/newsfirstlive-kannada/media/post_attachments/wp-content/uploads/2025/01/SAIF-ALI-KHAN.jpg)
ಸದ್ಯ ದೇಶದಲ್ಲಿ ಬಾಲಿವುಡ್ ನವಾಬ ಸೈಫ್ ಅಲಿಖಾನ್ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಈಗ ದೊಡ್ಡ ಸದ್ದನ್ನು ಮಾಡುತ್ತಿದೆ. ತಡರಾತ್ರಿ 2.30ರ ವೇಳೆಗೆ ಈ ಒಂದು ಘಟನೆ ನಡೆದಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಒಂದು ಅಂದಾಜಿನ ಪ್ರಕಾರ ಚಾಕುವಿನಿಂದ ದಾಳಿ ಮಾಡಿದವನು ಸೈಫ್ ಅಲಿಖಾನ್ ಮನೆಯಲ್ಲಿಯೇ ಇದ್ದಿರಬಹುದು ಎಂಬ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ. ಏಕೆಂದರೆ ಘಟನೆ ನಡೆದ ಎರಡು ಗಂಟೆಗಳ ಹಿಂದಿನ ದೃಶ್ಯಾವಳಿಗಳನ್ನು ಪರಿಶೀಲಿಸಿ ನೋಡಿದರೆ, ಹೊರಗಿನಿಂದ ಯಾರು ಒಳಗಡೆಗೆ ಬಂದ ದೃಶ್ಯಗಳು ಕಂಡು ಬಂದಿಲ್ಲ ಎಂದು ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಪೊಲೀಸರು ಬಾಂದ್ರಾದಲ್ಲಿರುವ ಸೈಫ್ ಅಲಿಖಾನ್ ಮನೆಯಲ್ಲಿರುವ ಮಹಿಳೆಯೊಬ್ಬಳ ಮೇಲೆಯೂ ಕೂಡ ಚಾಕುವಿನಿಂದ ದಾಳಿ ನಡೆಸಲಾಗಿದೆ. ಆಕೆಯನ್ನು ಕೂಡ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯದ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:6 ಬಾರಿ ಚಾಕು ಇರಿತ, 2 ಎರಡು ಗಂಭೀರ ಗಾಯ.. ಸೈಫ್ ಅಲಿ ಖಾನ್ ಆರೋಗ್ಯದ ಬಗ್ಗೆ ವೈದ್ಯರು ಮಾಹಿತಿ..
ನಮಗೆ ಮಧ್ಯರಾತ್ರಿ ಸುಮಾರು 3 ಗಂಟೆಗೆ ಸೈಫ್ ಅಲಿಖಾನ್ ಮೇಲೆ ನಡೆದ ದಾಳಿಯ ಬಗ್ಗೆ ಮಾಹಿತಿ ದೊರೆಯಿತು. ಹಿರಿಯ ಅಧಿಕಾರಿಗಳು ಸೇರಿ ಎಲ್ಲಾ ಪೊಲೀಸರು ಅವರ ಮನೆಗೆ ಹೋದಾಗ ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಹಾಗೂ ಚಿಕಿತ್ಸೆ ಜಾರಿಯಲ್ಲಿತ್ತು. ಎಂದು ಸ್ಥಳೀಯ ಡಿಸಿಪಿ ದಿಕ್ಷೀತ್​ ಗೆಡಮ್ ಹೇಳಿದ್ದಾರೆ. ಹೇಳಿದ್ದಾರೆ.
ಸೈಫ್ ಅಲಿಖಾನ್ ಮನೆಯಲ್ಲಿ ಒಂದು ಡಕ್ಟ್​ ಇದೆ. ಅದು ಸೈಫ್ ಅಲಿಖಾನ್ ಬೆಡ್​ರೂಮ್​ನಲ್ಲಿ ಓಪನ್ ಆಗುತ್ತದೆ. ಹೆಚ್ಚು ಕಡಿಮೆ ಪಾತಕಿ ಅದೇ ಮಾರ್ಗದಿಂದ ಬಂದಿರಬಹುದು ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಮೂಲಗಳು ಹೇಳುವ ಪ್ರಕಾರ ಅರೋಪಿಯನ್ನು ಪತ್ತೆ ಹಚ್ಚಲು ಈಗಾಗಲೇ ಎಂಟು ಪೊಲೀಸ್​ ಟೀಮ್​ ರೆಡಿ ಮಾಡಲಾಗಿದೆ. ಹಲವು ಆಯಾಮಗಳಲ್ಲಿ ತನಿಖೆಯನ್ನು ಕೈಗೊಳ್ಳಲು ಪೊಲೀಸರು ಸಜ್ಜಾಗಿದ್ದು. ಸೈಫ್ ಅಲಿಖಾನ್ ಮನೆಯಲ್ಲಿರುವವರಿಂದಲೇ ಈ ಒಂದು ಘಟನೆ ನಡೆದಿದೆ ಎಂದು ಪೊಲೀಸರ ಬಲವಾದ ಶಂಕೆಯಿದೆ
ಈಗಾಗಲೇ ಸೈಫ್ ಅಲಿಖಾನ್ ಮನೆಯಲ್ಲಿ ಕೆಲಸ ಮಾಡುವ ಐದು ಸಿಬ್ಬಂದಿಗಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಸೆಕ್ಯೂರಿಟಿ ಗಾರ್ಡ್​ಗಳನ್ನು ಪ್ರಶ್ನಿಸಿದಾಗ, ಯಾವುದೇ ಅಪರಿಚಿತ ವ್ಯಕ್ತಿ ಮನೆಯೊಳಗೆ ಹೋಗಿದ್ದು ಕಂಡು ಬಂದಿಲ್ಲ ಎಂದು ಹೇಳಲಾಗಿದೆ.
ಇದನ್ನೂ ಓದಿ:ಸೈಫ್ ಅಲಿ ಖಾನ್ ಮೇಲೆ ಚಾಕು ದಾಳಿಗೂ ಮೊದಲು ಏನಾಯಿತು? ಅಸಲಿ ಕತೆ ಬಿಚ್ಚಿಟ್ಟ ಪೊಲೀಸರು
ದಾಳಿ ನಡೆದ ತಕ್ಷಣದಲ್ಲಿಯೇ ಫೋರೆನ್ಸಿಕ್ ಟೀಮ್ ಜೊತೆ ಸೈಫ್ ಮನೆಗೆ ತೆರಳಿದ ಪೊಲೀಸರು ಸಾಕ್ಷಿಗಳನ್ನು ಕಲೆ ಹಾಕಿದ್ದು ಶೀಘ್ರದಲ್ಲಿಯೇ ಆರೋಪಿಯನ್ನು ಪತ್ತೆಹಚ್ಚುವುದಾಗಿ ಭರವಸೆ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us