/newsfirstlive-kannada/media/post_attachments/wp-content/uploads/2025/03/SUNITA-WILLIAMS-WITH-BHAGAVDGITA.jpg)
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 9 ತಿಂಗಳು ಕಳೆದಿರುವ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಕೊನೆಗೂ ಭೂಮಿಗೆ ವಾಪಸ್ ಬರುತ್ತಿದ್ದಾರೆ. ಇಂದೇ ಅಮೆರಿಕಾದ ಫ್ಲೋರಿಡಾ ಕರಾವಳಿಯ ತೀರದಲ್ಲಿ ಬಂದಿಳಿಯಲಿದ್ದಾರೆ. ಭಾರತೀಯ ಮೂಲದವರಾದ ಸುನೀತಾ ವಿಲಿಯಮ್ಸ್ ಗಗನಯಾನಕ್ಕೆ ಹೋಗುವಾಗ ತಮ್ಮ ಜೊತೆ ಹಿಂದೂ ಧರ್ಮದ ಪವಿತ್ರ ಗ್ರಂಥವಾದ ಭಗವದ್ಗೀತೆ ಹಾಗೂ ಒಂದು ಗಣೇಶನ ಮೂರ್ತಿಯನ್ನು ಕೊಂಡೊಯ್ದಿದ್ದರಂತೆ. ಪ್ರತಿ ಬಾರಿ ಗಗನಯಾನ ಮಾಡುವ ವೇಳೆ ಸುನೀತಾ ವಿಲಿಯಮ್ಸ್ ಈ ಎರಡು ವಸ್ತುಗಳನ್ನು ತಪ್ಪದೇ ತಮ್ಮ ಜೊತೆ ತೆಗೆದುಕೊಂಡು ಹೋಗುತ್ತಾರೆಂದು ತಿಳಿದು ಬಂದಿದೆ.
ಈ ಒಂದು ಕಾರ್ಯದ ಮೂಲಕ ಸನಾತನ ಧರ್ಮದ ಬಗ್ಗೆ ಅವರಿಗೆ ಇರುವ ನಂಬಿಕೆ ಹಾಗೂ ಗೌರವವನ್ನು ಜಗತ್ತಿನ ಮುಂದೆ ಸಾರಿದ್ದಾರೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿಯೂ ಕೂಡ ಭಗವದ್ಗೀತೆ ಹಾಗೂ ಗಣೇಶನ ಮೂರ್ತಿಯನ್ನು ರಾರಾಜಿಸುವಂತೆ ಮಾಡಿದ್ದಾರೆ.
ಇದನ್ನೂ ಓದಿ: ಸುನೀತಾ ವಿಲಿಯಮ್ಸ್​ ಬಾಹ್ಯಾಕಾಶದಿಂದ ವಾಪಸ್ಸಾಗಲು ತಡವಾಗಿದ್ದೇಕೆ? ಏನಿದು ಹೀಲಿಯಂ ಸೋರಿಕೆ?
ವರದಿಗಳ ಪ್ರಕಾರ ಸುನೀತಾ ವಿಲಿಯಮ್ಸ್​ ಪಾಲಿಗೆ ಗಣೇಶ ಗುಡ್​ ಲಕ್ ತರುವ ದೇವರು. ಹೀಗಾಗಿ ಗಗನಯಾನಕ್ಕೆ ಹೋಗುವಾಗಲೆಲ್ಲಾ ತಮ್ಮೊಂದಿಗೆ ಪುಟ್ಟ ಗಣೇಶನ ಮೂರ್ತಿಯನ್ನು ತೆಗೆದುಕೊಂಡು ಹೋಗುತ್ತಾರೆ.
ಸುನೀತಾ ವಿಲಿಯಮ್ಸ್ ಹುಟ್ಟಿ ಬೆಳೆದಿದ್ದೆಲ್ಲಾ ಅಮೆರಿಕಾದಲ್ಲಿಯೇ, ಆದರೆ ಅವರು ಪಾಲಿಸುವುದು ಭಾರತದ ಸನಾತನ ಧರ್ಮವನ್ನ. ಇಂದಿಗೂ ಕೂಡ ಹಿಂದೂ ಧರ್ಮದ ಬಗ್ಗೆ ಅವರಿಗೆ ಅಪಾರ ನಂಬಿಕೆ ಹಾಗೂ ಗೌರವವಿದೆ. ತನ್ನ ಪೋಷಕರ ಹುಟ್ಟೂರಾದ ಗುಜರಾತ್​ನ ಮೆಹಸಾನ್ ಜಿಲ್ಲೆಯ ಜುಲಸಾನಾ ಗ್ರಾಮಕ್ಕೆ ಎರಡು ಬಾರಿ ಭೇಟಿ ನೀಡಿದ್ದಾರೆ. ಈ ಹಿಂದೊಮ್ಮೆ ಬಾಹ್ಯಾಕಾಶಕ್ಕೆ ಹೋದಾಗ ಸುನೀತಾ ವಿಲಿಯಮ್ಸ್ ಭಾರತೀಯರ ನೆಚ್ಚಿನ ತಿಂಡಿಯಲ್ಲಿ ಒಂದಾದ ಸಮೋಸಾವನ್ನು ಕೊಂಡೊಯ್ದಿದ್ದರು.
ಇದನ್ನೂ ಓದಿ:ಸುನಿತಾ ಒಂದೇ ಅಲ್ಲ; ವರ್ಷಗಟ್ಟಲೇ ಬಾಹ್ಯಾಕಾಶದಲ್ಲೇ ಉಳಿದು ದಾಖಲೆ ಬರೆದ ಗಗನಯಾನಿಗಳು ಇವರು..!
ಸುನೀತಾ ವಿಲಿಯಮ್ಸ್​ಗೆ ಹಿಂದೂ ಧರ್ಮದ ಬಗ್ಗೆ ಎಷ್ಟು ಪ್ರೀತಿ ಇದೆಯೋ ಅಷ್ಟೇ ಪ್ರೀತಿ ಭಾರತೀಯ ಆಹಾರಗಳ ಮೇಲೂ ಇದೆ. 2024ರಲ್ಲಿ ಮೂರನೇ ಬಾರಿಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿದ್ದ ಸುನೀತಾ ವಿಲಿಯಮ್ಸ್ ತಮ್ಮೊಂದಿಗೆ ಗಣೇಶನ ಮೂರ್ತಿ ಹಾಗೂ ಭಗವದ್ಗೀತೆಯನ್ನು ತೆಗೆದುಕೊಂಡು ಹೋಗಿದ್ದರಂತೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ