Advertisment

ತಬ್ಬಿ ಕೆಟ್ಟ ಸಿಇಓ.. ರಜೆ ಮೇಲೆ ಕಳುಹಿಸಿದ ಕಂಪನಿ.. ಅಯ್ಯೋ, ಒಂದು ಅಪ್ಪುಗೆ ಏನಲ್ಲಾ ಮಾಡ್ತು..?

author-image
Ganesh
Updated On
ಅಪ್ಪುಗೆಯಿಂದ ವಿಚ್ಛೇದನ.. ಪ್ರತಿಷ್ಠಿತ ಕಂಪನಿಯ CEO ಡಿವೋರ್ಸ್​ಗೆ ನಾಂದಿ ಹಾಡಿತು ಒಂದೇ ಒಂದು ಹಗ್..!
Advertisment
  • ಸಿಇಓ ಆ್ಯಂಡಿ ಬೈರೋನ್​ನ ರಜೆ ಮೇಲೆ ಕಳಿಸಿದ ಕಂಪನಿ
  • ಲೇಡಿ HR ತಬ್ಬಿಕೊಂಡ ತಪ್ಪಿಗೆ ಕ್ಷಮೆ ಕೇಳಿದ ಸಿಇಓ
  • ಪತ್ನಿಯಿಂದ ಸಿಇಓಗೆ ಡಿವೋರ್ಸ್ ನೀಡಲು ನಿರ್ಧಾರ

ಅಮೆರಿಕಾದಲ್ಲಿ ಕೋಲ್ಡ್ ಪ್ಲೇ ಮ್ಯೂಸಿಕ್ ಕನ್ಸರ್ಟ್ ವೇಳೆ ಆಸ್ಟ್ರೋನೋಮರ್ ಕಂಪನಿಯ ಸಿಇಓ ಆ್ಯಂಡಿ ಬೈರೋನ್ (Astronomer CEO Andy Byron) ಹಾಗೂ ಕಂಪನಿಯ ಲೇಡಿ ಹೆಚ್‌.ಆರ್. ಕ್ರಿಸ್ಟೆನ್ ಕಬೋಟ್ (Kristin Cabot) ಇಬ್ಬರೂ ತಬ್ಬಿಕೊಂಡಿದ್ದು ಇಂಟರ್​ನೆಟ್​ನಲ್ಲಿ ದೊಡ್ಡ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಇಬ್ಬರು ತಬ್ಬಿಕೊಂಡು ಮುಖ ಮುಚ್ಚಿಕೊಂಡು ಓಡಿ ಹೋದ ವಿಡಿಯೋವನ್ನು ರೀಟ್ವೀಟ್ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇಬ್ಬರ ವಿಡಿಯೋ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಅಮೆರಿಕಾದಿಂದ ಹಿಡಿದು ತೃತೀಯ ಜಗತ್ತಿನ ರಾಷ್ಟ್ರಗಳವರೆಗೂ ಈ ವಿಡಿಯೋ ವೈರಲ್ ಆಗಿ ಚರ್ಚೆಗೆ ಕಾರಣವಾಗಿದೆ. ಜಗತ್ತಿನಾದ್ಯಾಂತ ಈ ವಿಡಿಯೋ ಸೆನ್ಸೇಷನ್ ಕ್ರಿಯೇಟ್ ಮಾಡಿದೆ.

Advertisment

ಅಸ್ಟ್ರೋನೋಮರ್ ಕಂಪನಿಯು, ತನ್ನ ಸಿಇಓ ಆ್ಯಂಡಿ ಬೈರೋನ್ ಹಾಗೂ ಲೇಡಿ ಎಚ್‌ಆರ್ ಕ್ರಿಸ್ಟೆನ್ ಕಬೋಟ್‌ ಇಬ್ಬರನ್ನೂ ರಜೆಯ ಮೇಲೆ ಕಳಿಸಿದೆ. ಈ ಬಗ್ಗೆ ತನಿಖೆ ಮಾಡುವುದಾಗಿ ಕಂಪನಿಯು ಹೇಳಿದೆ. ಆ್ಯಂಡಿ ಬೈರೋನ್ ಹಾಗೂ ಕ್ರಿಸ್ಟೆನ್ ಕಬೋಟ್ ಅಫೇರ್ ಬಗ್ಗೆ ಕಂಪನಿಯೇ ತನಿಖೆ ಆರಂಭಿಸಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳುವುದಾಗಿ ಕಂಪನಿಯು ಹೇಳಿದೆ.

ಇದನ್ನೂ ಓದಿ: Breaking: ಧರ್ಮಸ್ಥಳ ಪ್ರಕರಣವನ್ನು SIT ತನಿಖೆಗೆ ವಹಿಸಿದ ರಾಜ್ಯ ಸರ್ಕಾರ

publive-image

ನಮ್ಮ ಕಂಪನಿಯು ಸ್ಥಾಪನೆಯಾದಾಗಿನಿಂದ ನಮಗೆ ಮಾರ್ಗದರ್ಶನ ಮಾಡುತ್ತಿರುವ ಮೌಲ್ಯ ಮತ್ತು ಸಂಸ್ಕೃತಿಗೆ ನಾವು ಬದ್ಧರಾಗಿದ್ದೇವೆ. ನಮ್ಮ ಕಂಪನಿಯ ನಾಯಕರು, ತಮ್ಮ ವರ್ತನೆ ಮತ್ತು ಬದ್ಧತೆಯಿಂದ ಮೇಲ್ಪಂಕ್ತಿಯನ್ನು ಹಾಕಿಕೊಡುವುದನ್ನು ನಾವು ನಿರೀಕ್ಷಿಸುತ್ತೇವೆ. ಕಂಪನಿಯ ಬೋರ್ಡ್ ಡೈರೆಕ್ಟರ್​ಗಳು ಈ ವಿಷಯದ ಬಗ್ಗೆ ಔಪಚಾರಿಕ ತನಿಖೆಯನ್ನು ಆರಂಭಿಸಿದ್ದಾರೆ. ಇದರ ಬಗ್ಗೆ ನಾವು ಸದ್ಯದಲ್ಲೇ ಹೆಚ್ಚಿನ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ ಎಂದು ಕಂಪನಿಯು ಎಕ್ಸ್​ನಲ್ಲಿ ಹೇಳಿದೆ.

Advertisment

ಜೊತೆಗೆ ತಮ್ಮ ಕಂಪನಿಯ ಅಲಿಯಾಸಾ ಸ್ಟೋಡೋರ್ಡ್ ಆ ಕಾರ್ಯಕ್ರಮದಲ್ಲಿ ಭಾಗಿಯಾಗಿರಲಿಲ್ಲ ಎಂದು ಕಂಪನಿಯು ಹೇಳಿದೆ. ಕಂಪನಿಯ ಸ್ಥಾಪಕರೆ ಈಗ ಉಸ್ತುವಾರಿ ಸಿಇಓ ಹುದ್ದೆ ವಹಿಸಿಕೊಂಡಿದ್ದಾರೆ. ಕಂಪನಿಯ ಸ್ಥಾಪಕ ಹಾಗೂ ಚೀಫ್ ಪ್ರಾಡಕ್ಟ್ ಆಫೀಸರ್ ಪೆಟೆ ಡಿಜೋಯ್ ಕಂಪನಿಯ ಉಸ್ತುವಾರಿ ಸಿಇಓ ಆಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಅಸ್ಟ್ರೋನೋಮರ್ ಸಿಇಓ ಆ್ಯಂಡಿ ಭೈರೋನ್ ತಮ್ಮ ತಪ್ಪಿಗೆ ಕ್ಷಮೆ ಕೇಳಿದ್ದಾರೆ. ತನ್ನ ಕುಟುಂಬ, ಮಕ್ಕಳು, ಕಂಪನಿಗೆ ಕ್ಷಮೆ ಕೇಳಿದ್ದಾರೆ.

ಇದನ್ನೂ ಓದಿ: ಬ್ರಹ್ಮಪುತ್ರ ನದಿಗೆ ಮತ್ತೊಂದು ಮೆಗಾ ಡ್ಯಾಮ್ ನಿರ್ಮಾಣಕ್ಕೆ ಚೀನಾ ಚಾಲನೆ.. ಡ್ರ್ಯಾಗನ್ ಡ್ಯಾಮ್ ಕಿರಿಕ್..!

ವಿವಾಹಿತರಾಗಿರುವ ಆ್ಯಂಡಿ ಬೈರೋನ್ ತಮ್ಮ ಕಂಪನಿಯ ಲೇಡಿ ಹೆಚ್‌.ಆರ್. ಕ್ರಿಸ್ಟೆನ್ ಕಬೋಟ್ ರನ್ನು ಸಾರ್ವಜನಿಕವಾಗಿ ತಬ್ಬಿಕೊಂಡಿದ್ದನ್ನು ಜನರು ಪ್ರಶ್ನಿಸುತ್ತಿದ್ದಾರೆ. ಇದು ಮೌಲ್ಯಗಳು ಹಾಗೂ ಸಂಸ್ಕೃತಿಗೆ ಸಂಬಂಧಿಸಿದ ವಿಚಾರ. ಆ್ಯಂಡಿ ಬೈರೋನ್ ವಿವಾಹಿತರಾಗಿರುವ ಕಾರಣದಿಂದ ಹೆಚ್ಚಿನ ಚರ್ಚೆ ಆಗುತ್ತಿದೆ ಎಂದು ಜನರು ಹೇಳುತ್ತಿದ್ದಾರೆ. ಕ್ರಿಸ್ಟೆನ್ ಕಬೋಟ್ ಈಗಾಗಲೇ ಪತಿಯಿಂದ ವಿಚ್ಛೇದನ ಪಡೆದಿದ್ದಾರೆ.

Advertisment

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಆ್ಯಂಡಿ ಬೈರೋನ್ ಪತ್ನಿ ಕೆರಿಗನ್ ತಮ್ಮ ಹೆಸರಿನಲ್ಲಿದ್ದ ಬೈರೋನ್ ಸರ್ ನೇಮ್​ ಅನ್ನು ಫೇಸ್ ಬುಕ್​ನಿಂದ ತೆಗೆದಿದ್ದಾರೆ. ಇದರಿಂದಾಗಿ ಪತ್ನಿ ಕೆರಿಗನ್ , ಆ್ಯಂಡಿ ಬೈರೋನ್ ಗೆ ವಿವಾಹ ವಿಚ್ಛೇದನ ನೀಡ್ತಾರಾ ಎಂಬ ಚರ್ಚೆಗಳು ನಡೆಯುತ್ತಿವೆ.

ಆ್ಯಂಡಿ ಬೈರೋನ್ ತಮ್ಮ ಲಿಂಕ್ಡ್ ಇನ್ ಪ್ರೊಫೈಲ್ ಅನ್ನು ಡೀಲೀಟ್ ಮಾಡಿಕೊಂಡಿದ್ದಾರೆ. 2023ರ ಜುಲೈನಲ್ಲಿ ಆ್ಯಂಡಿ ಬೈರೋನ್ ಆಸ್ಟ್ರೋನೋಮರ್ ಎಂಬ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಕಂಪನಿಯ ಸಿಇಓ ಆಗಿ ನೇಮಕವಾಗಿದ್ದರು. ಈ ಮೊದಲು ಬೇರೆ ಬೇರೆ ಕಂಪನಿಗಳಲ್ಲಿ ಉನ್ನತ ಹುದ್ದೆಗಳಲ್ಲಿದ್ದರು. ಆ್ಯಂಡಿ ಬೈರೋನ್ ಹಾಗೂ ಕೆರಿಗನ್ ದಾಂಪತ್ಯಕ್ಕೆ ಇಬ್ಬರು ಮಕ್ಕಳಿದ್ದಾರೆ. ಆ್ಯಂಡಿ ಬೈರೋನ್ ಪತ್ನಿ ಕೆರಿಗನ್ ಅವರು ಬ್ಯಾನಕ್ರೋಪ್ಟ್ ಸ್ಕೂಲ್​ನಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.

ಇದನ್ನೂ ಓದಿ: ಅಪ್ಪುಗೆಯಿಂದ ವಿಚ್ಛೇದನ.. ಪ್ರತಿಷ್ಠಿತ ಕಂಪನಿಯ CEO ಡಿವೋರ್ಸ್​ಗೆ ನಾಂದಿ ಹಾಡಿತು ಒಂದೇ ಒಂದು ಹಗ್..!

Advertisment

ಆ್ಯಂಡಿ ಬೈರೋನ್ 2024ರ ನವಂಬರ್​ನಲ್ಲಿ ಕ್ರಿಸ್ಟೆನ್ ಕಬೋಟ್​ರನ್ನು ತಮ್ಮ ಅಸ್ಟ್ರೋನೋಮರ್ ಕಂಪನಿಯ ಹೆಚ್‌.ಆರ್. ಹೆಡ್ ಆಗಿ ನೇಮಿಸಿಕೊಂಡಿದ್ದರು. ಕ್ರಿಸ್ಟೆನ್ ಕಬೋಟ್​ಗೆ ಅಸಾಧಾರಣ ನಾಯಕತ್ವ ಗುಣ, ಟ್ಯಾಲೆಂಟ್ ಮ್ಯಾನೇಜ್ ಮೆಂಟ್, ಉದ್ಯೋಗಿಗಳ ಮ್ಯಾನೇಜ್ ಮೆಂಟ್​ನಲ್ಲಿ ಪರಿಣತರಾಗಿದ್ದಾರೆ. ಕಾರ್ಯತಂತ್ರ ರೂಪಿಸಿ, ಕಂಪನಿಯನ್ನು ಉನ್ನತ ಹಂತಕ್ಕೆ ಕೊಂಡೊಯ್ಯಲು ಬಹಳ ಪ್ರಮುಖವಾದ ವ್ಯಕ್ತಿ ಎಂದು ಕ್ರಿಸ್ಟೆನ್ ಕಬೋಟ್​ರನ್ನು ತಮ್ಮ ಕಂಪನಿಗೆ ನೇಮಿಸಿಕೊಂಡ ಸಂದರ್ಭದಲ್ಲಿ ಆ್ಯಂಡಿ ಬೈರೋನ್ ಹೇಳಿದ್ದರು.

ಆ್ಯಂಡಿ ಬೈರೋನ್ ಹಾಗೂ ಕ್ರಿಸ್ಟೆನ್ ಕಬೋಟ್ ಇಬ್ಬರು ತಬ್ಬಿಕೊಂಡಿದ್ದನ್ನು ಕೋಲ್ಡ್ ಪ್ಲೇ ಮೆಗಾಫ್ಯಾನ್ 28 ವರ್ಷದ ಗ್ರೇಸ್ ಸ್ಪ್ರಿಂಜರ್ ಕ್ಯಾಮರಾದಲ್ಲಿ ರೆಕಾರ್ಡ್ ಮಾಡಿದ್ದರು. ಗ್ರೇಸ್ ಸ್ಪ್ರಿಂಜರ್ ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದು, ತಮಗೆ ಈ ದಂಪತಿ ಯಾರೆಂಬುದೇ ಗೊತ್ತಿರಲಿಲ್ಲ. ನಾನು ಇಂಟರೆಸ್ಟಿಂಗ್ ರಿಯಾಕ್ಷನ್ ಅನ್ನು ರೆಕಾರ್ಡ್ ಮಾಡುತ್ತಿದ್ದೇನೆ ಎಂದುಕೊಂಡಿದ್ದೆ. ಅದು ಇಷ್ಟು ಬೇಗ ಮೆಗಾ ವೈರಲ್ ಆಗುತ್ತೆ ಎಂದುಕೊಂಡಿರಲಿಲ್ಲ ಎಂದು ಗ್ರೇಸ್ ಸ್ಪ್ರಿಂಜರ್ ಹೇಳಿದ್ದಾರೆ. ಇವರಿಬ್ಬರ ಜೀವನವನ್ನು ಕುಗ್ಗಿಸಿದ್ದಕ್ಕೆ ನನಗೆ ನೋವಾಗುತ್ತಿದೆ. ಮೂರ್ಖರ ಆಟಗಳನ್ನು ಆಡಿ, ಮೂರ್ಖರ ಬಹುಮಾನಗಳನ್ನು ಗೆಲ್ಲಲು ಸಾಧ್ಯ ಎಂದು ಗ್ರೇಸ್ ಸ್ಪ್ರಿಂಜರ್ ಹೇಳಿದ್ದಾರೆ.

Advertisment

ಇದನ್ನೂ ಓದಿ: ಒಂದೇ ಕಲ್ಲಲ್ಲಿ ಮೂರು ಹಕ್ಕಿ ಹೊಡೆಯುವ ಪ್ಲಾನ್​.. ಕನ್ನಡಿಗನ ಮೇಲೆ ಕಣ್ಣಿಟ್ಟ ಕೆಕೆಆರ್​..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment