ಬಾಹ್ಯಾಕಾಶದಿಂದ ಸುದ್ದಿಗೋಷ್ಟಿ! ಸುನಿತಾ, ವಿಲ್ಮೋರ್ ಹೇಗೆ ಕಾಣ್ತಿದ್ದರು..? VIDEO

author-image
Ganesh
Updated On
ಬಾಹ್ಯಾಕಾಶದಿಂದ ಸುದ್ದಿಗೋಷ್ಟಿ! ಸುನಿತಾ, ವಿಲ್ಮೋರ್ ಹೇಗೆ ಕಾಣ್ತಿದ್ದರು..? VIDEO
Advertisment
  • ಬಾಹ್ಯಾಕಾಶದಲ್ಲಿ ಸಿಲುಕಿರುವ ಸುನಿತಾ, ಬುಚ್ ವಿಲ್ಮೋರ್
  • ಭೂಮಿಯಿಂದ 400 ಕಿಮೀ ದೂರದಲ್ಲಿರುವ ಬಾಹ್ಯಾಕಾಶ ಕೇಂದ್ರ
  • ಸುದ್ದಿಗೋಷ್ಟಿಯ ವಿಡಿಯೋ ಶೇರ್ ಮಾಡಿದ NASA

ಬಾಹ್ಯಾಕಾಶದಲ್ಲಿ ಸಿಲುಕಿರುವ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಭೂಮಿಯನ್ನು ಮಿಸ್ ಮಾಡಿಕೊಳ್ತಿದ್ದಾರೆ. ಭೂಮಿಯಿಂದ 400 ಕಿಮೀ ದೂರದಲ್ಲಿರುವ ಬಾಹ್ಯಾಕಾಶ ಕೇಂದ್ರದಲ್ಲಿರುವ ಅವರು ನಿನ್ನೆ ಸುದ್ದಿಗೋಷ್ಟಿ ನಡೆಸಿದರು.
ಈ ವೇಳೆ ಮಾತನಾಡಿರುವ ಸುನಿತಾ ವಿಲಿಯಮ್ಸ್​.. ಸ್ಪೇಸ್ ನನ್ನ ನೆಚ್ಚಿನ ಸ್ಥಳಗಳಲ್ಲಿ ಒಂದು. ನಾನಿಲ್ಲಿ ವಾಸಿಸಲು ಇಷ್ಟಪಡುತ್ತೇನೆ.

ನಾವಿಬ್ಬರೂ ಈ ಮೊದಲು ಇಲ್ಲಿಗೆ ಬಂದಿದ್ದೇವು. ನಾವು ಭೂಮಿಗೆ ಹಿಂತಿರುಗಲು ಬಯಸುತ್ತೇವೆ. ಆದರೆ ಆ ಅವಕಾಶಕ್ಕಾಗಿ ನಾವು ಕಾಯಬೇಕು. ನಾನು ಸ್ವಲ್ಪ ನರ್ವಸ್ ಆಗಿದ್ದೆ ಏಕೆಂದರೆ.. ತಕ್ಷಣವೇ ಮನೆಗೆ ಮರಳಲು ಸಾಧ್ಯವಾಗದ ಕಾರಣ ಸ್ವಲ್ಪ ಆತಂಕಕ್ಕೆ ಒಳಗಾಗಿದ್ದೆ ಎಂದು ತಿಳಿಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ನಡೆದ ದೃಶ್ಯವನ್ನು NASA ತನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ನೋಡಲು ತುಂಬಾನೇ ಇಂಟ್ರೆಸ್ಟಿಂಗ್ ಆಗಿದೆ.

ಇದನ್ನೂ ಓದಿ:ಮುಖ್ಯಮಂತ್ರಿ ರೇಸ್​ನಲ್ಲಿ ಕಾಣಿಸಿದ ಮತ್ತೊಬ್ಬ ಲಿಂಗಾಯತ ಲೀಡರ್​; ಸಾಣೇಹಳ್ಳಿ ಶ್ರೀಗಳು ವಕಾಲತ್ತು

ಕಳೆದ ಜೂನ್ 5ರಂದು ಅಮೆರಿಕದ ಮೂಲದ ಬುಚ್ ವಿಲ್ಮೋರ್ ಜೊತೆ ಸುನಿತಾ ಗಗನಯಾನ ಕೈಗೊಂಡಿದ್ದರು. ಎಲ್ಲವೂ ಅಂದುಕೊಂಡಂತೆ ನಡೆದಿದ್ರೆ ಇಷ್ಟೊತ್ತಿಗಾಗಲೇ ಭೂಮಿಗೆ ವಾಪಸ್ ಆಗಬೇಕಿತ್ತು. ಜೂನ್ 6ರಂದು ಕ್ಯಾಪ್ಸುಲ್ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದೆ. 5 ಥ್ರಸ್ಟರ್‌ಗಳಲ್ಲಿ ದೋಷ ಕಂಡುಬಂದಿದೆ. ಬಟ್ ಗಗನನೌಕೆಯಲ್ಲಿ ತಾಂತ್ರಿಕದೋಷ ಕಂಡು ಬಂದಿದ್ದು ಅವರಿಬ್ಬರೂ ಬಾಹ್ಯಾಕಾಶ ನಿಲ್ದಾಣದಲ್ಲೇ ಉಳಿದುಕೊಳ್ಳಲೇ ಬೇಕಾದ ಪರಿಸ್ಥಿತಿ ಎದುರಾಗಿದೆ. ಗಗನನೌಕೆಯಲ್ಲಿ ಉಂಟಾದ ಸಣ್ಣ ಹೀಲಿಯಂ ಸಿಸ್ಟಮ್ ಸೋರಿಕೆಯಿಂದಾಗಿ ಭೂಮಿಗೆ ಮರಳುವುದು ವಿಳಂಬವಾಗಿದೆ. 2025ರ ಫೆಬ್ರವರಿ ಮಧ್ಯದ ದಿನಗಳಲ್ಲಿ ಸುನಿತಾ ವಿಲಿಯಮ್ಸ್ ಹಾಗೂ ವಿಲ್ಮೋರ್ ಭೂಮಿಗೆ ಮರಳುವ ನಿರೀಕ್ಷೆ ಇದೆ.

ಇದನ್ನೂ ಓದಿ:ದರ್ಶನ್​​ಗೆ ಅಧಿಕಾರಿಗಳು ವಾರ್ನಿಂಗ್.. ಬಳ್ಳಾರಿ ಜೈಲಿಗೆ ಬಂದರೂ ಬುದ್ಧಿ ಕಲಿಯಲಿಲ್ಲ ಎಂದು ಬೇಸರ.. ಆಗಿದ್ದೇನು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment