ಗುಜರಾತ್ ಕಚ್ ಜಿಲ್ಲೆಯಲ್ಲಿದೆ ಏಷ್ಯಾದ ಅತ್ಯಂತ ಶ್ರೀಮಂತ ಗ್ರಾಮ
ಪುಟ್ಟ ಹಳ್ಳಿಯೊಂದರಲ್ಲಿ ಇವೆ ಒಟ್ಟು 17 ರಾಷ್ಟ್ರೀಯ ಬ್ಯಾಂಕ್ಗಳು
ಈ ಗ್ರಾಮ ಇಷ್ಟೊಂದು ಶ್ರೀಮಂತವಾಗಿರಲು ಕಾರಣಗಳೇನು ಗೊತ್ತಾ?
ಅಹ್ಮದಾಬಾದ್: ಹಳ್ಳಿಗಳು, ಗ್ರಾಮಗಳ ಅಭಿವೃದ್ಧಿಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಅನ್ನೋ ಮಾತಿದೆ. ಕಲ್ಯಾಣ ರಾಷ್ಟ್ರಕ್ಕಾಗಿ ಹಳ್ಳಿಗಳ ಕಲ್ಯಾಣ ಅನಿವಾರ್ಯ. ಹಳ್ಳಿಗಳ ಆರ್ಥಿಕ ಸ್ಥಿತಿ, ಕೊಳ್ಳುವ ಯೋಗ್ಯತೆ ಸುಧಾರಿಸಿದಾಗ ಮಾತ್ರ ಸರ್ವದೇಶದ ಕಲ್ಯಾಣ ಸಾಧ್ಯ. ಅದಕ್ಕೆ ನಿದರ್ಶನವಾಗಿ ನಿಂತಿದೆ ಗುಜರಾತ್ನ ಈ ಹಳ್ಳಿ.
ಒಂದು ದೇಶದಲ್ಲಿ ಅತಿ ಹೆಚ್ಚು ಶ್ರೀಮಂತ ನಗರಗಳನ್ನು ಗುರುತಿಸುವುದು ಸಾಮಾನ್ಯ. ಅದರ ಆದಾಯವನ್ನು, ಅದು ದೇಶಕ್ಕೆ ಕೊಡುವ ಜಿಡಿಪಿ ಹಾಗೂ ಕಟ್ಟುವ ತೆರಿಗೆ ಮೇಲೆ ಅವುಗಳ ಶ್ರೀಮಂತಿಕೆಯನ್ನು ಅಳೆಯಲಾಗುತ್ತದೆ. ಆದ್ರೆ ಗುಜರಾತ್ನಲ್ಲಿರುವ ಈ ಒಂದು ಗ್ರಾಮ ಬರೀ ದೇಶದಲ್ಲಿಯೇ ಅಲ್ಲ, ಇಡೀ ಏಷ್ಯಾ ಖಂಡದಲ್ಲಯೇ ಅತ್ಯಂತ ಶ್ರೀಮಂತ ಗ್ರಾಮವೆಂದು ಗುರುತಿಸಿಕೊಂಡಿದೆ.
ಗುಜರಾತ್ನ ಕಚ್ ಜಿಲ್ಲೆಯ ಭುಜ್ ಪ್ರದೇಶಕ್ಕೆ ಅಂಟಿಕೊಂಡಿರುವ ಮಧಾಪುರ್ ಎಂಬ ಅತ್ಯಂತ ಪುಟ್ಟ ಹಳ್ಳಿ, ಈಗ ಜಾಗತಿಕವಾಗಿ ಸುದ್ದಿಯಾಗಿದೆ. ಈ ಒಂದು ಗ್ರಾಮ ಏಷ್ಯಾದಲ್ಲಿಯೇ ಅತ್ಯಂತ ಶ್ರೀಮಂತ ಗ್ರಾಮ ಎಂದು ಗುರುತಿಸಿಕೊಂಡಿದೆ. ಅದಕ್ಕೆ ಕಾರಣ ಆ ಹಳ್ಳಿ ಗಳಿಸಿದ ಆಸ್ತಿ. ಈ ಹಳ್ಳಿಯ ಜನರು ಎಫ್ ಡಿ ಅಂದ್ರೆ ಬ್ಯಾಂಕಿನಲ್ಲಿಟ್ಟ ಒಟ್ಟು ಫಿಕ್ಸ್ ಡೆಪಾಸಿಟ್ ಮೊತ್ತ. ಅದು ಒಂದಲ್ಲ ಎರಡಲ್ಲ, ಬರೋಬ್ಬರಿ 7 ಸಾವಿರ ಕೋಟಿ ರೂಪಾಯಿ ಅಂದ್ರೆ ನೀವು ನಂಬಲೇಬೇಕು.
ಇದನ್ನೂ ಓದಿ:Breaking: ನದಿಗೆ ಬಿದ್ದ 40 ಪ್ರಯಾಣಿಕರಿದ್ದ ಬಸ್; ಭಾರೀ ದುರಂತದ ಆತಂಕ
ಗುಜರಾತ್ ದೇಶದ ನಂಬರ್ ಒನ್ ವ್ಯಾಪಾರಿ ಕೇಂದ್ರ. ಇದು ದೇಶಕ್ಕೆ ಅನೇಕ ಉದ್ಯಮಿಗಳನ್ನು ಕೊಟ್ಟಿದೆ. ಆದ್ರೆ ಅದು ಕೇವಲ ನಗರಕ್ಕೆ ಸೀಮಿತವಾಗಿ. ಆದ್ರೆ ಗುಜರಾತ್ನ ಮಧಾಪುರ್ ಎಂಬ ಹಳ್ಳಿಯಿದೆಯಲ್ಲ ಇದು ಕಚ್ ಜಿಲ್ಲೆಯ ಬುಜ್ ಪ್ರದೇಶಕ್ಕೆ ಅಂಟಿಕೊಂಡಿರುವ ಒಂದು ಹಳ್ಳಿ, ಒಟ್ಟಾರೆಯಾಗಿ 7 ಸಾವಿರ ಕೋಟಿ ರೂಪಾಯಿಗಳನ್ನು ಫಿಕ್ಸ್ ಡಿಪಾಸಿಟ್ ಹೊಂದಿದ ಕಾರಣ ಇದು ಏಷ್ಯಾದ ಅತ್ಯಂತ ಶ್ರೀಮಂತ ಹಳ್ಳಿ ಎಂದು ಗುರುತಿಸಿಕೊಂಡಿದೆ. ಮಧಾಪುರ್ ಪಟೇಲ್ ಸಮುದಾಯ ಹೆಚ್ಚು ಇರುವ ಒಂದು ಹಳ್ಳಿ ಇಲ್ಲಿಯ ಜನಸಂಖ್ಯೆ ಜಸ್ಟ್ 32 ಸಾವಿರ. ಈ ಗ್ರಾಮದಲ್ಲಿ HDFC, SBI ,PNB, AXIS ಬ್ಯಾಂಕ್ಗಳು ಸೇರಿದಂತೆ ಒಟ್ಟು 17 ಬ್ಯಾಂಕ್ಗಳಿವೆ. ಒಂದು ಹಳ್ಳಿಯಲ್ಲಿ ಇಷ್ಟೊಂದು ಬ್ಯಾಂಕ್ಗಳಿರುವುದು ಅತಿ ವಿರಳ ಆದ್ರೆ ಮಧಾಪುರದ ಜನರ ಉಳಿತಾಯ ಜ್ಞಾನ ಈ ಗ್ರಾಮದಲ್ಲಿ ಇಷ್ಟೊಂದು ಬ್ಯಾಂಕ್ಗಳು ತಲೆಯೆತ್ತುವುದಕ್ಕೆ ಕಾರಣವಾಗಿದೆ.
ಇದನ್ನೂ ಓದಿ: IPS ಅಧಿಕಾರಿಗೆ ಸಂಬಳ ಎಷ್ಟು.. ಯಾವ ಪೋಸ್ಟ್ಗೆ ಹೆಚ್ಚು ಸ್ಯಾಲರಿ ನೀಡುತ್ತೆ ಸರ್ಕಾರ?
ಅದು ಮಾತ್ರವಲ್ಲ ಈ ಹಳ್ಳಿಯಲ್ಲಿ ಅತಿ ಹೆಚ್ಚು ಅನಿವಾಸಿ ಭಾರತೀಯರು ಇದ್ದಾರೆ. ಅವರು ಕೋಟಿ ಲೆಕ್ಕದಲ್ಲಿ ಪ್ರತಿವರ್ಷ ಬ್ಯಾಂಕ್ಗಳ ಜೊತೆ ವ್ಯವಹಾರ ಮಾಡುತ್ತಾರೆ. ಹೀಗಾಗಿ ಇಲ್ಲಿ ದೊಡ್ಡ ದೊಡ್ಡ ಬ್ಯಾಂಕ್ಗಳ ಶಾಖೆಗಳು ತೆರೆದುಕೊಂಡಿವೆ, ಈ ಊರಿನಲ್ಲಿ ಒಟ್ಟು 20 ಸಾವಿರ ಮನೆಗಳಿದ್ದು ಅದರಲ್ಲಿ 1200 ಕುಟುಂಬಗಳು ಪಾಶ್ಚಾತ್ಯ ರಾಷ್ಟ್ರ ಹಾಗೂ ಆಫ್ರಿಕನ್ ರಾಷ್ಟ್ರಗಳಲ್ಲಿ ವಾಸ ಮಾಡುತ್ತಾರೆ.
ಹೀಗಾಗಿ ಇಲ್ಲಿ ಎಫ್ಡಿ ದುಡ್ಡು ಸಾಗರದಂತೆ ಹರಿದು ಬರುತ್ತದೆ. ಆಫ್ರಿಕಾದ ದೇಶಗಳಲ್ಲಿ ಕಟ್ಟಡ ನಿರ್ಮಾಣದಂತ ಕಾರ್ಯಗಳಲ್ಲಿ ಗುಜರಾತಿಗಳ ಹಿಡಿತವಿದೆ. ಅದೇ ರೀತಿ ನ್ಯೂಜಿಲೆಂಡ್ ಯುಕೆ ಆಸ್ಟ್ರೇಲಿಯಾದಂತ ರಾಷ್ಟ್ರಗಳಲ್ಲಿಯೂ ಗುಜರಾತಿ ವ್ಯಾಪಾರಿಗಳಿದ್ದಾರೆ. ಅವೆರಲ್ಲರೂ ತಮ್ಮ ಗ್ರಾಮದೊಂದಿಗೆ ಇಂದಿಗೂ ವ್ಯವಹಾರಿಕವಾಗಿ ಸಂಪರ್ಕ ಹೊಂದಿದ್ದಾರೆ ಹೀಗಾಗಿ ಇಲ್ಲಿಯ ಬ್ಯಾಂಕ್ಗಳಲ್ಲಿ ಫಿಕ್ಸ್ಡ್ ಡಿಪಾಸಿಟ್ ದುಡ್ಡು 7 ಸಾವಿರ ಕೋಟಿ ರೂಪಾಯಿಯಷ್ಟಿದೆ. ಇದರಿಂದಾಗಿಯೇ ಈ ಗ್ರಾಮ ಏಷ್ಯಾದ ಅತ್ಯಂತ ಶ್ರೀಮಂತ ಗ್ರಾಮ ಎಂದು ಕರೆಸಿಕೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ