/newsfirstlive-kannada/media/post_attachments/wp-content/uploads/2025/04/Muttappa-rai-Son-Ricki-Rai-Case-1.jpg)
ರಾಮನಗರ: ಭೂಗತ ಲೋಕದ ಮಾಜಿ ದೊರೆ ಮುತ್ತಪ್ಪ ರೈ ಕಿರಿಯ ಮಗ ರಿಕ್ಕಿ ರೈ ಮೇಲೆ ಭಯಾನಕ ಗುಂಡಿನ ದಾಳಿ ನಡೆದಿದೆ. ಈ ಫೈರಿಂಗ್ ಬಗ್ಗೆ ಬಿಡದಿ ಪೊಲೀಸರು ಪ್ರಕರಣ ದಾಖಲಿಸಿದ್ದು, ಸ್ಫೋಟಕ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಮೂವರ ಮೇಲೆ ಅನುಮಾನ ವ್ಯಕ್ತವಾಗುತ್ತಿದೆ.
ಮುತ್ತಪ್ಪ ರೈ ಪುತ್ರನ ಮೇಲೆ ನಡೆದಿರೋ ಫೈರಿಂಗ್ ಪ್ರಕರಣದಲ್ಲಿ ರಿಯಲ್ ಎಸ್ಟೇಟ್ ಮಾಫಿಯಾದ ವಾಸನೆ ಮೂಗಿಗೆ ಬಡಿದಿದೆ. ರಿಕ್ಕಿ ರೈ ಕಾರು ಚಾಲಕ ಬಸವರಾಜು ಬಿಡದಿ ಠಾಣೆಯಲ್ಲಿ ಮೂವರ ವಿರುದ್ಧ ದೂರು ದಾಖಲಿಸಿದ್ದಾರೆ. FIR ನಲ್ಲಿ ಮಾಜಿ ಡಾನ್ ಮುತ್ತಪ್ಪ ರೈ ಎರಡನೇ ಪತ್ನಿ ಅನುರಾಧ, ರಾಕೇಶ್ ಮಲ್ಲಿ ಹಾಗೂ ನಿತೇಶ್ ಎಸ್ಟೇಟ್ ಕಂಪನಿ ಎಂಬುವವರ ವಿರುದ್ಧ ಆರೋಪಿಸಲಾಗಿದೆ. ಪ್ರಮುಖವಾಗಿ ಮಂಗಳೂರಿನ 12 ಎಕರೆ ಜಮೀನು ವಿಚಾರಕ್ಕೆ ಈ ಹಿಂದೆ ರಿಕ್ಕಿ ರೈ ಹಾಗೂ ರಾಕೇಶ್ ಮಲ್ಲಿ ಮಧ್ಯೆ ವಿವಾದವಾಗಿತ್ತು. ಈ ಹಿನ್ನೆಲೆಯಲ್ಲಿ ಫೈರಿಂಗ್ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಮುತ್ತಪ್ಪ ರೈ V/S ರಾಕೇಶ್ ಮಲ್ಲಿ!
ಫೈರಿಂಗ್ ಪ್ರಕರಣದ ಆರೋಪಿ ಈ ರಾಕೇಶ್ ಮಲ್ಲಿ ರಿಕ್ಕಿ ರೈಗೆ ಅಲ್ಲ ಅವರಪ್ಪನಿಗೆ ದುಷ್ಮನ್ ಆಗಿ ಬದಲಾಗಿದ್ದರು. ರಾಕೇಶ್ ಮಲ್ಲಿ & ಮುತ್ತಪ್ಪ ರೈ ಮಧ್ಯೆ ಮಂಗಳೂರು ಸಮೀಪದ ಜಮೀನು ವಿವಾದ ಇತ್ತು. ಗುರುವಾಯುರಿನ 12 ಎಕರೆ ಜಮೀನಿನ ವ್ಯಾಜ್ಯ ಮುತ್ತಪ್ಪ ರೈ ಬದುಕಿದ್ದಾಗಿನಿಂದಲೂ ನಡೆದಿತ್ತು.
ಕ್ಯಾನ್ಸರ್‌ಗೆ ಮುತ್ತಪ್ಪ ರೈ ಸಾವಿನ್ನಪ್ಪಿದ ಬಳಿಕವೂ ರೈ ಕುಟುಂಬ ಹಾಗೂ ರಾಕೇಶ್ ಮಲ್ಲಿ ಅವರ ಜಮೀನಿನ ವಿವಾದ ಮುಂದುವರೆದಿತ್ತು. ಇದೇ ಜಮೀನು ವಿವಾದ ರಿಕ್ಕಿ ರೈ & ರಾಕೇಶ್ ಮಲ್ಲಿ ಮಧ್ಯೆ ಇತ್ತು. ಮುತ್ತಪ್ಪ ರೈ ಬಳಿಕ ರಾಕೇಶ್ ಮಲ್ಲಿ & ರಿಕ್ಕಿ ರೈ ಜಾಟಾಪಟಿ ನಡೆದಿತ್ತು. ಇದೇ ಜಮೀನಿನ ವಿಚಾರಕ್ಕೆ ರಿಕ್ಕಿ ರೈ ಮೇಲೆ ಗುಂಡಿನ ದಾಳಿ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಇದು ಪಕ್ಕಾ ಪ್ಲಾನ್ಡ್ ಅಟ್ಯಾಕ್!
ರಿಕ್ಕಿ ರೈ ದಾಳಿ ಪ್ರಕರಣ ದಾಖಲಿಸಿರುವ ಬಿಡದಿ ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ರಿಕ್ಕಿ ರೈ ಅವರು ತನ್ನ ತಂದೆ ಮುತ್ತಪ್ಪ ರೈ ಒಡೆತನದ ಆಸ್ತಿ, ರಿಯಲ್ ಎಸ್ಟೇಟ್ ಸೇರಿದಂತೆ ಎಲ್ಲಾ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು. ಹೀಗಾಗಿ ರಿಕ್ಕಿ ರೈ ಬಗ್ಗೆ ಚೆನ್ನಾಗಿ ಗೊತ್ತಿರುವವರಿಂದಲೇ ಅಟ್ಯಾಕ್ ಮಾಡಲಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: ರಿಕ್ಕಿ ರೈ ಪ್ರಕರಣಕ್ಕೆ ಹೊಸ ತಿರುವು.. ಘಟನೆ ಬಳಿಕ ಏನೆಲ್ಲ ಆಯ್ತು..? ಟಾಪ್ 20 ಅಪ್ಡೇಟ್ಸ್..!
ಪೊಲೀಸರ ಮಾಹಿತಿ ಪ್ರಕಾರ ದುಷ್ಕರ್ಮಿಗಳು ಒಂದು ಬಾರಿ ಮಾತ್ರ ಗುಂಡು ಹಾರಿಸಿದ್ದಾರೆ. ಒಂದು ರೌಂಡ್ ಫೈಯರ್‌ಗೆ ಬುಲೆಟ್ ಕಾರನ್ನು ನುಸುಳಿ ಬಂದು ಇಬ್ಬರಿಗೆ ಗಾಯ ಮಾಡಿದೆ. ಡ್ರೈವರ್ ಡೋರ್‌ನ ಮೂಲಕ ಒಳಗೆ ಎಂಟ್ರಿ ಕೊಟ್ಟ ಬುಲೆಟ್ ನಂತರ ಡ್ರೈವರ್ ಸೀಟ್ ಕುಶನ್ ಒಳಗೆ ನುಗ್ಗಿದೆ. ಆಮೇಲೆ ಕಾರಿನ ಹಿಂಬದಿ ಸೀಟ್‌ನ ಎಡಭಾಗದ ಡೋರ್‌ಗೆ ಗುಂಡು ತಾಗಿದೆ. ಆಗ ಡ್ರೈವರ್ ಬೆನ್ನಿಗೆ ಹಾಗೂ ರಿಕ್ಕಿ ರೈ ಮೂಗು ಹಾಗೂ ಕೈಗೆ ಗಂಭೀರ ಗಾಯಗಳಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ