/newsfirstlive-kannada/media/post_attachments/wp-content/uploads/2025/01/Darshan_Attack.jpg)
ಬೆಂಗಳೂರು: ಸಹೋದ್ಯೋಗಿ ಬೆಳವಣಿಗೆ ಸಹಿಸದೆ ಪಾರ್ಟಿಯಲ್ಲೇ ಬಿಯರ್ ಬಾಟಲ್ನಿಂದ ಹಲ್ಲೆ ಮಾಡಿರೋ ಘಟನೆ ರಾಜರಾಜೇಶ್ವರಿ ನಗರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದರ್ಶನ್ ಹಲ್ಲೆಗೆ ಒಳಗಾದ ಯುವಕ.
ರಾಜರಾಜೇಶ್ವರಿ ನಗರದ ಗ್ರೀನ್ ಟ್ರೆಂಡ್ಸ್ ಸೆಲ್ಯೂನ್ನಲ್ಲಿ ದರ್ಶನ್ ಅನ್ನೋ ಯುವಕ ಕೆಲಸ ಮಾಡುತ್ತಿದ್ದ. ದರ್ಶನ್ ಕೇವಲ 10 ದಿನಗಳ ಹಿಂದೆಯಷ್ಟೇ ಕೆಲಸಕ್ಕೆ ಸೇರಿದ್ದ. ಅಂಗಡಿಯಲ್ಲಿ ವ್ಯಾಪಾರ ಕೂಡ ಚೆನ್ನಾಗಿ ಆಗುತ್ತಿತ್ತು.
ಇನ್ನು, ವ್ಯಾಪಾರ ಚೆನ್ನಾಗಿ ಆಗುತ್ತಿರೋ ಕಾರಣ 11 ದಿನಕ್ಕೆ ಮಾಲೀಕ ಪಾರ್ಟಿ ಆಯೋಜನೆ ಮಾಡಿದ್ದ. ಪಾರ್ಟಿಯಲ್ಲಿ ದರ್ಶನ್ ಬಂದ ಮೇಲೆ ವ್ಯಾಪಾರ ಚೆನ್ನಾಗಿ ಆಗುತ್ತಿದೆ ಎಂದು ಮಾಲೀಕ ಹೊಗಳಿದ್ದ. ಈ ಸಂದರ್ಭದಲ್ಲಿ ಅಲ್ಲೇ ಇದ್ದ ಮತ್ತೋರ್ವ ಉದ್ಯೋಗಿ ರಾಹುಲ್, ಏನೋ ಜಾಸ್ತಿ ಮೆರಿತಿದ್ಯಾ ಎಂದು ದರ್ಶನ್ ಮೇಲೆ ಬಿಯರ್ ಬಾಟಲ್ನಿಂದ ಹಲ್ಲೆ ಮಾಡಿದ್ದಾನೆ.
ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ದರ್ಶನ್ಗೆ ಚಿಕಿತ್ಸೆ ನೀಡಲಾಗುತ್ತಿದೆ. ರಾಜರಾಜೇಶ್ವರಿ ನಗರ ಪೊಲೀಸ್ರು ಆರೋಪಿಯನ್ನು ಬಂಧಿಸಿದ್ದಾರೆ. ಅಲ್ಲದೇ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಇದನ್ನೂ ಓದಿ:ಹಣಕ್ಕೆ ಅಡಚಣೆ ಆಗಬಹುದು, ಔಷಧಿಗಾಗಿ ಹೆಚ್ಚು ಖರ್ಚು; ಇಲ್ಲಿದೆ ನಿಮ್ಮ ರಾಶಿ ಭವಿಷ್ಯ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ