Advertisment

ಅಸ್ಸಾಂನಲ್ಲಿ ಗೋಮಾಂಸ ಸೇವನೆ ನಿಷೇಧ; ಸಿಎಂ ಹಿಮಂತ್ ಬಿಸ್ವಾರಿಂದ ನೂತನ ಕಾಯ್ದೆ

author-image
Gopal Kulkarni
Updated On
ಅಸ್ಸಾಂನಲ್ಲಿ ಗೋಮಾಂಸ ಸೇವನೆ ನಿಷೇಧ; ಸಿಎಂ ಹಿಮಂತ್ ಬಿಸ್ವಾರಿಂದ ನೂತನ ಕಾಯ್ದೆ
Advertisment
  • ಅಸ್ಸಾಂನಲ್ಲಿ ಗೋಮಾಂಸ ಸೇವನೆ ನಿಷೇಧಗೊಳಿಸಿದ ಹಿಮಂತ ಬಿಸ್ವಾ
  • ರಾಜ್ಯ ಕ್ಯಾಬಿನೆಟ್ ಮೀಟಿಂಗ್​ನಲ್ಲಿ ಅಸ್ತಿತ್ವದಲ್ಲಿದ್ದ ಕಾನೂನಿಗೆ ತಿದ್ದುಪಡಿ
  • ರಾಜ್ಯದಲ್ಲಿ ಗೋವುಗಳ ರಕ್ಷಣೆಗಾಗಿ ಈ ನಿರ್ಧಾರವೆಂದ ಸಿಎಂ ಹಿಮಂತ

ಅಸ್ಸಾಂನ ಸಿಎಂ ಹಿಮಂತ್ ಬಿಸ್ವಾ ರಾಜ್ಯಾದ್ಯಂತ ಹೋಟೆಲ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗೋಮಾಂಸ ಸೇವನೆಯನ್ನು ನಿಷಿದ್ಧಗೊಳಿಸಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಬಿಸ್ವಾ ಸರ್ಕಾರ ಈ ನಿರ್ಧಾರಕ್ಕೆ ಬರಲಾಗಿದ್ದು. ಸದ್ಯ ಅಸ್ತಿತ್ವದಲ್ಲಿರುವ ಕಾನೂನಿನಲ್ಲಿ ಹೊಸ ತಿದ್ದುಪಡಿಯನ್ನು ತಂದು ಈ ಒಂದು ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸಿಎಂ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

Advertisment

ಅಸ್ಸಾಂನಲ್ಲಿ ಹೋಟೆಲ್‌, ರೆಸ್ಟೋರೆಂಟ್‌ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗೋಮಾಂಸ ಮಾರಾಟ ಮತ್ತು ಸೇವನೆಯನ್ನು ನಿಷೇಧಿಸುವುದಾಗಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಘೋಷಿಸಿದ್ದಾರೆ. ಗೋಮಾಂಸ ಸೇವನೆಯ ಬಗ್ಗೆ ಅಸ್ತಿತ್ವದಲ್ಲಿರುವ ಕಾನೂನಿಗೆ ತಿದ್ದುಪಡಿ ತರಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಮಸೂದೆಯ ನಿಬಂಧನೆಗಳನ್ನು ಉಲ್ಲಂಘಿಸಿದರೆ 3 ರಿಂದ 8 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 3 ಲಕ್ಷ ರೂಪಾಯಿ 5 ಲಕ್ಷ ರೂಪಾಯಿವರೆಗೆ ದಂಡ ವಿಧಿಸಬಹುದು.

ಇದನ್ನೂ ಓದಿ:ದೇವೇಂದ್ರಗೆ ಇಂದು ಪಟ್ಟಾಭಿಷೇಕ.. ಮಹಾರಾಷ್ಟ್ರದ ನೂತನ ಸಿಎಂ ಆಗಿ ಅಧಿಕಾರ

ಇನ್ನು ಸರ್ಕಾರದ ಈ ನಿರ್ಣಯವನ್ನು ಆಕ್ಷೇಪಿಸಿದ ವಿಪಕ್ಷಗಳು ವಿಸ್ತೃತ ಚರ್ಚೆಗಾಗಿ ಹಾಗೂ ಕಾನೂನನ್ನನು ಆಯ್ಕೆ ಸಮಿತಿಗೆ ಕಳುಹಿಸಬೇಕೆಂದು ಆಗ್ರಹಿಸಿ ಕಲಾಪ ಬಹಿಷ್ಕರಿಸಿವೆ.

Advertisment

ಅಸ್ಸಾಂನಲ್ಲಿ ಗೋಮಾಂಸ ಭಕ್ಷಣೆ ಕಾನೂನು ಬಾಹಿರವಲ್ಲ ಆದ್ರೆ, 2021 ಅಸ್ಸಾಂ ಜಾನುವಾರು ಸಂರಕ್ಷಣೆಯ ಕಾಯಿದೆ ಪ್ರಕಾರ ಜಾನುವಾರುಗಳ ಹತ್ಯೆ ಹಾಗೂ ಗೋಮಾಂಸ ಮಾರಾಟ ಹಾಗೂ ಸಾಗಾಣಿಕೆಯನ್ನು ನಿಯಂತ್ರಿಸುತ್ತದೆ.

ಇದನ್ನೂ ಓದಿ:ಸಲ್ಲುಭಾಯ್​ಗೆ ನಿಲ್ಲದ ಬಿಷ್ಣೋಯ್ ಕಾಟ! ಶೂಟಿಂಗ್​ ಸ್ಥಳಕ್ಕೆ ಬಂದ ಅನಾಮಧೇಯ ವ್ಯಕ್ತಿ ಹೇಳಿದ್ದೇನು?

ಈ ಬಗ್ಗೆ ಮಾತನಾಡಿರುವ ಸಿಎಂ ಹಿಮಂತ ಬಿಸ್ವಾ ಶರ್ಮಾ ಅಸ್ಸಾಂನಾದ್ಯಂತ ಗೋವುಗಳ ರಕ್ಷಣೆಗಾಗಿ ನಾವು ಈ ಒಂದು ಕಾಯಿದೆಯನ್ನು ಪರಿಚಯಿಸಿದ್ದೇವೆ ಮತ್ತು ನಾವು ಯಶಸ್ವಿಯಾಗಿದ್ದೇವೆ. ರಾಜ್ಯ ವಿಧಾನಸಭೆಯಲ್ಲಿ ಈ ಒಂದು ಕಾಯಿದೆ ಒಪ್ಪಿಗೆ ಪಡೆದಿದೆ ಎಂದು ಹೇಳಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment