newsfirstkannada.com

ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಹಲ್ಲೆ ಕೇಸ್.. ನಗರತ್ ಪೇಟೆಗೆ ನುಗ್ಗಿದ ಬಿಜೆಪಿ, ಹಿಂದೂ ಸೇನೆ!

Share :

Published March 19, 2024 at 12:29pm

Update March 19, 2024 at 12:42pm

    ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಹಲ್ಲೆ ಮಾಡಿದ ಆರೋಪಕ್ಕೆ ಆಕ್ರೋಶ

    ನಗರತ್​ ಪೇಟೆಯಲ್ಲಿ ಬಿಜೆಪಿ ನಾಯಕರು, ಹಿಂದೂ ಕಾರ್ಯಕರ್ತರ ಹೋರಾಟ

    ಕಾಂಗ್ರೆಸ್‌ ಸರ್ಕಾರದ ವಿರುದ್ಧ ರೋಡಿಗಿಳಿದ ಬಿಜೆಪಿ ನಾಯಕರು ಪೊಲೀಸ್ ವಶ

ಬೆಂಗಳೂರಿನ ಮೊಬೈಲ್ ಶಾಪ್‌ನಲ್ಲಿ ನಮಾಜ್ ವೇಳೆ ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಹಲ್ಲೆ ಮಾಡಿದ ಪ್ರಕರಣಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ನಗರತ್​ ಪೇಟೆಯ ಅಂಗಡಿ- ಮುಂಗಟ್ಟುಗಳನ್ನು ಬಂದ್ ಮಾಡಲಾಗಿದ್ದು, ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು, ಹಿಂದೂ ಕಾರ್ಯಕರ್ತರು ಧರಣಿ ನಡೆಸುತ್ತಿದ್ದಾರೆ.

ಕಳೆದ ಎರಡು ದಿನದ ಹಿಂದೆ ನಗರತ್ ಪೇಟೆಯ ಮುಖೇಶ್ ಎಂಬುವರ ಮೇಲೆ ಯುವಕರ ಗುಂಪು ಹಲ್ಲೆ ಮಾಡಿತ್ತು. ಈ ಘಟನೆಯನ್ನ ವಿರೋಧಿಸಿ ಇಂದು ಬಿಜೆಪಿ ಮತ್ತು ಹಿಂದೂ ಮುಖಂಡರು ನಗರತ್ ಪೇಟೆಯಲ್ಲಿ ಹನುಮಾನ್ ಚಾಲೀಸಾ ಪಠಣ ಮಾಡಲು ಮುಂದಾಗಿದ್ದಾರೆ. ಮುಖೇಶ್ ಶಾಪ್​ನಿಂದ ಭಾಗವಧ್ವಜದೊಂದಿಗೆ ಶಾಂತಿಯುತ ಮೆರವಣಿಗೆ ಮಾಡಲು ಆಗಮಿಸಿದ್ದಾರೆ.

ಶಾಂತಿಯುತ ಮೆರವಣಿಗೆಯಲ್ಲಿ ಪಾಲ್ಗೊಂಡಿರುವ ನೂರಾರು ಬಿಜೆಪಿ & ಹಿಂದೂ ಮುಖಂಡರು ಜೆ.ಎಂ ರೋಡ್‌ನಿಂದ ನಗರತ್ ಪೇಟೆವರೆಗಿನ ಎಲ್ಲಾ ರಸ್ತೆಗಳಲ್ಲಿ, ಹನುಮಾನ್ ಚಾಲೀಸಾ & ಹನುಮ ಭಜನೆ ಮಾಡಲು ಮುಂದಾಗಿದ್ದಾರೆ. ಹಿಂದೂಗಳ ಆತ್ಮಸ್ಥೈರ್ಯ ಗಟ್ಟಿ ಮಾಡುವ ನಿಟ್ಟಿನಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗಿಯಾಗಿದ್ದೇವೆ ಎಂದು ಹೇಳಿದ್ದಾರೆ.

ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್ ಹರೀಶ್, ಬಿಜೆಪಿ ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ ಸೇರಿದಂತೆ ಶಾಸಕರು ಹಾಗೂ ಹಲವು ನಾಯಕರು ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.

ನಗರತ್ ಪೇಟೆಗೆ ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರು ಆಗಮಿಸಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ. ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರು ರಸ್ತೆಯಲ್ಲಿ ಕುಳಿತು ಧರಣಿ ನಡೆಸಿದ್ದಾರೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ಪೊಲೀಸರ ವಶಕ್ಕೆ ಪಡೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಹಲ್ಲೆ ಕೇಸ್.. ನಗರತ್ ಪೇಟೆಗೆ ನುಗ್ಗಿದ ಬಿಜೆಪಿ, ಹಿಂದೂ ಸೇನೆ!

https://newsfirstlive.com/wp-content/uploads/2024/03/Hanuman-Chalisa-1.jpg

Load More