Advertisment

ಅಬ್ಬಾ.. ಬಾಂಗ್ಲಾದಲ್ಲಿ ತಿರುಗಿಬಿದ್ದ ಹಿಂದೂಗಳಿಂದ ಅತಿ ದೊಡ್ಡ ದಂಗೆ; ಏನೆಲ್ಲಾ ನೋವು? ಎಷ್ಟೆಲ್ಲಾ ಕ್ರೌರ್ಯ?

author-image
Gopal Kulkarni
Updated On
ಅಬ್ಬಾ.. ಬಾಂಗ್ಲಾದಲ್ಲಿ ತಿರುಗಿಬಿದ್ದ ಹಿಂದೂಗಳಿಂದ ಅತಿ ದೊಡ್ಡ ದಂಗೆ; ಏನೆಲ್ಲಾ ನೋವು? ಎಷ್ಟೆಲ್ಲಾ ಕ್ರೌರ್ಯ?
Advertisment
  • ಬಾಂಗ್ಲಾ ಪ್ರಜೆಗಳ ಮೃಗೀಯ ವರ್ತನೆಗೆ ಹಿಂದೂಗಳು ವಿಲವಿಲ!
  • ಬಾಂಗ್ಲಾದೇಶದ ಗಡಿಯಲ್ಲಿ ಬಿಎಸ್​ಎಫ್​ ಯೋಧರಿಂದ ಕಟ್ಟೆಚ್ಚರ
  • ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯಕ್ಕೆ ಖಂಡನೆ

ಢಾಕಾ: ಮನೆಯ ಬಾಗಿಲಿಗೆ ಬಂದಿರುವುದು ಶತ್ರುವೇ ಆದ್ರೂ ಅವರನ್ನು ಗೌರವಿಸುವುದು ಮಾನವನ ಮೂಲ ಧರ್ಮ. ನೆರೆಯ ಬಾಂಗ್ಲಾದಲ್ಲಿ ಸರ್ಕಾರದ ವಿರುದ್ಧ ಸೃಷ್ಟಿಯಾಗಿದ್ದ ಸಂಘರ್ಷ ಸಾವಿರಾರು ಹಿಂದೂಗಳ ಜೀವ ಬಲಿ ಕೊಡ್ತಿದೆ. ಬಾಂಗ್ಲಾದಲ್ಲಿ ಅಲ್ಪಸಂಖ್ಯಾತ ಹಿಂದೂಗಳು ಕ್ರೌರ್ಯಕ್ಕೆ ನಲುಗಿದ್ದಾರೆ. ನರಕ ಕೂಪದಲ್ಲಿ ಸಿಲುಕಿ ವಿಲವಿಲ ಒದ್ದಾಡುವಂತಾಗಿದೆ.

Advertisment

ಇದು ಮನುಷ್ಯತ್ವ ಮರೆಯಾಗಿರುವ ಕಾಲ. ಕ್ರೌರ್ಯ ಮೆರೆಯುತ್ತಿರುವ ಕಾಲ. ಮಾನವ ಜನ್ಮದ ರೀತಿ, ನೀತಿ ನಶಿಸಿ ಹೋಗಿರುವ ಕಾಲ. ಇಲ್ಲಿ ಅನಾಗರಿಕತೆ ಆವರಿಸಿದೆ. ಮುಸ್ಲಿಂ ರಾಷ್ಟ್ರ ಬಾಂಗ್ಲಾದೇಶ ಹಿಂದೂಗಳ ಪಾಲಿಗೆ ಅಕ್ಷರಶಃ ನರಕವಾಗಿದೆ. ಧರೆಯೇ ಹೊತ್ತಿ ಉರಿಯುತ್ತಿದೆ. ಬದುಕಲು ಎಲ್ಲಿಗೂ ಹೋಗದಂತಹ ಪರಿಸ್ಥಿತಿ ಬಂದಿದೆ.

publive-image

ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ಮುಂದುವರಿದ ದೌರ್ಜನ್ಯ
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಹಿಂಸೆ, ದೌರ್ಜನ್ಯಗಳು ಮುಂದುವರಿದಿವೆ. ಇಸ್ಲಾಂ ಮೂಲಭೂತವಾದಿಗಳು ಹಿಂದೂಗಳನ್ನು ಹುಡುಕಿ ಹುಡುಕಿ ಹಿಂಸಿಸುತ್ತಿದ್ದಾರೆ. ಬಾಂಗ್ಲಾದೇಶಿಗಳ ಕ್ರೌರ್ಯಕ್ಕೆ ಈಗಾಗಲೇ ಸಾಕಷ್ಟು ಮಂದಿ ಬಲಿಯಾಗಿದ್ದು ಹಿಂದೂಗಳ ಜೀವ, ಆಸ್ತಿ-ಪಾಸ್ತಿಗೆ ಹಾನಿಯಾಗಿದೆ. ಹಣ ಚಿನ್ನಾಭರಣ ಕೂಡ ದೋಚುತ್ತಿದ್ದಾರೆ. ಹಿಂದೂ ಯುವತಿಯರನ್ನು ಹಿಡಿದು ಬಸ್ಕಿ ಹೊಡೆಸುತ್ತಿರುವ ದೃಶ್ಯ ವೈರಲ್ ಆಗಿದೆ.

publive-image

ಬಾಂಗ್ಲಾದಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದ್ದು ಜೀವ ಉಳಿಸಿಕೊಳ್ಳಲು ಹಿಂದೂಗಳು ಭಾರತ-ಬಾಂಗ್ಲಾ ಗಡಿಯತ್ತ ಬರ್ತಿದ್ದಾರೆ. ಇತ್ತ ಗಡಿಯಲ್ಲಿ ಸದ್ಯದ ಸ್ಥಿತಿಗತಿ ಮೇಲೆ ನಿಗಾ ಇರಿಸಲು ಕೇಂದ್ರ ಸರಕಾರ ಬಿಎಸ್‌ಎಫ್‌ ಎಡಿಜಿ ನೇತೃತ್ವದಲ್ಲಿ ಸಮಿತಿ ರಚಿಸಿದೆ. ಈ ಬೆನ್ನಲ್ಲೇ ಭಾರತ-ಬಾಂಗ್ಲಾ ಗಡಿಯಲ್ಲಿ ಬಿಗಿಭದ್ರತೆ ವಹಿಸಿದ್ದು ಅಕ್ರಮವಾಗಿ ಯಾರೊಬ್ಬರೂ ಭಾರತಕ್ಕೆ ನುಸುಳದಂತೆ ಕಟ್ಟೆಚ್ಚರ ವಹಿಸಲಾಗಿದೆ. ಕೂಚ್ ಬೆಹಾರ್ ಗಡಿಯಲ್ಲಿ ಭಾರತಕ್ಕೆ ಪರಾರಿಯಾಗಲು ಬಂದ ಸಾವಿರಾರು ಜನರನ್ನು ಯೋಧರು ವಾಪಸ್ ಕಳುಹಿಸಿದ್ದಾರೆ.

Advertisment

ಇದನ್ನೂ ಓದಿ:ಮಾತನಾಡಲು, ಸೆಕ್ಸ್‌ ಮಾಡಲು ಒಂದೊಂದು ರೇಟ್​ ಫಿಕ್ಸ್ ಮಾಡಿದ ಹೆಂಡ್ತಿ; ಕೋರ್ಟ್‌ಗೆ ಹೋದ ಗಂಡನಿಗೆ ಏನಾಯ್ತು?

ಬಾಂಗ್ಲಾದೇಶದಲ್ಲಿ ತಮ್ಮ ಮೇಲಿನ ದಾಳಿ ಖಂಡಿಸಿ ಹಿಂದೂ ಪ್ರಜೆಗಳು ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿದ್ದಾರೆ. ರಾಜಧಾನಿ ಢಾಕಾದಲ್ಲಿ ಪ್ರತಿಭಟನೆ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ. ಹಿಂದೂಗಳ ಮನೆಗಳು, ಬ್ಯುಸಿನೆಸ್​​ಗಳಿಗೆ ರಕ್ಷಣೆ ನೀಡುವಂತೆ ಆಗ್ರಹಿಸಿದ್ದಾರೆ. ಹಿಂದೂಗಳ ಮೇಲೆ ದಾಳಿ ನಡೆಸಿದವರನ್ನು ನ್ಯಾಯಾಂಗದ ಮೂಲಕವೇ ಶಿಕ್ಷಿಸಲು ಮಧ್ಯಂತರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಲೂಟಿ, ದೌರ್ಜನ್ಯ, ಹತ್ಯೆಗೊಳಗಾದ ಹಿಂದೂಗಳ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲು ಆಗ್ರಹಿಸಿದ್ದಾರೆ. ಅಲ್ಪಸಂಖ್ಯಾತ ಆಯೋಗ ರಚಿಸಿ ಹಿಂದೂ ದೇವಾಲಯಗಳಿಗೆ ರಕ್ಷಣೆ ನೀಡಲು ಒತ್ತಾಯಿಸಿದ್ದಾರೆ. ಇನ್ನು ಬಾಂಗ್ಲಾದೇಶದಲ್ಲಿ ವಿಷಮ ಪರಿಸ್ಥಿತಿ ತಲೆದೋರಿದ ಬಳಿಕ ಸುಮಾರು 7,200 ಮಂದಿ ಭಾರತೀಯ ವಿದ್ಯಾರ್ಥಿಗಳು ಸ್ವದೇಶಕ್ಕೆ ಮರಳಿದ್ದಾರೆ ಎನ್ನಲಾಗಿದೆ. ವಿದ್ಯಾರ್ಥಿಗಳು ಸೇರಿದಂತೆ 19 ಸಾವಿರ ಭಾರತೀಯ ಪ್ರಜೆಗಳು ಬಾಂಗ್ಲಾದೇಶದಲ್ಲಿದ್ದಾರೆ ಎನ್ನಲಾಗಿದೆ.

Advertisment


">August 10, 2024

publive-image

ಬೆಂಗಳೂರಿನಲ್ಲಿ ಹಿಂದೂ ಕಾರ್ಯಕರ್ತರ ಪ್ರತಿಭಟನೆ, ಆಕ್ರೋಶ
ಬಾಂಗ್ಲಾದೇಶದಲ್ಲಿ ಹಿಂದೂಗಳ ರಾಕ್ಷಸೀಯ ಕೃತ್ಯ ಖಂಡಿಸಿ ಬೆಂಗಳೂರಿನ ಹಲವೆಡೆ ಪ್ರತಿಭಟನೆಗಳು ಮೊಳಗಿವೆ.ಮೈಸೂರು ವೃತ್ತದಲ್ಲಿ ಹಿಂದೂ ಕಾರ್ಯಕರ್ತರು ಕೇಸರಿ ಬಾವುಟ ಹಿಡಿದು ಸಂಘಟನೆಗಳು ಪ್ರತಿಭಟನೆ ನಡೆಸಿದ್ವು. ಪ್ರತಿಭಟನೆಗೆ ಅವಕಾಶ ನೀಡದ ಪೊಲೀಸರು ಎಲ್ಲರನ್ನೂ ವಶಕ್ಕೆ ಪಡೆದ್ರು. ಇದಕ್ಕೆ ಹಿಂದೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು.
ಇನ್ನು ಕೋನಪ್ಪನ ಅಗ್ರಹಾರದಲ್ಲೂ ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ರು. ಪ್ಲೇಕಾರ್ಡ್ ಹಿಡಿದು ಹಲವೆಡೆ ಮೌನ ಪ್ರತಿಭಟನೆ ನಡೆಸಿದ್ರು. ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ಆಗುತ್ತಿರುವ ದೌರ್ಜನ್ಯದ ಬಗ್ಗೆ ದೇಶದ ಎಲ್ಲರೂ ಧ್ವನಿ ಎತ್ತಬೇಕು ಅಂತ ಆಗ್ರಹಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment