/newsfirstlive-kannada/media/post_attachments/wp-content/uploads/2025/02/VP-Singh-Award-3.jpg)
ಹಿಂದುಳಿದ ವರ್ಗಗಳ ಕರ್ನಾಟಕ ಮಾನ್ಯತೆ ಪಡೆದ ಸಂಪಾದಕರ ಮತ್ತು ವರದಿಗಾರರ ಸಂಘ ವಿ.ಪಿ.ಸಿಂಗ್ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಪ್ರಕಟಿಸಿದೆ.
ಕಳೆದ ವರ್ಷದಂತೆ ಈ ಸಾಲಿನಲ್ಲಿಯೂ 5 ಜನ ಸಾಧಕರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ. ಒಳಕೋವೆ ಪುಸ್ತಕ ಬಿಡುಗಡೆ ಕುರಿತಂತೆ ಮಾತನಾಡುವಾಗ ಅಧ್ಯಕ್ಷರಾದ ಗಂಧರ್ವ ಸೇನಾ ಅವರು ಪ್ರಶಸ್ತಿ ಪುರಸ್ಕೃತರ ಹೆಸರುಗಳನ್ನು ಘೋಷಿಸಿದ್ದಾರೆ.
ತುಳಿತಕ್ಕೊಳಗಾದ ಸಮುದಾಯಗಳ ಪರ ಅಭಿವ್ಯಕ್ತಿಸುವ ಹಿರಿಯ ಸಾಹಿತಿ ಕೆ. ಷರೀಫಾ, ವರದಿಗಾರರಾಗಿ, ವಿಶೇಷ ವರದಿಗಾರರಾಗಿ, ಸಂಪಾದಕರಾಗಿ ಗಣನೀಯ ಸೇವೆ ಸಲ್ಲಿಸಿರುವ ಐ. ಹೆಚ್ ಸಂಗಮದೇವ, ಹಿಂದುಳಿದ ವರ್ಗಗಳ ಮಹಿಳೆಯರ ಸಬಲೀಕರಣಕ್ಕೆ ಶ್ರಮಿಸಿರುವ ಶ್ರೀಮತಿ ನಳಿನಾಕ್ಷಿ ಸಣ್ಣಪ್ಪ, ಸಾಮಾಜಿಕ ಸೇವೆಯಲ್ಲಿ ಅನುಪಮ ಸೇವೆ ಸಲ್ಲಿಸಿರುವ ಎಂ. ನಾಗವೇಣಿ, ಹೈದರಾಬಾದ್ ಕರ್ನಾಟಕದಲ್ಲಿ ಕನ್ನಡ ಭಾಷಾ ಪತ್ರಿಕೆ ಆರಂಭಿಸಿ, ಶೋಷಿತರ ಧ್ವನಿಯಾಗಿರುವ ಸಂಧ್ಯಾಕಾಲ ಪತ್ರಿಕೆಯ ಸಂಪಾದಕ ಶಿವಲಿಂಗಪ್ಪ ಅವರುಗಳಿಗೆ ವಿ.ಪಿ.ಸಿಂಗ್ ಪ್ರಶಸ್ತಿಯನ್ನು ಘೋಷಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ