newsfirstkannada.com

ತಂಗಿಯನ್ನು ಚುಡಾಯಿಸಬೇಡಿ ಎಂದಿದ್ದಕ್ಕೆ ಪುಡಿರೌಡಿಗಳಿಂದ ಹಲ್ಲೆ; ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ಅಣ್ಣ

Share :

Published February 13, 2024 at 8:10am

    ಸೈಕಲ್ ಚೈನ್, ಹಾಕಿ ಸ್ಟಿಕ್​ನಿಂದ ಅಣ್ಣನ ಮೇಲೆ ಹಲ್ಲೆ

    ತಲೆಗೆ ಬಲವಾದ ಪೆಟ್ಟು, ಸಾವು ಬದುಕಿನ ಮಧ್ಯೆ ಹೋರಾಟ

    ಒಬ್ಬನೇ ಮಗನ ಪರಿಸ್ಥಿತಿ ಕಂಡು ಪೋಷಕರು ಕಣ್ಣೀರು

ಗದಗ: ತಂಗಿಯನ್ನು ಚುಡಾಯಿಸಬೇಡಿ ಅಂತ ಬುದ್ಧಿವಾದ ಹೇಳಿದ್ದಕ್ಕೆ ರೌಡಿಗಳು ಅಣ್ಣನ ಮೇಲೆಯೇ ಹಲ್ಲೆ ಮಾಡಿರುವ ಘಟನೆ ಗದಗನ ಬೆಟಗೇರಿಯ ಹುಯಿಲಗೋಳದಲ್ಲಿ ನಡೆದಿದೆ. ನನ್ನ ತಂಗಿಯನ್ನು ಯಾಕೆ ಚುಡಾಯಿಸ್ತೀರಿ ಅಂತ ತೇಜಸ್ ಮೇಹರವಾಡಿ ಪ್ರಶ್ನೆ ಮಾಡಿದ್ದ. ಇದಕ್ಕೆ ರೊಚ್ಚಿಗೆದ್ದ ರೌಡಿಗಳು ತೇಜಸ್​ನನ್ನು ಅಟ್ಟಾಡಿಸಿ ಹಾಕಿ ಸ್ಟಿಕ್, ಪಂಚ್, ಸೈಕಲ್ ಚೈನ್​ಗಳಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.

ಫೆಬ್ರುವರಿ 8 ರಂದು ನಡೆದ ಘಟನೆ ಇದಾಗಿದ್ದು, ಘಟನೆಯಲ್ಲಿ ತೇಜಸ್ ತಲೆಗೆ ಬಲವಾದ ಪೆಟ್ಟು ಬಿದ್ದು ಖಾಸಗಿ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡ್ತಿದ್ದಾನೆ. ಇನ್ನು ಎಂಟು ಯುವಕರ ಗುಂಪಿನಿಂದ ಅಟ್ಯಾಕ್ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಇನ್ನುಳಿದ ಆರೊಪಿಗಳಿಗಾಗಿ ಬಲೆ ಬೀಸಿದ್ದಾರೆ.

ಅತ್ತ ಒಬ್ಬನೇ ಮಗನನ್ನು ಐಸಿಯುನಲ್ಲಿ ನೋಡಿ ಹೆತ್ತವರು ಕಣ್ಣೀರು ಹಾಕುತ್ತಿದ್ದಾರೆ. ಹಲ್ಲೆ ಮಾಡಿದವ್ರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಅಂತ ಒತ್ತಾಯ ಮಾಡಿದ್ದಾರೆ. ಇಂಜಿನಿಯರಿಂಗ್ ಮುಗಿಸಿ ಜಾಬ್ ಇಂಟರ್ನ್ಶಿಪ್ ಮುಗಿಸಿ ಗದಗಗೆ ಬಂದಿದ್ದ ಮಗನ ಮೇಲೆ ಅಟ್ಯಾಕ್​ ನಡೆದಿದೆ.

ಇನ್ನು ಪುಡಿರೌಡಿಗಳ ಅಟ್ಟಹಾಸಕ್ಕೆ ಗದಗ-ಬೆಟಗೇರಿ ಅವಳಿ ನಗರದ ಜನರು ಆಕ್ರೋಶ ಹೊರಹಾಕಿದ್ದಾರೆ. ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತಂಗಿಯನ್ನು ಚುಡಾಯಿಸಬೇಡಿ ಎಂದಿದ್ದಕ್ಕೆ ಪುಡಿರೌಡಿಗಳಿಂದ ಹಲ್ಲೆ; ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ಅಣ್ಣ

https://newsfirstlive.com/wp-content/uploads/2024/02/gadag-1.jpg

Load More