Advertisment

‘ಬ್ಯೂಟಿ’ ಬ್ಯಾಡ್‌ಲಕ್‌.. ಶವದ ಮುಂದೆ 24 ಗಂಟೆ ಕಾಲ ಕಳೆದ ಪ್ರಿಯಕರ; ಬೆಂಗಳೂರಲ್ಲಿ ಭಯಾನಕ ಕೃತ್ಯ!

author-image
admin
Updated On
‘ಬ್ಯೂಟಿ’ ಬ್ಯಾಡ್‌ಲಕ್‌.. ಶವದ ಮುಂದೆ 24 ಗಂಟೆ ಕಾಲ ಕಳೆದ ಪ್ರಿಯಕರ; ಬೆಂಗಳೂರಲ್ಲಿ ಭಯಾನಕ ಕೃತ್ಯ!
Advertisment
  • ಜಸ್ಟ್‌ 15 ದಿನದ ಹಿಂದೆ ಬೆಂಗಳೂರಿಗೆ ಬಂದಿದ್ದ ಮೇಕಪ್ ಆರ್ಟಿಸ್ಟ್
  • ಅಸ್ಸಾಂ ಹುಡುಗಿ - ಕೇರಳ ಹುಡುಗನ ಲವ್ ಬೆಂಗಳೂರಲ್ಲಿ ದುರಂತ
  • ಇಂದಿರಾನಗರದ ಸರ್ವೀಸ್ ಅಪಾರ್ಟ್​ಮೆಂಟ್​ಗೆ ಇಬ್ಬರು ಬಂದಿದ್ದರು

ಬೆಂಗಳೂರು: ಇದು ಅಸ್ಸಾಂ ಹುಡುಗಿ-ಕೇರಳ ಹುಡುಗನ ಲವ್ ಕಹಾನಿ. ಚಾಟಿಂಗ್, ಡೇಟಿಂಗ್​ ಅಂತಾನೇ ಶುರುವಾಗಿದ್ದ ಪ್ರೀತಿಯ ಕ್ಲೈಮ್ಯಾಕ್ಸ್​ ಬೆಂಗಳೂರಲ್ಲಿ ಅಂತ್ಯವಾಗಿದೆ. ಮುತ್ತು ಕೊಟ್ಟ ಹುಡುಗನೇ ಪ್ರೇಯಸಿಗೆ ಚಟ್ಟ ಕಟ್ಟಿ ಡೆಡ್​ಬಾಡಿ ಜೊತೆ ಏನೆಲ್ಲಾ ಮಾಡಿದ್ದ ಅನ್ನೋದೇ ರೋಚಕ.

Advertisment

publive-image

ಮುಖದಲ್ಲಿ ಪೌಡರ್, ತುಟಿಲೀ ರೆಡ್​ ಲಿಪ್​ಸ್ಟಿಕ್​. ಮೇಕಪ್ ಬಗ್ಗೆ ಮಾತು. ಈಕೆ ಹಾವಭಾವ ಎಲ್ಲಾ ನೋಡಿದ್ರೇನೆ ಗೊತ್ತಾಗುತ್ತೆ ಈಕೆ ಮೇಕಪ್ ಆರ್ಟಿಸ್ಟ್ ಅಂತ. ಹೆಸರು ಮಾಯಾ ಗೊಗೋಯ್​​. ಅಸ್ಸಾಂ ಮೂಲದವಳು. ಬೇಸರದ ವಿಷಯ ಏನಂದ್ರೆ ಈಕೆ ಈಗ ಜೀವಂತವಾಗಿಲ್ಲ. ಪ್ರೀತಿ ಮಾಡಿದ ಲವ್ವರೇ ಈಕೆಯ ಕಥೆ ಫಿನಿಶ್ ಮಾಡಿ ಬಿಟ್ಟಿದ್ದಾನೆ.

ಇದನ್ನೂ ಓದಿ: ರಸ್ತೆ ದಾಟುತ್ತಿದ್ದ ಬಾಲಕನಿಗೆ ಗುದ್ದಿದ ಕಾರು; ಭಯಾನಕ ಆಕ್ಸಿಡೆಂಟ್ ದೃಶ್ಯ ಸಿಸಿಟಿವಿಯಲ್ಲಿ ಸೆರೆ 

ನೀನೆಲ್ಲೋ ನಾನಲ್ಲೇ ಅಂತ ಬೆಂಗಳೂರಿಗೆ ಬಂದಳು ಚೆಲುವೆ!
ಬಾ ಚಿನ್ನ ರೂಂಗೆ ಅಂದ ಪ್ರಿಯಕರ.. ಬಳಿಕ ಜೀವ ತೆಗೆದೇ ಬಿಟ್ಟ 

Advertisment

ಇದು ಹಸಿಬಿಸಿ ಲವ್ ಕಹಾನಿ. ಅಷ್ಟಕ್ಕೂ ಈ ಮಾಯಾ ಕಥೆ ಮುಗಿಸಿದ ಕಿರಾತಕನ ಹೆಸರು ಅರವ್. ಅರವ್​ ಅನಾಯ್​. ಈತ ಕೇರಳದ ಹುಡುಗ.. ಚೆಂದುಳ್ಳಿ ಚೆಲುವೆ ಮಾಯಾನ ಮುಗಿಸಿದ್ದಾನೆ.

ಅಷ್ಟಕ್ಕೂ ಮಾಯಾ ಹಾಗೂ ಅರವ್​ ಎಷ್ಟು ದಿನದಿಂದ ಪ್ರೀತಿಯಲ್ಲಿ ಅನ್ನೋ ಸ್ಪಷ್ಟತೆ ಇಲ್ಲ.. ಆದ್ರೆ, ಖಾಸಗಿ ಕಂಪನಿಗೆ ಕೆಲಸಕ್ಕೆ ಸೇರಿದ್ದ ಮಾಯಾ ಜಸ್ಟ್​ 15ದಿನಗಳ ಹಿಂದೆಯಷ್ಟೇ ಬೆಂಗಳೂರಿಗೆ ಕಾಲಿಟ್ಟಿದ್ದಳು. ಕಳೆದ 23ನೇ ತಾರೀಖು ಅಂದ್ರೆ, ಶನಿವಾರದಂದು ಅರವ್ ಮತ್ತು ಮಾಯಾ ಇಬ್ಬರೂ ಇಂದಿರಾನಗರದ ಸರ್ವೀಸ್ ಅಪಾರ್ಟ್​ಮೆಂಟ್​ಗೆ ಬಂದಿದ್ದಾರೆ. ಆ ಸಿಸಿಟಿವಿ ದೃಶ್ಯವನ್ನ ನೋಡಿದ್ರೆ ಇಬ್ಬರೂ ಖುಷಿ ಖುಷಿಯಲ್ಲೇ ಅಪಾರ್ಟ್​ಮೆಂಟ್​ ಬಂದಿರೋದು ಕಾಣಿಸುತ್ತೆ.

ರೂಂನಲ್ಲಿ ‘ಪ್ರೀತಿ’ಯ ರಕ್ತಪಾತ..!
ನವೆಂಬರ್ 24ರಂದು ಅಂದ್ರೆ ಕಳೆದ ಭಾನುವಾರದಂದೇ ಮಾಯಾಳನ್ನ ಈ ಯುವಕ ಸಾಯಿಸಿರುವ ಶಂಕೆ ವ್ಯಕ್ತವಾಗಿದೆ. ಗರ್ಲ್‌​ಫ್ರೆಂಡ್ ಕಥೆ ಮುಗಿಸಿದ್ದ ಕಿರಾತಕ, ಮೃತದೇಹದ ಮುಂದೆಯೇ ಸಿಗರೇಟ್ ಸೇದಿದ್ದಾನೆ. ಒಂದು ದಿನವೆಲ್ಲಾ ಪ್ರೇಯಸಿ ಡೆಡ್​ಬಾಡಿ ಜೊತೆಯೇ ಕಳೆದಿದ್ದ ಎನ್ನಲಾಗ್ತಿದೆ. ಕೊನೆಗೆ ಇಂದು ಬೆಳಗ್ಗೆ ಕ್ಯಾಬ್​ ಬುಕ್ ಮಾಡ್ಕೊಂಡು ಹೋಟೆಲ್​ನಿಂದ ಎಸ್ಕೇಪ್ ಆಗಿದ್ದಾನೆ ಅನ್ನೋ ಮಾಹಿತಿ ಇದೆ.

Advertisment

ಇದನ್ನೂ ಓದಿ: ನಿಜಕ್ಕೂ ಇದು ಅಸಹ್ಯಕರ ಸಂಗತಿ.. ನಾಗ ಚೈತನ್ಯ ವಿಚ್ಛೇದನದ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಸಮಂತಾ 

ಸದ್ಯ ಇಂದಿರಾನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಆರೋಪಿ ಅರವ್​ಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಅಷ್ಟಕ್ಕೂ ಖುಷಿಯಲ್ಲೇ ಅಪಾರ್ಟ್​ಮೆಂಟ್​​ಗೆ ಎಂಟ್ರಿ ಕೊಟ್ಟಿದ್ದ ಜೋಡಿ ನಡುವೆ ಆವತ್ತು ಏನಾಯ್ತು? ಕೊಲೆ ಮಾಡುವಷ್ಟು ದ್ವೇಷವಾದ್ರು ಏನಿತ್ತು? ಕೊಂದ ಬಳಿಕ ಡೆಡ್​​ಬಾಡಿ ಸಾಗಿಸಲು ಆರೋಪಿ ಪ್ಲ್ಯಾನ್​ ಏನಾದ್ರು ಮಾಡಿದ್ನಾ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗೋದು ಪ್ರೇಯಸಿ ಕೊಂದವ ಸಿಕ್ಕ ನಂತರವೇ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment