ಲಾಸ್ಯ ನಾಗರಾಜ್ ಕುಟುಂಬದಲ್ಲಿ ಕಲಹ.. ಅಮ್ಮನ ಮೇಲೆ ಚಿಕ್ಕಮ್ಮನಿಂದ ಮಾರಣಾಂತಿಕ ಹಲ್ಲೆ ಎಂದ ನಟಿ..!

author-image
Ganesh
Updated On
ಬಿಗ್ ಬಾಸ್ ಮಾಜಿ ಸ್ಪರ್ಧಿ, ನಟಿ ಲಾಸ್ಯ ನಾಗರಾಜ್‌ ತಾಯಿ ಮೇಲೆ ಮಾರಣಾಂತಿಕ ಹಲ್ಲೆ; ಆಗಿದ್ದೇನು?
Advertisment
  • ಲಾಸ್ಯ ನಾಗರಾಜ್ ತಾಯಿಯ ಮೇಲೆ ತಂಗಿಯಿಂದಲೇ ಹಲ್ಲೆ
  • ಡ್ಯಾನ್ಸ್ ಕ್ಲಾಸ್ ವಿಚಾರಕ್ಕೆ ಸುಧಾ ಜೊತೆ ಮಂಗಳ ಕಿರಿಕ್
  • ಕೆನಡಾದಲ್ಲಿರುವ ನಟಿ ಲಾಸ್ಯರಿಂದ ಹಲ್ಲೆಯ ಸಿಸಿಟಿವಿ ದೃಶ್ಯ ರಿಲೀಸ್

ಕನ್ನಡ ಕಿರುತೆರೆ ನಟಿ ಲಾಸ್ಯ ನಾಗರಾಜ್ ಕೌಟುಂಬಿಕ ಕಲಹದಿಂದ ಸುದ್ದಿಯಾಗಿದ್ದಾರೆ. ನಟಿಯ ತಾಯಿ ಡಾ.ಸುಧಾ ನಾಗರಾಜ್ ಅವರ ಮೇಲೆ ಅವರ ತಂಗಿ ಮಂಗಳ ಶಶಿಧರ್ ಮತ್ತು ಅವರ ಪತಿ ಶಶಿಧರ್ ದೈಹಿಕ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.

ಡ್ಯಾನ್ಸ್ ಕ್ಲಾಸ್ ವಿಚಾರಕ್ಕೆ ಕಿರಿಕ್

ಲಾಸ್ಯ ಮಾಡಿರುವ ಆರೋಪದ ಪ್ರಕಾರ, ಈ ಘಟನೆ ಬೆಂಗಳೂರಿನ ಬಸವೇಶ್ವರನಗರದ ನಿವಾಸದಲ್ಲಿ ನಡೆದಿದೆ. ಒಂದೇ ಕಟ್ಟಡದ ಎರಡು ಮಹಡಿಗಳಲ್ಲಿ ಅಕ್ಕ-ತಂಗಿಯ ಕುಟುಂಬದವರು ವಾಸ ಮಾಡುತ್ತಿದ್ದಾರೆ. ಮೊದಲ ಮಹಡಿ ಮನೆಯಲ್ಲಿ ನಟಿ ಲಾಸ್ಯ ನಾಗರಾಜ್ ಮತ್ತು ತಾಯಿ ವಾಸವಾಗಿದ್ದಾರೆ. ಸುಧಾ ನಾಗರಾಜ್ ಮೂಲತಃ ಕ್ಲಾಸಿಕಲ್ ಡ್ಯಾನ್ಸರ್ ಆಗಿದ್ದು ಗ್ರೌಂಡ್ ಫ್ಲೋರ್​ನ ಪಾರ್ಕಿಂಗ್ ಜಾಗದಲ್ಲಿ ಹಲವು ವರ್ಷಗಳಿಂದ ಡ್ಯಾನ್ಸ್ ಕ್ಲಾಸ್ ನಡೆಸುತ್ತಿದ್ದಾರೆ. ಇದೇ ವಿಚಾರಕ್ಕೆ ಪದೇ ಪದೇ ಕಿರಿಕ್ ಮಾಡುತ್ತಿದ್ದ ತಂಗಿ ಮಂಗಳ, ನಿನ್ನೆ ಪತಿಯ ಜೊತೆ ಸೇರಿ ಅಕ್ಕ ಸುಧಾ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಹೊಸ ಕೆಲಸಕ್ಕೆ ಮುಂದಾದ ರಾಕಿಂಗ್​ ಸ್ಟಾರ್ ತಂದೆ-ತಾಯಿ; ಏನದು ವಿಶೇಷ?

publive-image

ಆದರೆ, ನಿನ್ನೆ ರಾತ್ರಿ ಮನೆಯ ಮುಂದಿನ ಜಾಗದ ವಿಚಾರವಾಗಿ ತಂಗಿ ಹಾಗೂ ತಂಗಿಯ ಗಂಡ ಸೇರಿಕೊಂಡು ದೈಹಿಕವಾಗಿ ಹಲ್ಲೆ ಮಾಡಿದ್ದಾರೆ. ಘಟನೆಯ ನಂತರ ಸುಧಾ ನಾಗರಾಜ್ ಅವರು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿದ್ದು, ಚೇತರಿಕೆ ನಂತರ ಹಲ್ಲೆಯಾಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಕೆನಡಾದಲ್ಲಿ ನಟಿ ಲಾಸ್ಯ ನಾಗರಾಜ್

ಇನ್ನು ನಟಿ ಲಾಸ್ಯ ನಾಗರಾಜ್ ಸದ್ಯ ಕೆನಡಾದಲ್ಲಿದ್ದು, ತಾಯಿಯ ಮೇಲೆ ಆಗಿರುವ ಹಲ್ಲೆ ಸುದ್ದಿಯನ್ನ ಅವರೇ ಬಹಿರಂಗಗೊಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ವಿಡಿಯೋವನ್ನೂ ಹಂಚಿಕೊಂಡಿದ್ದಾರೆ. ಆದರೆ ಇದುವರೆಗೂ ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ಒಟ್ಟಾರೆ ಯಕಶ್ಚಿತ್ ಡ್ಯಾನ್ಸ್​ ಕ್ಲಾಸ್ ವಿಚಾರಕ್ಕೆ ಒಡಹುಟ್ಟಿದ ಅಕ್ಕ-ತಂಗಿಯರೇ ಕಿತ್ತಾಡಿಕೊಂಡಿದ್ದಾರೆ.

ಇದನ್ನೂ ಓದಿ: ಉಪ್ಪಿ ಅವರ ಫೇಮಸ್ ಹಾಡು ಹೇಳಿ ಖುಷಿ ಪಟ್ಟ ಸಾಲ್ಟ್​.. ಅದ್ಯಾವ ಸಾಂಗ್ ಹೇಳಿ ನೋಡೋಣ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment