/newsfirstlive-kannada/media/post_attachments/wp-content/uploads/2025/06/aiyshu3.jpg)
ಕಿರುತೆರೆ ನಟಿಯರು ಆಗಾಗ ಹೊಸ ಫೋಟೋಶೂಟ್​ಗಳನ್ನು ಮಾಡಿಸೋದು ಸಾಮಾನ್ಯ. ಸಂಪ್ರದಾಯಕ ಲುಕ್​, ವೆಸ್ಟರ್ನ್​​ ಲುಕ್ ಸೇರಿದಂತೆ ವಿಭಿನ್ನ ಫೋಟೋಗಳನ್ನ ಕ್ಲಿಕ್ಕಿಸಿಕೊಳ್ಳುತ್ತಾರೆ. ಇದ್ರಿಂದ ಒಂದಷ್ಟು ಹೊಸ ಅವಕಾಶಗಳು ಅವರನ್ನ ಅರಸಿ ಬರುತ್ತೆ.
ಇದನ್ನೂ ಓದಿ:ಸಿನಿಮಾವನ್ನೂ ಮೀರಿಸುವಂತಿದೆ ಸೋನಂ ಪ್ಲಾನ್.. ತನಿಖೆಯಲ್ಲಿ ಪ್ರತಿ ಸನ್ನಿವೇಶಗಳೂ ಮರುಸೃಷ್ಟಿ..
ಸದ್ಯ ಭರ್ಜರಿ ಬೆಡಗಿ ಆಸಿಯಾ ಬೇಗಮ್ ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ​ಭರ್ಜರಿ ಬ್ಯಾಚುಲರ್ಸ್ ಸೀಸನ್​ 1ರಲ್ಲಿ ಹನುಮನ ಜೋಡಿಯಾಗಿದ್ರು ಆಸಿಯಾ. ಹಾವೇರಿ ಹೈದ ಕುರಿಗಾಯಿ ಹನುಮನಿಗೆ ಸಿಟಿ ಸ್ಟೈಲ್​ ಟಚ್​ ಕೊಟ್ಟಿದ್ರು. ಹನುಮನ ಮುಗ್ಧತೆ, ಆಸಿಯಾ ತಾಳ್ಮೆ ಬ್ಲೆಂಡ್​ ಆಗಿತ್ತು ಇದೇ ಇವರನ್ನ ರನ್ನರ್​ ಅಪ್​ ಸ್ಥಾನಕ್ಕೆ ತಂದುನಿಲ್ಲಿಸಿತ್ತು.
ಕುರುಬನ ರಾಣಿ ಅಂತಲೇ ಆಸಿಯಾ ಫೇಮಸ್​ ಆಗಿದ್ರು. ಲಂಬಾಣಿ ಉಡುಗೆ ತೋಡಿಸಿ ಸಂಭ್ರಮಿಸಿದ್ದ ಹನುಮ. ಇಬ್ಬರ ಬಾಂಡಿಂಗ್​ ತುಂಬಾ ಸ್ಪೆಷಲ್​ ಆಗಿತ್ತು. ಮಾಡ್ರನ್​ ಬಟ್ಟೆಯಲ್ಲಿ ಚಿಟ್ಟೆಯಂತೆ ಕಾಣೋ ಚಲುವೆ ಆಸಿಯಾ. ಸಂಪ್ರದಾಯಕ ಉಡುಗೆಯಲ್ಲಿ ಇನ್ನು ಮುದ್ದಾಗಿ ಕಾಣ್ತಾರೆ. ಅದರಲ್ಲೂ ಸೀರೆ ಕೇಳ್ಬೇಕಾ? ಹೆಣ್ಮಕ್ಕಳ ಅಂದಕ್ಕೆ ಮುಕುಟದಂತೆ.
ಹಸಿರು ಬಣ್ಣದ ಸೀರೆ ಉಟ್ಟು ಬೆಳದಿಂಗಳ ಬಾಲೆ ಅಂತೆ ಕಂಗೋಳಿಸ್ತಿದ್ದಾರೆ ನಟಿ. ಇನ್ನೂ, ಇದೇ ಫೋಟೋಗಳನ್ನು ನಟಿ ಆಸಿಯಾ ಬೇಗಮ್​ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದೇ ಫೋಟೋ ನೋಡಿ ಅಭಿಮಾನಿಗಳು ಆಸಿಯಾ ಅಂದಕ್ಕೆ ಫಿದಾ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ