ಪ್ರೀತಿಯ ಶ್ವಾನದ ಜೊತೆ ಮತ್ತೆ ಒಂದಾದ ಸುನಿತಾ ವಿಲಿಯಮ್ಸ್.. ಮನಮಿಡಿಯುವ ವಿಡಿಯೋ ಇಲ್ಲಿದೆ!

author-image
admin
Updated On
ಪ್ರೀತಿಯ ಶ್ವಾನದ ಜೊತೆ ಮತ್ತೆ ಒಂದಾದ ಸುನಿತಾ ವಿಲಿಯಮ್ಸ್.. ಮನಮಿಡಿಯುವ ವಿಡಿಯೋ ಇಲ್ಲಿದೆ!
Advertisment
  • 9 ತಿಂಗಳ ನಂತರ ಬಾಹ್ಯಾಕಾಶದಿಂದ ಭೂಮಿಗೆ ಮರಳಿರುವ ಸುನಿತಾ
  • ಬಹಳ ದಿನಗಳಾದ ಮೇಲೆ ಸುನಿತಾ ಅವರನ್ನು ಗುರುತು ಹಿಡಿದ ಶ್ವಾನಗಳು
  • ಸುನಿತಾ, ಗನ್ನರ್, ಗೋರ್ಬಿ ಜೊತೆ ಮತ್ತೆ ಒಂದಾದ ವಿಡಿಯೋ ಇಲ್ಲಿದೆ

ಭಾರತೀಯ ಮೂಲದ ಅಮೆರಿಕನ್ ಗಗನಯಾತ್ರಿ ಸುನಿತಾ ವಿಲಿಯಮ್ಸ್ 9 ತಿಂಗಳ ನಂತರ ಬಾಹ್ಯಾಕಾಶದಿಂದ ಭೂಮಿಗೆ ಮರಳಿದ್ದು ಎಲ್ಲರಿಗೂ ಖುಷಿಯಾದ ವಿಚಾರ. ಸುನಿತಾ ವಿಲಿಯಮ್ಸ್‌ ಭೂಮಿಗೆ ವಾಪಸ್ ಬಂದ 15 ದಿನದ ಬಳಿಕ ಮತ್ತೊಂದು ಖುಷಿಯ ವಿಡಿಯೋ ಬಿಡುಗಡೆಯಾಗಿದೆ.

ಕಳೆದ ಮಾರ್ಚ್ 18ರಂದು ಅಂತಾರಾಷ್ಟ್ರಿಯ ಬಾಹ್ಯಾಕಾಶ ವಿಮಾನ ನಿಲ್ದಾಣದಿಂದ ಹೊರಟಿದ್ದ ಸುನಿತಾ ವಿಲಿಯಮ್ಸ್‌ ಸೇರಿ 4 ಗಗನಯಾತ್ರಿಗಳು ಸುರಕ್ಷಿತವಾಗಿ ಫ್ಲೋರಿಡಾ ಕಡಲಿಗೆ ಬಂದಿಳಿದಿದ್ದರು. ನಂತರ ಆರೈಕೆಗಾಗಿ ಗಗನಯಾತ್ರಿಗಳನ್ನು ಸುರಕ್ಷಿತ ಜಾಗಕ್ಕೆ ಕೊಂಡೊಯ್ಯಲಾಗಿತ್ತು. ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿತ್ತು.

publive-image

ಮನೆಗೆ ಮರಳಿದ ಸುನಿತಾ ವಿಲಿಯಮ್ಸ್‌!
9 ತಿಂಗಳಾದ ಮೇಲೆ ಭೂಮಿಗೆ ಬಂದಿರುವ ಸುನಿತಾ ವಿಲಿಯಮ್ಸ್ ಅವರು ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ತಮ್ಮ ಮನೆಗೂ ಮರಳಿರುವ ಸುನಿತಾ ವಿಲಿಯಮ್ಸ್‌, ಮೊದಲ ಬಾರಿಗೆ ತಮ್ಮ ಮುದ್ದಿನ 2 ನಾಯಿಗಳನ್ನು ಭೇಟಿಯಾಗಿದ್ದಾರೆ.

ಸುನಿತಾ ವಿಲಿಯಮ್ಸ್ ತಮ್ಮ ಮನೆಗೆ ಮರಳಿದ ಖುಷಿಯನ್ನು ಈ 2 ಮುದ್ದಾದ ಶ್ವಾನಗಳು ದುಪ್ಪಟ್ಟು ಮಾಡಿವೆ. ಬಹಳ ದಿನಗಳಾದ ಮೇಲೆ ಸುನಿತಾ ಅವರನ್ನು ಗುರುತು ಹಿಡಿದು ಮನೆಯಂಗಳದಲ್ಲಿ ಕುಣಿದಾಡಿವೆ.

ಇದನ್ನೂ ಓದಿ: ಕೈಬೀಸಿ ಸಂಭ್ರಮಿಸಿದ ಸುನಿತಾ ವಿಲಿಯಮ್ಸ್.. ಭೂಮಿಗೆ ಬರಮಾಡಿಕೊಂಡ ಕ್ಷಣ ಹೇಗಿತ್ತು..? Video 

ಸುನಿತಾ ವಿಲಿಯಮ್ಸ್‌ಗೆ ತನ್ನ ಲ್ಯಾಬ್ರಡಾರ್ ರಿಟ್ರೈವರ್ಸ್‌ನ 2 ನಾಯಿಗಳು ಅಂದ್ರೆ ಅಚ್ಚುಮೆಚ್ಚು. ಇದಕ್ಕೆ ಪ್ರೀತಿಯಿಂದ ಗನ್ನರ್, ಗೋರ್ಬಿ ಎಂದು ಕರೆಯುತ್ತಾರೆ. ಗನ್ನರ್, ಗೋರ್ಬಿ ಜೊತೆ ಮತ್ತೆ ಒಂದಾದ ವಿಡಿಯೋವನ್ನು ಸುನಿತಾ ವಿಲಿಯಮ್ಸ್ ಹಂಚಿಕೊಂಡಿದ್ದಾರೆ.


">April 1, 2025

ಸುನಿತಾ ವಿಲಿಯಮ್ಸ್ ಅವರು ಬಾಹ್ಯಾಕಾಶದಲ್ಲಿ ಇದ್ದಾಗಲೇ ತನ್ನ ಶ್ವಾನಗಳ ಬಗ್ಗೆ ಮಾತನಾಡಿದ್ದರು. ನಾನು ಮುಂಜಾನೆಯಲ್ಲಿ ಗನ್ನರ್, ಗೋರ್ಬಿ ಜೊತೆ ವಾಕ್ ಮಾಡುವುದನ್ನು ತುಂಬಾ ಮಿಸ್ ಮಾಡಿಕೊಂಡಿದ್ದೇನೆ. ಭೂಮಿಗೆ ವಾಪಸ್ ಬಂದ ಬಳಿಕ ನಾನು ನನ್ನ ಮುದ್ದಾದ ಗನ್ನರ್, ಗೋರ್ಬಿ ಜೊತೆ ವಾಕ್ ಹೋಗಲು ಆಸೆ ಪಡುತ್ತೇನೆ ಎಂದಿದ್ದರು. ಸುನಿತಾ ವಿಲಿಯಮ್ಸ್ ಭೂಮಿಗೆ ವಾಪಸ್ ಆದ 2 ವಾರದ ಬಳಿಕ ನಾಸಾ ಗಗನಯಾತ್ರಿ ಆಸೆ ಈಡೇರಿಸಲು ಸಹಾಯ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment