ಗ್ರಾಹಕರಿಗೆ ಆಘಾತ! ATM ಹಣ ವಿತ್​ ಡ್ರಾ ಶುಲ್ಕ 2 ರೂಪಾಯಿಗೆ ಏರಿಕೆ

author-image
Ganesh
Updated On
ಜೂನ್ 1ರಿಂದ ಪ್ರಮುಖ 5 ಬದಲಾವಣೆಗಳು; ಇಂದಿನಿಂದ ಈ ಮೊಬೈಲ್‌ಗಳಲ್ಲಿ WhatsApp ವರ್ಕ್ ಆಗಲ್ಲ!
Advertisment
  • ಮೇ 1 ರಿಂದ ದೇಶಾದ್ಯಂತ ಈ ನಿಯಮ ಜಾರಿ
  • ಇಂಟರ್‌ಚೇಂಜ್ ಶುಲ್ಕ ಅಂದ್ರೆ ಏನು ಗೊತ್ತಾ?
  • ಉಚಿತ ವಹಿವಾಟು ಮಿತಿ ಮೀರಿದರೆ ಹೆಚ್ಚುವರಿ ಶುಲ್ಕ

ಎಟಿಎಂ (ATM) ನೆಚ್ಚಿಕೊಂಡಿರುವ ಗ್ರಾಹಕರಿಗೆ ಹಣ ಹಿಂಪಡೆಯುವುದು ಮತ್ತಷ್ಟು ದುಬಾರಿ ಆಗಲಿದೆ. ಮೇ ಒಂದರಿಂದ ವಿತ್​ ಡ್ರಾ ಶುಲ್ಕ ಎರಡು ರೂಪಾಯಿ ಹೆಚ್ಚಳವಾಗಲಿದೆ.

ಉಚಿತ ವಹಿವಾಟು ಮಿತಿಮೀರಿದ ನಂತರ ಎಟಿಎಂನಿಂದ ಹಣ ವಿತ್​ ಡ್ರಾ ಮಾಡಲು ಹೋದರೆ ಮೊದಲಿಗಿಂತ 2 ರೂಪಾಯಿ ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ. ಇಷ್ಟಕ್ಕೆಲ್ಲ ಕಾರಣ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಇಂಟರ್‌ಚೇಂಜ್ ಶುಲ್ಕವನ್ನು ಹೆಚ್ಚಿಸಿರೋದು. ಈ ಮೊದಲು ಪ್ರತಿ ವಹಿವಾಟಿಗೆ 17 ರೂಪಾಯಿ ವಿಧಿಸಬೇಕಾಗಿತ್ತು. ಇನ್ಮುಂದೆ 19 ರೂಪಾಯಿ ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ: PF ಹಣ ಪಡಿಯೋದು ಮತ್ತಷ್ಟು ಸುಲಭ.. ATM, UPI ಮೂಲಕ ದುಡ್ಡು ಡ್ರಾ..!

publive-image

ಇಂಟರ್‌ಚೇಂಜ್ ಶುಲ್ಕ ಅಂದ್ರೆ ಏನು..?

ATM ಇಂಟರ್‌ಚೇಂಜ್ ಶುಲ್ಕ ಅಂದರೆ ಎಟಿಎಂ ಸೇವೆ ಒದಗಿಸುವುದಕ್ಕಾಗಿ ಒಂದು ಬ್ಯಾಂಕ್ ಮತ್ತೊಂದು ಬ್ಯಾಂಕ್​​ಗೆ ವಿಧಿಸುವ ಶುಲ್ಕವಾಗಿದೆ. ಹಣಕಾಸಿನ ವಹಿವಾಟುಗಳಿಗಾಗಿ ಎಟಿಎಂ ಅವಲಂಬಿಸಿರುವ ಗ್ರಾಹಕರು ತಮ್ಮ ಉಚಿತ ವಹಿವಾಟು ಮಿತಿ ಮೀರಿದಾಗ ಹೆಚ್ಚುವರಿಯಾಗಿ 2 ರೂಪಾಯಿ ಪಾವತಿಸಬೇಕಾಗುತ್ತದೆ. ಬ್ಯಾಲೆನ್ಸ್ ಸೇರಿದಂತೆ ವಿಚಾರಣೆಯಂತಹ ಹಣಕಾಸೇತರ ವಹಿವಾಟುಗಳಿಗೆ ನೀವು ಎಟಿಎಂಗೆ ಹೋದರೆ 1 ರೂಪಾಯಿ ಹೆಚ್ಚುವರಿ ಶುಲ್ಕ ವಿಧಿಸಬೇಕಾಗುತ್ತದೆ.

ಇದನ್ನೂ ಓದಿ: Saugat-e-Modi: ದೇಶದ 32 ಲಕ್ಷ ಬಡ ಮುಸ್ಲಿಮರ ಕುಟುಂಬಗಳಿಗೆ ಮೋದಿ ರಂಜಾನ್ ಕಿಟ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment