newsfirstkannada.com

ಆಟೋ ಡ್ರೈವರ್​ಗೆ​ ASI ಕಪಾಳಮೋಕ್ಷ.. ಆದ್ರೆ CCTV ಹೇಳ್ತು ಈ ಘಟನೆಯ ಸತ್ಯಾನು ಸತ್ಯ! 

Share :

17-06-2023

    ಎಎಸ್ಐ ಆಟೋ ಡ್ರೈವರ್​ಗೆ ಕಪಾಳಮೋಕ್ಷ ಮಾಡಿದ್ದೇಕೆ ಗೊತ್ತಾ?

    ASI ದರ್ಪ ತೋರಿಸಿದ್ದು ಅಲ್ವೇ ಅಲ್ಲ.. ಸಿಸಿಟಿವಿ ಹೇಳಿದೆ ಕಟು ಸತ್ಯ

    ಅಲ್ಲಿ ಆಗಿದ್ದೇ ಬೇರೆ.. ಯುವತಿ ಚಿತ್ರೀಕರಿಸಿದ ದೃಶ್ಯ ಹೇಳಿದ್ದೇ ಬೇರೆ

ಇತ್ತೀಚೆಗೆ ಅಸಿಸ್ಟೆಂಟ್​ ಸಬ್​ ಇನ್ಸ್​ಸ್ಪೆಕ್ಟರ್​​ (ಎಎಸ್ಐ) ಆಟೋ ಡ್ರೈವರ್ ಕಪಾಳಕ್ಕೆ ಹೊಡೆದ ದೃಶ್ಯ ಎಲ್ಲೆಡೆ ವೈರಲ್​ ಆಗಿತ್ತು. ಸಾಮಾಜಿಕ ಜಾಲತಾಣದಲ್ಲಿ ದೃಶ್ಯ ಹರಿದಾಡಿತ್ತು. ಯುವತಿಯೊಬ್ಬಳು ಈ ದೃಶ್ಯವನ್ನು ಸೆರೆ ಹಿಡಿದು ಶೇರ್​ ಮಾಡಿದ್ದಳು. ಆದರೀಗ ಈ ಘಟನೆಯ ನಿಜಸಂಗತಿ ಬೆಳಕಿಗೆ ಬಂದಿದೆ. ಪ್ರತ್ಯಕ್ಷವಾಗಿ ಕಂಡರು ಪ್ರಾಮಾಣಿಸಿ ನೋಡು ಎಂಬ ಗಾದೆ ಈ ಘಟನೆಗೆ ಹೋಳಿಕೆಯಾಗಿದೆ.

ಏನಿದು ಘಟನೆ?

ಇತ್ತೀಚೆಗೆ ಯುವತಿಯೊಬ್ಬಳು ಆಟೋ ಡ್ರೈವರ್ ಕಪಾಳಕ್ಕೆ ಎಎಸ್ಐ ಹೊಡೆದ ದೃಶ್ಯವನ್ನು ಸ್ಮಾರ್ಟ್​ಫೋನ್​ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಳು. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಕೂಡ ಆಗಿತ್ತು. ಮಾತ್ರವಲ್ಲದೆ, ದೃಶ್ಯ ಕಂಡವರು ಆಟೋ ಡ್ರೈವರ್ ಮೇಲೆ ಸಂಚಾರಿ ಪೊಲೀಸ್ ಸಿಬ್ಬಂದಿ ದರ್ಪ ತೋರಿದ್ದಾರೆ ಎಂದು ವೈರಲ್​ ಆಗಿತ್ತು.

ಸುಖಾಸುಮ್ಮನೆ ಆಟೋ ಡ್ರೈವರ್​ ಎಎಸ್ಐಗೆ ಕಪಾಳ ಮೋಕ್ಷ ಮಾಡಿದ್ದಾರೆಂದು ಟ್ವೀಟ್ ಮಾಡಿದ್ದರು. ಅನೇಕರು ಈ ದೃಶ್ಯವನ್ನು ಕಂಡು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದರು.
ಈ ವಿಚಾರ ದೊಡ್ಡದಾಗ್ತಿದ್ದಂತೆಯೇ ಹಿರಿಯ ಅಧಿಕಾರಿಗಳು ಘಟನೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

ಸಂಚಾರಿ ಜಂಟಿ ಆಯುಕ್ತ ಅನುಚೇತ್ ಘಟನೆ ಬಗ್ಗೆ ಸರಿಯಾಗಿ ಪರಿಶೀಲನೆ ನಡೆಸಿದ್ದಾರೆ. ಆದರೆ ಈ ವೇಳೆ ಆಟೋ ಚಾಲಕನ ತಪ್ಪು ಬೆಳಕಿಗೆ ಬಂದಿದೆ. ಸಿಸಿಟಿವಿ ದೃಶ್ಯದಿಂದಾಗಿ ಎಎಸ್​ಐ ಯಾವುದೇ
ತಪ್ಪು ಮಾಡಿಲ್ಲ ಎಂಬುದು ಗೊತ್ತಾಗಿದೆ.

ಸಿಸಿಟಿವಿ ದೃಶ್ಯ ಸುಳ್ಳು ಹೇಳಿಲ್ಲ!

ಯುವತಿ ಹಂಚಿಕೊಂಡ ದೃಶ್ಯದಲ್ಲಿ ಎಎಸ್​​ಐ ದರ್ಪ ತೋರಿಸಿದ್ದಾರೆ ಎಂದು ವೈರಲ್​ ಆದರೆ ಅತ್ತ ಸಿಸಿಟಿವಿ ದೃಶ್ಯದಲ್ಲಿ ನಿಜ ಸಂಗತಿ ಬಯಲಿಗೆ ಬಂದಿದೆ. ಆಟೋ ಚಾಲಕನ ತಪ್ಪೇನೆಂದು ಗೊತ್ತಾಗಿದೆ.

ಘಟನೆ ಸಂಭಂದಿಸಿದಂತೆ ಸಿಸಿಟಿವಿಯಲ್ಲಿ ಟ್ರಾಫಿಕ್ ಎಎಸ್ ಐ ಬೈಕ್ ಮೇಲೆ‌ ಬಂದು ಸೈಡಿಗೆ ಗಾಡಿ ಪಾರ್ಕ್ ಮಾಡ್ತಿದ್ದಾರೆ. ಈ ವೇಳೆ ಗೊತ್ತಿದ್ದೂ ಎಎಸ್ ಐ ಗಾಡಿಗೆ ಆಟೋ ಚಾಲಕ ಡಿಕ್ಕಿ ಹೊಡೆದಿದ್ದಾನೆ. ಆಟೋ ಗುದ್ದಿದಂತೆ ಎಎಸ್​​ಐ ಗಾಬರಿಗೊಂಡಿದ್ದಾರೆ. ಬಳಿಕ ಆಟೋ ಡ್ರೈವರ್ ನ ಕರೆದು ಕೇಳಿದ್ದಾರೆ. ಈ ವೇಳೆ ಆಟೋ ಚಾಲಕ ವಾದಕ್ಕೆ ನಿಂತಿದ್ದಾನೆ.

ವಾದದ ವೇಳೆ ಕೋಪಗೊಂಡು ಎಎಸ್​ಐ ಕಪಾಳ ಮೋಕ್ಷ ಮಾಡಿದ್ದಾರೆ. ಬೈಕ್​ಗೆ ಗುದ್ದಿದ್ದಲ್ಲದೆ ವಾಗ್ವಾದಕ್ಕೆ ಇಳಿದಿದ್ದಕ್ಕೆ ಕಪಾಳ ಮೋಕ್ಷ ಮಾಡಿದ್ದಾರೆ. ಸಿಸಿಟಿವಿ ದೃಶ್ಯದಿಂದಾಗಿ ಈ ಘಟನೆಯಲ್ಲಿ ಎಎಸ್​​ಐ ದರ್ಪ ತೋರಿಸಿರುವುದಲ್ಲ ಎಂಬದು ಬೆಳಕಿಗೆ ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಟೋ ಡ್ರೈವರ್​ಗೆ​ ASI ಕಪಾಳಮೋಕ್ಷ.. ಆದ್ರೆ CCTV ಹೇಳ್ತು ಈ ಘಟನೆಯ ಸತ್ಯಾನು ಸತ್ಯ! 

https://newsfirstlive.com/wp-content/uploads/2023/06/Auto-police-kirik.jpg

Load More