/newsfirstlive-kannada/media/post_attachments/wp-content/uploads/2025/01/Police-zeep.jpg)
ಅದೆಷ್ಟೋ ಸಲ ಗೂಗಲ್ ಮ್ಯಾಪ್ ನಂಬಿ ಮೋಸ ಹೋದ ಘಟನೆಗಳ ಬಗ್ಗೆ ವರದಿಯಾಗಿವೆ. ಇದೀಗ ಅಸ್ಸಾಂ ಪೊಲೀಸರು ದಾರಿ ತಪ್ಪಿ, ಸ್ಥಳೀಯರಿಂದ ಒದೆ ತಿಂದ ಪ್ರಸಂಗ ನಡೆದಿದೆ.
ಅಷ್ಟಕ್ಕೂ ಆಗಿದ್ದು ಏನು?
ಅಸ್ಸಾಂನ 16 ಪೊಲೀಸರು ಪ್ರಕರಣ ಒಂದನ್ನು ಬೇಧಿಸಲು ಹೊರಟಿದ್ದರು. ಸರಿಯಾದ ದಾರಿ ಗೊತ್ತಿರದ ಕಾರಣ ಗೂಗಲ್ ಮ್ಯಾಪ್ ಹಾಕಿಕೊಂಡು ಹೊರಟಿದ್ದರು. ಅಸ್ಸಾಂನಿಂದ ಹೊರಟ ಪೊಲೀಸರು ನಾಗಲ್ಯಾಂಡ್​​​ ಒಂದು ಹಳ್ಳಿಗೆ ಗೊತ್ತಾಗದೇ ಬಂದಿದ್ದಾರೆ. ಪೊಲೀಸರ ತಂಡವನ್ನು ನೋಡಿದ ಅಲ್ಲಿನ ಸ್ಥಳೀಯರು, ಅವರನ್ನು ಅನುಮಾನಿಸಿ ಒದೆ ನೀಡಿದ್ದಾರೆ.
ಇದನ್ನೂ ಓದಿ:ಹೆರಿಗೆಗೆ 4 ಗಂಟೆ ಬಾಕಿ ಇದ್ದಾಗ ಗೊತ್ತಾಯ್ತು ತಾನು ಗರ್ಭಿಣಿ ಅಂತಾ.. ನವಮಾಸದ ಗರ್ಭದಲ್ಲಿ ಅಚ್ಚರಿ ಬೆಳವಣಿಗೆ
ಈ ಘಟನೆ ಮಂಗಳವಾರ ರಾತ್ರಿ ನಾಗಲ್ಯಾಂಡ್​ನ ಮೊಕೊಕ್ಚುಂಗ್​​ ಜಿಲ್ಲೆಯಲ್ಲಿ ನಡೆದಿದೆ. ಅಪರಾಧಿಗಳ ಬೆನ್ನು ಬಿದ್ದಿದ್ದ ಪೊಲೀಸರು, ಗೊತ್ತಾಗದೇ ಕೊಕೊಚ್ಚುಂಗ್ ಗಡಿ ಪ್ರವೇಶ ಮಾಡಿದ್ದರು. ಆಗ ಅವರ ಮೇಲೆ ಹಲ್ಲೆಯಾಗಿದೆ. ಕೊನೆಗೆ ಅವರನ್ನು ನಾಗಲ್ಯಾಂಡ್ ಪೊಲೀಸರು ರಕ್ಷಣೆ ಮಾಡಿದ್ದಾರೆ.
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ನಾಗಲ್ಯಾಂಡ್​ನಲ್ಲಿರುವ ಟೀ ಗಾರ್ಡನ್ ಅಸ್ಸಾಂನಲ್ಲಿ ಇರುವಂತೆ ಗೂಗಲ್ ಮ್ಯಾಪ್ ತೋರಿಸಿದೆ. ಇದರಿಂದ ಗೊಂದಲ ಆಗಿದೆ. 16 ಪೊಲೀಸ್ ಸಿಬ್ಬಂದಿಯಲ್ಲಿ ಮೂವರು ಮಾತ್ರ ಸಮವಸ್ತ್ರ ಧರಿಸಿದ್ದರು. ಮಿಕ್ಕವರು ನಾಗರಿಕರ ಡ್ರೆಸ್​​ನಲ್ಲಿದ್ದರು. ನಮ್ಮನ್ನು ನೋಡಿದ ಅಲ್ಲಿನ ಸ್ಥಳೀಯರು ಗೊಂದಲಕ್ಕೆ ಒಳಗಾದರು. ಅವರು ನಮ್ಮ ತಂಡದ ಮೇಲೆ ದಾಳಿ ಮಾಡಿದರು. ಓರ್ವ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ:Whatsapp ನಲ್ಲಿ ಅಪ್ಪಿ ತಪ್ಪಿಯೂ ಹೀಗೆ ಮಾಡಿಬಿಟ್ರೆ ಜೈಲು ಶಿಕ್ಷೆ ಆಗುತ್ತೆ; ಇರಲಿ ಎಚ್ಚರ!
ಸ್ಥಳೀಯರು ಗೊಂದಲಕ್ಕೆ ಒಳಗಾಗಿ ದಾಳಿ ಮಾಡಲು ಶುರು ಮಾಡುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಪೊಲೀಸರು, ನಾಗಲ್ಯಾಂಡ್ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಲ್ಲಿಗೆ ಆಗಮಿಸಿದ ನಾಗಲ್ಯಾಂಡ್ ಪೊಲೀಸರು, ಅಸ್ಸಾಂ ಪೊಲೀಸ್ ಸಿಬ್ಬಂದಿಯನ್ನು ರಕ್ಷಣೆ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us