ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡಿದ ಅಟ್ಲಾಸ್ ಸೈಕಲ್
ಭಾರತದ ಅಟ್ಲಾಸ್ ಸೈಕಲ್‌ಗಳು ವಿದೇಶದಲ್ಲೂ ಬೇಡಿಕೆ ಗಳಿಸಿತ್ತು
ಅಟ್ಲಾಸ್ ಸೈಕಲ್ಸ್ ಕಂಪನಿ ಮುನ್ನಡೆಸಿದ್ದ ಸಲೀಲ್ ಕಪೂರ್ ಇನ್ನಿಲ್ಲ
ನವದೆಹಲಿ: ಅಟ್ಲಾಸ್ ಸೈಕಲ್ ಅಂದ್ರೆ ಒಂದು ನೆನಪು. 80ರ ದಶಕದಲ್ಲಿ ಪಡ್ಡೆ ಹುಡುಗರ ಫೇವರೆಟ್ ಗಾಡಿ ಅಂದ್ರೆ ಅದು ಸೈಕಲ್. 1950ರಲ್ಲಿ ಜಾನ್ಕಿ ದಾಸ್ ಕಪೂರ್ ಅನ್ನೋರು ಹರಿಯಾಣದಲ್ಲಿ ಈ ಅಟ್ಲಾಸ್ ಸೈಕಲ್ ಅನ್ನು ಕಂಡು ಹಿಡಿದರು.
ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡಿದ ಅಟ್ಲಾಸ್ ಸೈಕಲ್ ಬಹಳ ಬೇಗನೇ ದೇಶಾದ್ಯಂತ ಖ್ಯಾತಿ ಪಡೆದಿತ್ತು. ಸೈಕಲ್ ಉತ್ಪಾದನೆ ಆರಂಭಿಸಿದ 12 ತಿಂಗಳಲ್ಲಿ ಜಾನ್ಕಿ ದಾಸ್ ಕಪೂರ್ ತಮ್ಮ ಫ್ಯಾಕ್ಟರಿಯಲ್ಲಿ 25 ಎಕರೆಗೆ ವಿಸ್ತರಣೆ ಮಾಡಿದ್ದರು. ಇದಾದ ಬಳಿಕ ಭಾರತದ ಅಟ್ಲಾಸ್ ಸೈಕಲ್‌ಗಳು ವಿದೇಶದಲ್ಲೂ ಬೇಡಿಕೆ ಗಳಿಸಿತ್ತು.
ಇದನ್ನೂ ಓದಿ: BREAKING: ಬಿಜೆಪಿ ಶಾಸಕ ಸುರೇಶ್ ಕುಮಾರ್‌ಗೆ ಅನಾರೋಗ್ಯ; ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ
ಇಂತಹ ದೈತ್ಯ ಅಟ್ಲಾಸ್ ಸೈಕಲ್ಸ್ ಕಂಪನಿಯನ್ನು ಮುನ್ನಡೆಸಿಕೊಂಡು ಬಂದಿದ್ದ ಮಾಜಿ ಅಧ್ಯಕ್ಷ ಸಲೀಲ್ ಕಪೂರ್ ಅವರು ದಾರುಣವಾಗಿ ಸಾವನ್ನಪ್ಪಿದ್ದಾರೆ. 70 ವರ್ಷದ ಸಲೀಲ್ ಕಪೂರ್ ಅವರು ದೆಹಲಿಯಲ್ಲಿ ತಮ್ಮ ನಿವಾಸದಲ್ಲಿ ಶೂಟ್ ಮಾಡಿಕೊಂಡು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಸಲೀಲ್ ಕಪೂರ್ ಅವರ ಮನೆ ದೆಹಲಿಯ ಎಪಿಜಿ ಅಬ್ದುಲ್ ಕಲಾಂ ಮಾರ್ಗ್‌ನಲ್ಲಿದೆ. ಇಂದು ಮಧ್ಯಾಹ್ನ 2.30ಕ್ಕೆ ಸಲೀಲ್ ಕಪೂರ್ ಅವರು ತಮ್ಮ ಮೂರು ಅಂತಸ್ಥಿನ ತನ್ನ ಮನೆಯಲ್ಲಿ ಪ್ರಾಣ ಬಿಟ್ಟಿದ್ದಾರೆ. ಸಲೀಲ್ ಸಾವನ್ನಪ್ಪಿದ ಸ್ಥಳದಲ್ಲಿ ಒಂದು ಡೆತ್‌ನೋಟ್ ಕೂಡ ಪತ್ತೆಯಾಗಿದೆ.
ಇದನ್ನೂ ಓದಿ: 200 ವರ್ಷಗಳ ದಾಖಲೆಯ ಮಳೆ.. 300 ಹೊಸ ಬ್ರಾಂಡ್ ಕಾರುಗಳು ಮುಳುಗಡೆ; ವಿಡಿಯೋ ನೋಡಿ!
ಸಲೀಲ್ ಕಪೂರ್ ಅವರು ತಮ್ಮ ಡೆತ್‌ನೋಟ್‌ನಲ್ಲಿ ಕೆಲವರಿಂದ ನಾನು ಕಿರುಕುಳ ಅನುಭವಿಸಿದ್ದೇನೆ ಎಂದು ಅವರ ಹೆಸರನ್ನು ಉಲ್ಲೇಖ ಮಾಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿರುವ ದೆಹಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಪ್ರಾಥಮಿಕ ಮಾಹಿತಿಯಲ್ಲಿ ಸಲೀಲ್ ಕಪೂರ್ ಅವರ ತಮ್ಮ ರಿವಾಲ್ವರ್‌ನಿಂದ ತಾವೇ ಶೂಟ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಹತ್ತಾರು ವರ್ಷ ಅಟ್ಲಾಸ್ ಸೈಕಲ್ ಕಂಪನಿಯನ್ನು ನಡೆಸಿದ್ದು ಸಲೀಲ್ ಕಪೂರ್ ಅವರು ಇತ್ತೀಚೆಗೆ ಆರ್ಥಿಕ ಸಂಕಷ್ಟವನ್ನು ಎದುರಿಸಿದ್ದರು. ಹೆಂಡತಿಯಿಂದ ಡಿವೋರ್ಸ್ ಪಡೆದಿದ್ದ ಸಲೀಲ್ ಅವರು ಮಕ್ಕಳಿಂದಲೂ ದೂರ ಉಳಿದು ಒಂಟಿಯಾಗಿ ಜೀವನ ಸಾಗಿಸುತ್ತಿದ್ದರು. ಸಲೀಲ್ ಕಪೂರ್ ಅವರ ವಿರುದ್ಧ ಬಹಳಷ್ಟು ಪ್ರಕರಣಗಳು ದಾಖಲಾಗಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ