newsfirstkannada.com

ಕೊನೆಗೂ ಬಂದ ಮಳೆರಾಯ.. ವರ್ಷಧಾರೆ ಕಂಡು ನಿಟ್ಟುಸಿರು ಬಿಟ್ಟ ಜನ

Share :

Published May 2, 2024 at 5:15pm

Update May 2, 2024 at 5:19pm

    ಬಿಸಿಗಾಳಿ, ಒಣ ಹವೆಯಿಂದ ಬೇಸತ್ತು ಹೋಗಿದ್ದ ಜನರಿಗೆ ನಿಟ್ಟುಸಿರು

    ಕಳೆದೊಂದು ವರ್ಷದಿಂದ ಬರಡಾಗಿದ್ದ ಭೂಮಿಗೆ ಮಳೆಯ ಸಿಂಚನ

    ಬೆಂಗಳೂರಲ್ಲಿ ಭರ್ಜರಿ ಮಳೆ ಯಾವಾಗ? ಹವಾಮಾನ ಇಲಾಖೆ ಹೇಳಿದ್ದೇನು?

ಕೋಲಾರ: ಸುಡೋ ಬಿಸಿಲು.. ಸೂರ್ಯನ ಶಾಖ ತಾಳಲಾರದೇ ಪರಿತಪಿಸುತ್ತಿರುವ ರಾಜ್ಯದ ಜನತೆಗೆ ಮಳೆರಾಯ ಕೃಪೆ ತೋರಿದ್ದಾನೆ. ರಾಜ್ಯದಲ್ಲಿ ಬಿಸಿಲು, ಬಿಸಿಗಾಳಿಯ ಮಧ್ಯೆ ವರುಣನ ಸಿಂಚನವೂ ಆಗಿದೆ. ಮಳೆ ಹನಿ ಕಂಡು ಇವತ್ತು ಕೋಲಾರದ ಜನ ನಿಟ್ಟುಸಿರು ಬಿಟ್ಟಿದ್ದಾರೆ.

ಭಯಾನಕ ಬಿಸಿಲು ನೋಡಿ ಕಂಗಾಲಾಗಿದ್ದ ಚಿನ್ನದ ನಾಡಲ್ಲಿ ಇವತ್ತು‌ ಮಳೆರಾಯನ ಸಿಂಚನವಾಗಿದೆ. ಕೋಲಾರ ಜಿಲ್ಲೆ ಕೆಜಿಎಫ್ ನಗರದಲ್ಲಿ ಕೆಲ ಕಾಲ ವರ್ಷಧಾರೆಯಾಗಿದೆ. ಬಿಸಿಗಾಳಿ, ಒಣ ಹವೆಯಿಂದ ಬೇಸತ್ತು ಹೋಗಿದ್ದ ವಾತಾವರಣಕ್ಕೆ ಕೊನೆಗೂ ಮಳೆರಾಯ ತಂಪೆರೆದಿದ್ದಾನೆ.

ಕೆಜಿಎಫ್ ನಗರದಲ್ಲಿ ಇಂದು ಇದ್ದಕ್ಕಿದ್ದಂತೆ ಮಳೆ‌‌ ಹನಿ ಸುರಿದಿದ್ದು, ಮಳೆ ಕಂಡು ಕೆಜಿಎಫ್ ಜನ ನಿಟ್ಟುಸಿರು ಬಿಟ್ಟಿದ್ದಾರೆ. ಕಳೆದೊಂದು ವರ್ಷದಿಂದ ಕೆಜಿಎಫ್‌ ಭೂಮಿ ಸರಿಯಾದ ಮಳೆ ಕಾಣದೆ ಬರಡಾಗಿ ಹೋಗಿತ್ತು. ಇದೀಗ ಪೂರ್ವ ಮುಂಗಾರು ಅವಧಿ ದಿಢೀರ್ ವರ್ಷಧಾರೆ ಆಗಿದ್ದು ಜನರ ಹರ್ಷಕ್ಕೆ ಕಾರಣವಾಗಿದೆ.

ಇನ್ನು, ರಾಜ್ಯದ ಹಲವೆಡೆ ಇಂದು ತಾಪಮಾನದ ಏರಿಕೆ ಮುಂದುವರಿದಿದೆ. ಕಲಬುರ್ಗಿಯಲ್ಲಿ ಇಂದು 43 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇನ್ನು ನಾಲ್ಕು ದಿನಗಳ ಕಾಲ ಬೀದರ್, ರಾಯಚೂರು, ಕೊಪ್ಪಳ, ಬಳ್ಳಾರಿ, ಯಾದಗಿರಿ, ವಿಜಯನಗರ, ಚಿತ್ರದುರ್ಗ ಈಶಾನ್ಯ ಭಾಗಗಳಲ್ಲಿ ಉಷ್ಣ ಅಲೆಗಳು ಮುಂದುವರೆಯುವ ಹೆಚ್ಚಿನ ಸಾಧ್ಯತೆ ಇದೆ. ಮುಂದಿನ ನಾಲ್ಕು ದಿನಗಳವರೆಗೆ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆ ಇದೆ.

ಇದನ್ನೂ ಓದಿ: RAIN ALERT: ಮುಂದಿನ 2 ವಾರ ರಾಜ್ಯದ ಈ ಜಿಲ್ಲೆಗಳಲ್ಲಿ ಭರ್ಜರಿ ಮಳೆ; ಎಲ್ಲೆಲ್ಲಿ? 

ಬೆಂಗಳೂರಲ್ಲಿ ಮಳೆ ಯಾವಾಗ?
ಬೆಂಗಳೂರಲ್ಲಿ ಮುಂದಿನ ನಾಲ್ಕು ದಿನಗಳವರೆಗೆ ಗರಿಷ್ಟ ಉಷ್ಣಾಂಶ 38 ಡಿಗ್ರಿ ಸೆಂಟಿಗ್ರೇಡ್‌, ಕನಿಷ್ಟ 24 ಡಿಗ್ರಿ ಸೆಂಟಿಗ್ರೇಡ್‌ ಇರುವ ಸಾಧ್ಯತೆ ಇದೆ. ಅಂದ್ರೆ ಇವತ್ತಿನಿಂದ 4 ದಿನಗಳನ್ನು ಕಳೆದರೆ ಬೆಂಗಳೂರಿನ ಮಳೆರಾಯನ ಎಂಟ್ರಿ ಆಗಲಿದೆ. ಮೇ 6 – 7ರಿಂದ ಬೆಂಗಳೂರಿನ ಅಲ್ಲಲ್ಲಿ ಹೆಚ್ಚಿನ ಹಗುರವಾದ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯಿಂದ ಮುನ್ಸೂಚನೆ ಸಿಕ್ಕಿದೆ.

ಕೆಲವು ದಿನಗಳಿಂದ ಸಿಲಿಕಾನ್ ಸಿಟಿ ಜನ ರಣ ಬಿಸಿಲಿನ ಝಳಕ್ಕೆ ಬೆವತು ಬೆಂದು ಹೋಗಿದ್ದಾರೆ. ಈ ಮಧ್ಯೆ ರಾಜಧಾನಿ ಜನರಿಗೆ ಹವಮಾನ ಇಲಾಖೆ ಗುಡ್​ನ್ಯೂಸ್​ ಕೊಟ್ಟಿದೆ. ಇನ್ನು 4 ದಿನಗಳು ಕಳೆದರೆ ಬೆಂಗಳೂರಲ್ಲಿ ಭಾರಿ ಮಳೆಯಾಗಲಿದೆ ಎಂದು ಮಾಹಿತಿ ಕೊಟ್ಟಿದೆ. ಮುಂದಿನ 24 ಗಂಟೆಯ ಕಾಲ 37 ಡಿಗ್ರಿ ಉಷ್ಣಾಂಶವಿದ್ದು, ಈ ವಾರ ಬೆಂಗಳೂರಲ್ಲಿ ಬಿಸಿಗಾಳಿ ಮುಂದುವರಿಯಲಿದೆ. ಮೇ 6ರ ಬಳಿಕ ಬೆಂಗಳೂರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊನೆಗೂ ಬಂದ ಮಳೆರಾಯ.. ವರ್ಷಧಾರೆ ಕಂಡು ನಿಟ್ಟುಸಿರು ಬಿಟ್ಟ ಜನ

https://newsfirstlive.com/wp-content/uploads/2024/05/Kolar-Rain.jpg

Load More