newsfirstkannada.com

Asia Cup 2023: ಸೂಪರ್-4 ಪಂದ್ಯಕ್ಕೆ ಮಳೆ ಬಂದ್ರೂ ಚಿಂತೆ ಬಿಡಿ.. ಭಾರತ-ಪಾಕ್ ಕ್ರಿಕೆಟ್​ ಫ್ಯಾನ್ಸ್​ ಓದಲೇಬೇಕಾದ ಸ್ಟೋರಿ ಇದು

Share :

Published September 8, 2023 at 6:17pm

  ಏಸಿಯಾನ್ ಕ್ರಿಕೆಟ್​ ಕೌನ್ಸಿಲ್​(ACC) ನಿಂದ ಗುಡ್​ನ್ಯೂಸ್​ ಏನದು..?

  ಭಾರತದ ಎರಡು ಪಂದ್ಯಗಳು ಮಳೆಯಿಂದಾಗಿ ಸಮಸ್ಯೆ ಆಗಿದ್ದವು

  ಭಾರತ-ಪಾಕ್​ನ ಭಾನುವಾರದ ಪಂದ್ಯಕ್ಕೆ ಮತ್ತೊಂದು ದಿನನಾ..?

2023ರ ಏಷ್ಯಾಕಪ್​ ಟೂರ್ನಿಗೆ ಅದ್ಧೂರಿ ಸ್ವಾಗತ ಸಿಕ್ಕಿದ್ದು ಅಷ್ಟೇ ಪ್ರಮಾಣದಲ್ಲಿ ಕ್ರಿಕೆಟ್​ ಪ್ರೇಮಿಗಳು ಕೂಡ ನಿರಾಸೆಗೆ ಒಳಗಾಗುತ್ತಿದ್ದಾರೆ. ಶ್ರೀಲಂಕಾದಲ್ಲಿ ನಿರಂತರ ಮಳೆಯಿಂದಾಗಿ ಪಂದ್ಯಗಳು ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿಲ್ಲ. ಇದಕ್ಕಾಗಿ ಏಸಿಯಾನ್ ಕ್ರಿಕೆಟ್​ ಕೌನ್ಸಿಲ್​ (ACC) ಹೊಸದೊಂದು ಘೋಷಣೆ ಮಾಡಿದ್ದು ಇಂಡಿಯಾ- ಪಾಕ್​ ಕ್ರಿಕೆಟ್​ ಪ್ರೇಮಿಗಳಿಗೆ ಗುಡ್​ ನ್ಯೂಸ್ ಕೊಟ್ಟಿದೆ.

ಏಷ್ಯಾಕಪ್​ನ ಸೂಪರ್- 4 ಹಂತಕ್ಕೆ ಸೆಪ್ಟೆಂಬರ್​ 10 ರಂದು ಭಾನುವಾರ ಭಾರತ-ಪಾಕ್ ನಡುವೆ ಹೈವೋಲ್ಟೇಜ್ ಮ್ಯಾಚ್ ನಡೆಯಲಿದೆ. ಈ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಮುನ್ಸೂಚನೆ ಇದ್ದು ಇದಕ್ಕಾಗಿ ಎಸಿಸಿ ರಿಸರ್ವ್​ ಡೇಯನ್ನು ಘೋಷಣೆ ಮಾಡಿದೆ. ಅಂದರೆ ಭಾನುವಾರ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ್ರೆ ಸೋಮವಾರ (ಸೆ.11) ದಂದು ಪಂದ್ಯ ನಡೆಸಲಾಗುತ್ತದೆ ಎಂದು ಎಸಿಸಿ ವರದಿ ಮಾಡಿದೆ.

ಭಾರತ ಮತ್ತು ಪಾಕ್ ಆಟಗಾರರು

ಇನ್ನು ಭಾರತ-ಪಾಕ್ ಹೈವೋಲ್ಟೇಜ್​ ಪಂದ್ಯ ಶ್ರೀಲಂಕಾದ ಕೊಲೊಂಬೋದಲ್ಲಿರುವ ಆರ್ ಪ್ರೇಮದಾಸ್ ಸ್ಟೇಡಿಯಂನಲ್ಲಿ ಮಧ್ಯಾಹ್ನ ನಡೆಯಲಿದೆ ಎಂದು ಹೇಳಲಾಗಿದೆ. ಇದೇ ಸಮಯಕ್ಕೆ ಮಳೆ ಬರುವ ಹಿನ್ನೆಲೆಯಲ್ಲಿ ರಿಸರ್ವ್​ ಡೇಯನ್ನು ಎಸಿಸಿ ಘೋಷಣೆ ಮಾಡಿ ಗುಡ್​ ನ್ಯೂಸ್ ಕೊಟ್ಟಿದೆ.

ಇದನ್ನು ಓದಿ: BJP-JDS​ ಮೈತ್ರಿ ಬಗ್ಗೆ ಸಿಎಂ ಸಿದ್ದರಾಮಯ್ಯ ಏನಂದ್ರು? ಒಳ್ಳೆಯದಾಗಲಿ, ಚೆನ್ನಾಗಿರಲಿ ಅಂದಿದ್ದೇಕೆ ಡಿ.ಕೆ ಶಿವಕುಮಾರ್​

ಅಲ್ಲದೇ ಟೀಮ್​ ಇಂಡಿಯಾ ಈ ಮೊದಲು ಪಾಕಿಸ್ತಾನ ಜೊತೆ ಆಡಿದ್ದ ಏಷ್ಯಾಕಪ್​ನ ಮೊದಲ ಪಂದ್ಯವು ಮಳೆಯಿಂದ ರದ್ದಾಗಿ ತಲಾ ಒಂದೊಂದು ಅಂಕ ನೀಡಲಾಗಿತ್ತು. ಭಾರತ 2ನೇ ಮ್ಯಾಚ್ ಅನ್ನು ನೇಪಾಳ ವಿರುದ್ಧ ಆಡಿತ್ತು. ಈ ಪಂದ್ಯಕ್ಕೂ ಮಳೆ ಅಡ್ಡಿ ಪಡಿಸಿದರಿಂದ ಡಕ್ವರ್ತ್​ ಲೂಯಿಸ್ ನಿಯಮದ ಮೊರೆ ಹೋಗಿ, ಭಾರತ ಜಯಭೇರಿ ಬಾರಿಸಿತ್ತು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Asia Cup 2023: ಸೂಪರ್-4 ಪಂದ್ಯಕ್ಕೆ ಮಳೆ ಬಂದ್ರೂ ಚಿಂತೆ ಬಿಡಿ.. ಭಾರತ-ಪಾಕ್ ಕ್ರಿಕೆಟ್​ ಫ್ಯಾನ್ಸ್​ ಓದಲೇಬೇಕಾದ ಸ್ಟೋರಿ ಇದು

https://newsfirstlive.com/wp-content/uploads/2023/09/VIRAT_KOHLI-2.jpg

Load More