ಸಹಾಯಕ ನಿಯಂತ್ರಕ, ಲೆಕ್ಕಪರಿಶೋಧನ ಅಧಿಕಾರಿ ಮುಖ್ಯಪರೀಕ್ಷೆ.. ಕೊನೆ ದಿನಾಂಕದ ಒಳಗೆ ಅಪ್ಲೇ ಮಾಡಿ

author-image
Bheemappa
Updated On
ಸಹಾಯಕ ನಿಯಂತ್ರಕ, ಲೆಕ್ಕಪರಿಶೋಧನ ಅಧಿಕಾರಿ ಮುಖ್ಯಪರೀಕ್ಷೆ.. ಕೊನೆ ದಿನಾಂಕದ ಒಳಗೆ ಅಪ್ಲೇ ಮಾಡಿ
Advertisment
  • ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ ಯಾವಾಗ ಗೊತ್ತಾ?
  • ಪೂರ್ವಭಾವಿ ಪರೀಕ್ಷೆಯಲ್ಲಿ ಪಾಸ್ ಆದ ಅಭ್ಯರ್ಥಿಗಳಿಗೆ ಅವಕಾಶ
  • ಮುಖ್ಯಪರೀಕ್ಷೆ ನಡೆಯುವ ದಿನಾಂಕ ಯಾವುದು, ಪರೀಕ್ಷಾ ಶುಲ್ಕ..?

ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್​​ಸಿ) ಗ್ರೂಪ್‌ ಬಿ ವೃಂದದ ಲೆಕ್ಕಪರಿಶೋಧನ ಅಧಿಕಾರಿ ಮತ್ತು ಸಹಾಯಕ ನಿಯಂತ್ರಕ (ಎಸ್​​ಎಎಡಿ)ರು ಹುದ್ದೆಗಳ ನೇಮಕಾತಿಯ ಮುಖ್ಯ ಪರೀಕ್ಷೆಯ ಅಧಿಸೂಚನೆ ರಿಲೀಸ್ ಮಾಡಲಾಗಿದೆ. 2024ರ ಸೆಪ್ಟೆಂಬರ್‌ನಲ್ಲಿ ಕೆಪಿಎಸ್‌ಸಿ ಎಸ್​​ಎಎಡಿ ಹುದ್ದೆಗಳ ಮುಖ್ಯಪರೀಕ್ಷೆಗೆ ಅರ್ಹತೆ ಪಡೆದವರ ಪಟ್ಟಿ ಪ್ರಕಟಿಸಲಾಗಿತ್ತು. ಈ ಪರೀಕ್ಷೆಗೆ ಅಭ್ಯರ್ಥಿಗಳು ಹಾಜರಾಗಬೇಕು ಎಂದರೆ ಪೂರ್ಣ ಮಾಹಿತಿಯ ಅರ್ಜಿ ಈಗ ಸಲ್ಲಿಸಬೇಕಾಗಿದೆ.

ಪಬ್ಲಿಕ್ ಸರ್ವೀಸ್‌ ಕಮಿಷನ್ ಸ್ಟೇಟ್‌ ಆಡಿಟ್ ಅಂಡ್‌ ಅಕೌಂಟ್ಸ್‌ ಡಿಪಾರ್ಟ್‌ಮೆಂಟ್​ನ ಲೆಕ್ಕಪರಿಶೋಧನ ಮತ್ತು ಸಹಾಯಕ ನಿಯಂತ್ರಕರು ಹುದ್ದೆಗಳ ಮುಖ್ಯ ಪರೀಕ್ಷೆಗೆ ದಿನಾಂಕ ಘೋಷಣೆ ಮಾಡಲಾಗಿದೆ. ಈ ಹುದ್ದೆಗಳಿಗೆ ಸಂಬಂಧಿಸಿದ ಮುಖ್ಯಪರೀಕ್ಷೆಯನ್ನು ದಿನಾಂಕ 21 ಜನವರಿ 2025 ರಿಂದ 24 ಜನವರಿ 2025ರವರೆಗೆ ನಡೆಸಲಾಗುತ್ತೆ. ಪ್ರಿಲಿಮ್ಸ್‌ ಪರೀಕ್ಷೆಯಲ್ಲಿ ಬರೆದು ಪಾಸ್ ಆಗಿ ಮೆರಿಟ್‌ ಪಟ್ಟಿಯಲ್ಲಿ ಹೆಸರು ಪಡೆದ ಅಭ್ಯರ್ಥಿಗಳು ಮುಖ್ಯಪರೀಕ್ಷೆಗೆ ಹಾಜರಾಗಬಹುದು.

ಅರ್ಜಿ ಹೇಗೆ ಸಲ್ಲಿಸಬೇಕು ಎನ್ನುವ ಮಾಹಿತಿ ಇಲ್ಲಿದ್ದು ಅರ್ಜಿ ಸಲ್ಲಿಕೆಗೆ ಕೇವಲ 14 ದಿನ ಗಡುವ ಮಾತ್ರ ಇಲಾಖೆ ನೀಡಿತ್ತು. ಇನ್ನೇನು ಎರಡು ದಿನದಲ್ಲಿ ಈ ಅವಧಿ ಮುಗಿದು ಹೋಗಲಿದೆ. ಹೀಗಾಗಿ ಅರ್ಜಿ ಸಲ್ಲಿಸದೇ ಇರುವವರು ಅರ್ಜಿ ಸಲ್ಲಿಕೆ ಮಾಡಬಹುದು. ಅದಕ್ಕಾಗಿ ಈ ವಿವರ ಓದಿಕೊಂಡು ಆಕಾಂಕ್ಷಿಗಳು ಅರ್ಜಿ ಭರ್ತಿ ಮಾಡಬೇಕು.

ಇದನ್ನೂ ಓದಿ: ಸುಪ್ರೀಂಕೋರ್ಟ್​ನಲ್ಲಿ 100ಕ್ಕೂ ಹೆಚ್ಚು ಉದ್ಯೋಗಗಳು.. ಯಾವ್ಯಾವ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ?

publive-image

ಏಕೆಂದರೆ ಮತ್ತೆ ಅರ್ಜಿಯ ತಿದ್ದುಪಡಿಗೆ ಅವಕಾಶ ಇರಲ್ಲ. ಪೂರ್ವಭಾವಿ ಪರೀಕ್ಷೆ ವೇಳೆ ಕೊಟ್ಟ ಸ್ವವಿವರ ಮತ್ತೆ ಈಗ ತಿದ್ದಲು ಬರಲ್ಲ. ಇನ್ನು ದಾಖಲೆಗಳನ್ನು ಅಪ್‌ಲೋಡ್‌ ಮಾಡುವಾಗ ಸ್ಪಷ್ಟವಾಗಿ ಕಾಣುವಂತೆ ಇರಲಿ. ಅಭ್ಯರ್ಥಿಗಳು 1:20 ಅನುಪಾತದಲ್ಲಿ ಪೂರ್ವಭಾವಿ ಪರೀಕ್ಷೆಯಲ್ಲಿ ಗಳಿಸಿದ ಮಾರ್ಕ್ಸ್​ ಆಧಾರದ ಮೇಲೆ ಮೇನ್ ಎಕ್ಸಾಂ ಬರೆಯಬಹುದು. ಮುಖ್ಯ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳು ಹಾಗೂ ಮೀಸಲಾತಿಯಂತೆ ಅಭ್ಯರ್ಥಿಗಳನ್ನ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.

ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡುವುದು ಹೇಗೆ?

ಅಭ್ಯರ್ಥಿಗಳು ವೆಬ್​ಸೈಟ್​ https://kpsconline.karnataka.gov.in/HomePage/index.htmlಗೆ ಭೇಟಿ ನೀಡಬೇಕು. ಲಾಗಿನ್ ಮೇಲೆ ಕ್ಲಿಕ್ ಮಾಡಬೇಕು. ಲಾಗಿನ್ ಆದ ಮೇಲೆ ಪೂರ್ಣ ಮಾಹಿತಿ ನೀಡಬೇಕು. ಮರೆಯದೇ ಪರೀಕ್ಷೆ ಶುಲ್ಕ ಪಾವತಿಸಿ.

ಗ್ರೂಪ್-ಎ ಸಹಾಯಕ ನಿಯಂತ್ರಕರ ಹುದ್ದೆ- 43 ಆರ್​ಪಿಸಿ + 15 ಹೆಚ್​ಕೆ
ಗ್ರೂಪ್-ಬಿ ಲೆಕ್ಕಪರಿಶೋಧನಾಧಿಕಾರಿ ಹುದ್ದೆ- 54 ಉದ್ಯೋಗಗಳು

ಪರೀಕ್ಷಾ ಶುಲ್ಕ ಎಷ್ಟು?

ಎಸ್​​ಸಿ, ಎಸ್​ಟಿ, ಮಾಜಿ ಸೈನಿಕರು, ಸಿ-1, ವಿಶೇಷ ಚೇತನರು- ₹300
ಸಾಮಾನ್ಯ ಅಭ್ಯರ್ಥಿಗಳು- ₹500

ಮುಖ್ಯ ದಿನಾಂಕ

ಮುಖ್ಯ ಪರೀಕ್ಷೆ ದಿನಾಂಕ- 21 ಜನವರಿ 2025 ರಿಂದ 24 ಜನವರಿ 2025
ಅರ್ಜಿ ಸಲ್ಲಿಕೆಯ ಕೊನೆ ದಿನಾಂಕ- 09 ಡಿಸೆಂಬರ್ 2024

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment