢೀರ್ ಬದಲಾವಣೆ.. ಜಿಂಬಾಬ್ವೆ ಪ್ರವಾಸದಿಂದ ಮೂವರು ಸ್ಟಾರ್ ಆಟಗಾರರಿಗೆ ಕೊಕ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕ್ರೈಂ ಬ್ರ್ಯಾಂಚ್ ಎಎಸ್​ಐ ಮೇಲೆ ಗುಂಡು ಹಾರಿಸಿ ಬರ್ಬರ ಹತ್ಯೆ..

https://newsfirstlive.com/wp-content/uploads/2024/07/HARIYANA-3.jpg

Load More