Advertisment

300 ಕೋಟಿ ಮೌಲ್ಯದ 142 ಸೈಟ್‌ಗಳು ಜಪ್ತಿ.. ಇದು ನ್ಯೂಸ್​ಫಸ್ಟ್​ ವರದಿಗೆ ಸಿಕ್ಕ ಬಿಗ್ ಇಂಪ್ಯಾಕ್ಟ್..!

author-image
Ganesh
Updated On
ಮುಡಾ ಕೇಸ್​​ಗೆ ಹೊಸ ಟ್ವಿಸ್ಟ್​.. ಹಗರಣ ನಡೆದಿದ್ದು ಬರೋಬ್ಬರಿ 700 ಕೋಟಿ ರೂಪಾಯಿಯದ್ದು! ಇಡಿ ಆರೋಪಗಳೇನು?
Advertisment
  • ಸಿಎಂ ಸಿದ್ದರಾಮಯ್ಯಗೆ ಮತ್ತೆ ಮುಡಾ ಸಂಕಷ್ಟ
  • ನಿರಂತರ ವರದಿ ಮಾಡಿದ್ದ ನಿಮ್ಮ ನ್ಯೂಸ್‌ಫಸ್ಟ್
  • ED ಕ್ರಮ ಬೆನ್ನಲ್ಲೇ ದೂರುದಾರ ಸ್ನೇಹಮಯಿ‌ಕೃಷ್ಣ ಏನ್ ಹೇಳಿದ್ರು?

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಹಗರಣದ ಬಗ್ಗೆ ಜಾರಿ ನಿರ್ದೇಶನಾಲಯದ ತನಿಖೆ ಮುಂದುವರೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯಗೆ ಸೇರಿದ್ದ ಆಸ್ತಿ ಸೇರಿ ಒಟ್ಟು 142 ಸೈಟ್​ಗಳನ್ನ ಇಡಿ ಜಪ್ತಿ ಮಾಡಿದೆ. ಇದು ನ್ಯೂಸ್​ ಫಸ್ಟ್​ ವರದಿಗೆ ಸಿಕ್ಕ ಬಿಗ್ ಬಿಗ್​ ಬಿಗ್​ ಇಂಪ್ಯಾಕ್ಟ್.. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರು ಥಳಕು ಹಾಕಿಕೊಂಡಿರುವ ಮುಡಾ ಹಗರಣದ ಬಗ್ಗೆ ಮೊದಲು ಸುದ್ದಿ ಮಾಡಿದ ನ್ಯೂಸ್​ ಫಸ್ಟ್​ಗೆ ಮತ್ತೋಂದು ಇಂಪ್ಯಾಕ್ ಕಿರೀಟ ಸಿಕ್ಕಿದೆ.

Advertisment

[caption id="attachment_89015" align="alignnone" width="800"]ಸ್ನೇಹಮಯಿ ಕೃಷ್ಣ ಸ್ನೇಹಮಯಿ ಕೃಷ್ಣ[/caption]

142 ಸೈಟ್​ಗಳು ಜಪ್ತಿ

ಮುಡಾ ಹಗರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ತನಿಖೆ ಮುಂದುವರೆದಿದ್ದು ಮೈಸೂರಿನಲ್ಲಿ ಹಲವು ಸೈಟ್​ಗಳನ್ನ ಜಪ್ತಿ ಮಾಡಿದೆ. ತನಿಖೆಯಲ್ಲಿ ಮುಡಾ ಸೈಟುಗಳು, ಅನೇಕ ರಿಯಲ್ ಎಸ್ಟೇಟ್ ವ್ಯವಹಾರಸ್ಥರ ಹೆಸರಿನಲ್ಲಿ ಹಾಗೂ ಮದ್ಯವರ್ತಿಗಳ ಹೆಸರಿನಲ್ಲಿ ನೋಂದಾಯಿಸ್ಪಟ್ಟಿರುವುದನ್ನ ಗುರುತಿಸಿರುವ ಮುಡಾ, ಅವೆಲ್ಲವನ್ನೂ 2002ರ ಅಕ್ರಮ ಹಣ ವರ್ಗಾವಣೆ ಕಾಯ್ದೆ ಅಡಿ ಮೈಸೂರಿನಲ್ಲಿ ಅಂದಾಜು 300 ಕೋಟಿ ರೂಪಾಯಿ ಮೌಲ್ಯದ 142 ಸೈಟುಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಈ ಬಗ್ಗೆ ಇ.ಡಿ ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದೆ.

Advertisment

ಈ ಪ್ರಕರಣದ ದೂರುದಾರ ಸ್ನೇಹಮಯಿ‌ಕೃಷ್ಣ ನ್ಯೂಸ್​ ಫಸ್ಟ್​ ವರದಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಮ್ಮ ಹೋರಾಟಕ್ಕೆ ಮೊದಲ ಹಂತದ ಜಯ ಸಿಕ್ಕಿದೆ. 142 ಆಸ್ತಿಯಲ್ಲಿ ಸಿಎಂ ಸಿದ್ದರಾಮಯ್ಯ, ಶಾಸಕ‌ ಜಿ‌.ಟಿ.ದೇವೇಗೌಡರ ಕುಟುಂಬ, ಪಾಲಿಕೆ ಮಾಜಿ ಸದಸ್ಯ, ಬಿಲ್ಡರ್​ಗಳದ್ದೂ‌ ಇರಬಹುದು ಎಂದಿದ್ದಾರೆ. ವಕೀಲ ವಿ.ರವಿಕುಮಾರ್ ಕೂಡ ಮಾತನಾಡಿ ನ್ಯೂಸ್ ಫಸ್ಟ್‌ಗೆ ಧನ್ಯವಾದ ತಿಳಿಸಿದ್ದಾರೆ.

ಇದನ್ನೂ ಓದಿ:ಕಾಂಗ್ರೆಸ್‌ನಂತೆಯೇ ಬಿಜೆಪಿಯಿಂದಲೂ ‘ಗ್ಯಾರಂಟಿ’ ಮಾದರಿ ಯೋಜನೆಗಳ ಘೋಷಣೆ; ಏನವು?

publive-image

ನಮ್ಮ ಹೋರಾಟ ಮುಂದುವರಿಯಲಿದೆ. ಮಾಧ್ಯಮಗಳ ಸಹಕಾರ ಪ್ರಮುಖವಾಗಿ ಸಿಕ್ಕಿದೆ. ವಿಶೇಷವಾಗಿ ನ್ಯೂಸ್​ಫಸ್ಟ್​. ಆರಂಭದಿಂದಲೂ ನ್ಯೂಸ್​ಫಸ್ಟ್​ನ ಬೆಂಬಲ ಸಿಕ್ಕಿದೆ. ಈ ಸಂದರ್ಭದಲ್ಲಿ ಧನ್ಯವಾದ ತಿಳಿಸುತ್ತೇನೆ ಎಂದಿದ್ದಾರೆ ದೂರುದಾರ ಸ್ನೇಹಮಯಿ ಕೃಷ್ಣ.

Advertisment

ಸತ್ಯಮೇವ ಜಯತೆ.. ಕೊನೆಗೂ ಸತ್ಯಕ್ಕೆ ಜಯ ಸಿಕ್ಕಿದೆ ಅಂತಾ ನ್ಯೂಸ್ ಫಸ್ಟ್​​ಗೆ ಶಾಸಕ‌ ಟಿ.ಎಸ್.ಶ್ರೀವತ್ಸ ಪ್ರತಿಕ್ರಿಯೇ ನೀಡಿದ್ರೆ.. ಸಾಮಾಜಿಕ ಕಾರ್ಯಕರ್ತ ಗಂಗರಾಜು ಕೂಡ ಪ್ರಕರಣದಲ್ಲಿ ತಪ್ಪೆಸಗಿದವರು ಎಲ್ಲರೂ ಸಿಕ್ಕಿಕೊಳ್ತಾರೆ ಎಂದಿದ್ದಾರೆ. ಒಟ್ನಲ್ಲಿ, ಮುಡಾ ಹಗರಣ ಸದ್ಯ ಸಿಎಂ ಸಿದ್ದರಾಮಯ್ಯರ ಕೊರಳಿಗೆ ಹಾವು ಸುತ್ತಿದ್ದಂತೆ ಸುತ್ತಿಕೊಂಡು ಹುಸಿರಾಡೋದಕ್ಕೂ ಬಿಡದೆ ಕಾಡ್ತಿದೆ. ಇನ್ನೂ ತನಿಖೆಯಲ್ಲಿ ಅದೆಷ್ಟು ಜನರ ಹೆಸರು ಹೊರ ಬರುತ್ತೆ ಅಂತಾ ಕಾದು ನೋಡಬೇಕಿದೆ.

ಇದನ್ನೂ ಓದಿ:ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಕೇಸ್: EDಯಿಂದ 300 ಕೋಟಿ ಮೌಲ್ಯದ ಸ್ಥಿರಾಸ್ತಿ ಮುಟ್ಟುಗೋಲು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment