newsfirstkannada.com

ರೆಮಲ್ ಸೈಕ್ಲೋನ್​ ಅಬ್ಬರಕ್ಕೆ 18 ಬಲಿ; ಪ್ರವಾಹ, ಭೂಕುಸಿತದಿಂದ 13 ಜಿಲ್ಲೆಗಳ ಜನರಿಗೆ ಸಂಕಷ್ಟ

Share :

Published June 4, 2024 at 6:07am

  ಹಗಲು ರಾತ್ರಿ ಎನ್ನದೇ ರಕ್ಷಣೆ ಕಾರ್ಯದಲ್ಲಿ ತೊಡಗಿರುವ ASDMA

  ಮಳೆ- ಭೂ ಕುಸಿತದಿಂದ 4,931 ಹೆಕ್ಟೇರ್ ಪ್ರದೇಶದಲ್ಲಿರುವ ಬೆಳೆ ನಾಶ

  ಭೀಕರ ಚಂಡಮಾರುತದಿಂದ ಎಷ್ಟು ಲಕ್ಷ ಜನರಿಗೆ ತೊಂದರೆ ಆಗಿದೆ..?

ರೆಮಲ್ ಚಂಡಮಾರುತ ಪ್ರಭಾವದಿಂದ ಅಸ್ಸಾಂನಲ್ಲಿ ಭಾರೀ ಮಳೆ ಮತ್ತು ಭೂಕುಸಿತ ಉಂಟಾಗುತ್ತಿದ್ದು ಸಾವಿನ ಸಂಖ್ಯೆ 18ಕ್ಕೆ ಏರಿಕೆಯಾಗಿದೆ. ರಸ್ತೆ ಮತ್ತು ರೈಲು ಸಂಪರ್ಕದ ಮೇಲೂ ರೆಮಲ್ ಪರಿಣಾಮ ಬೀರಿದ್ದು, ಸಾಮಾನ್ಯ ಜನಜೀವನದ ಅಸ್ತವ್ಯಸ್ತಗೊಂಡಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ರೆಮಲ್ ಸೈಕ್ಲೋನ್​ನಿಂದ ಅಸ್ಸಾಂನ 13 ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗಿದ್ದು ಸಾವಿನ ಸಂಖ್ಯೆ 18ಕ್ಕೆ ಏರಿಕೆ ಕಂಡಿದೆ. ಅಲ್ಲದೇ 5 ಲಕ್ಷಕ್ಕೂ ಹೆಚ್ಚು ಜನರು ಮಳೆಯಿಂದ ತೊಂದರೆಗೆ ಒಳಗಾಗಿದ್ದಾರೆ. ನಾಗಾವ್ ಜಿಲ್ಲೆಯಲ್ಲಿ 3 ಲಕ್ಷ ಜನರು ನೆರೆ ಸಂತ್ರಸ್ತರಾಗಿದ್ದಾರೆ. ಕ್ಯಾಚಾರ್ ಜಿಲ್ಲೆಯಲ್ಲಿ 1 ಲಕ್ಷ ಜನರು ತೊಂದರೆಗೆ ಸಿಲುಕಿಕೊಂಡಿದ್ದಾರೆ. ಒಟ್ಟು 564 ಹಳ್ಳಿಗಳು ಅಪಾಯದಲ್ಲಿವೆ. ಭೀಕರ ಮಳೆ ಹಾಗೂ ಭೂ ಕುಸಿತದಿಂದ 4,931 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಮುಳುಗಡೆಯಾಗಿದೆ ಎಂದು ಹೇಳಲಾಗ್ತಿದೆ.

ಇದನ್ನೂ ಓದಿ: ಮನೆಗೆ ನುಗ್ಗಿದ್ದು ಕಳ್ಳತನಕ್ಕೆ.. ಆದ್ರೆ ಎಸಿ ಆನ್ ಮಾಡಿ ಗಡದ್ ನಿದ್ದೆ ಹೊಡೆದ.. ಖದೀಮನನ್ನ ಬೆಳಗ್ಗೆ ಎಬ್ಬಿಸಿದ್ಯಾರು?

ಅಸ್ಸಾಂನಲ್ಲಿ ಹರಿಯುವ ಕೊಪಿಲಿ, ಬರಾಕ್, ಕುಶಿಯಾರ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದರಿಂದ ಜನರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಕಳೆದೆರಡು ದಿನಗಳಿಂದ ಅಸ್ಸಾಂ ಮತ್ತು ಇತರ ನೆರೆಯ ರಾಜ್ಯಗಳಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬ್ರಹ್ಮಪುತ್ರ ನದಿ ನೀರಿನ ಮಟ್ಟ ಕೂಡ ಏರಿಕೆಯಾಗಿದೆ. ಸರ್ಕಾರ 275 ಪರಿಹಾರ ಶಿಬಿರಗಳು ಮತ್ತು ಆಹಾರ ವಿತರಣಾ ಕೇಂದ್ರಗಳನ್ನು ತೆರೆದಿದ್ದು ನೆರೆ ಸಂತ್ರಸ್ತರ ನೆರವಿಗೆ ನಿಂತಿದೆ. 39,269 ಜನರು ಆಶ್ರಯ ಪಡೆದಿದ್ದಾರೆ. ಪ್ರವಾಹದಿಂದಾಗಿ ರಾಜ್ಯದಲ್ಲಿ 103 ರಸ್ತೆಗಳು ಹಾಳಾಗಿವೆ. ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ASDMA) ಹಗಲು ರಾತ್ರಿ ಎನ್ನದೇ ರಕ್ಷಣೆಯಲ್ಲಿ ತೊಡಗಿದೆ ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೆಮಲ್ ಸೈಕ್ಲೋನ್​ ಅಬ್ಬರಕ್ಕೆ 18 ಬಲಿ; ಪ್ರವಾಹ, ಭೂಕುಸಿತದಿಂದ 13 ಜಿಲ್ಲೆಗಳ ಜನರಿಗೆ ಸಂಕಷ್ಟ

https://newsfirstlive.com/wp-content/uploads/2024/06/ASSAM_1.jpg

Load More