/newsfirstlive-kannada/media/post_attachments/wp-content/uploads/2025/04/JK.jpg)
ಕಣಿವೆ ನಾಡಿನ ಪಹಲ್ಗಾಮ್ನಲ್ಲಿ ಭಯಾನಕ ರೀತಿಯಲ್ಲಿ ಉಗ್ರರ ದಾಳಿಯಾಗಿದೆ. ಸಹಜ ಜೀವನ, ಶಾಂತಿ ಸ್ಥಿತಿಗೆ ಮರಳ್ತಿದ್ದ ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ, ಪರಿಸ್ಥಿತಿಯನ್ನ ಬಿಗಡಾಯಿಸಿದೆ. ಕಣಿವೆ ನಾಡಿನಲ್ಲಿ ನಡೆದ ಇತ್ತೀಚಿನ ಅತಿದೊಡ್ಡ ಭಯೋತ್ಪಾದಕ ದಾಳಿ ಇದಾಗಿದೆ.
ಬೇಸಿಗೆ ರಜೆ ಕಳೆಯಲು ಕಾಶ್ಮೀರಕ್ಕೆ ಆಗಮಿಸಿದ್ದ ಪ್ರವಾಸಿಗರನ್ನೆ ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಅನಂತನಾಗ್ ಜಿಲ್ಲೆಯ ಪಹಲ್ಗಾಮ್ನಲ್ಲಿ ಇಬ್ಬರು ವಿದೇಶಿಗರು ಸೇರಿ 27 ಪ್ರವಾಸಿಗರು ಜೀವ ಬಿಟ್ಟಿದ್ದಾರೆ. ರಾಕ್ಷಸೀ ಕೃತ್ಯ ಎಸಗಿದ ಈ ಗ್ಯಾಂಗ್ಗೆ ಪಾಕಿಸ್ತಾನದ ಲಷ್ಕರ್ ಎ ತೊಯ್ಬಾ ಉಗ್ರ ಪೋಷಣೆ ಮಾಡಿದೆ.
ಇದನ್ನೂ ಓದಿ: Pahalgam attack: ಮೋದಿ ಸೌದಿ ಪ್ರವಾಸ ಮೊಟಕು.. ಭಾರತಕ್ಕೆ ವಿಶ್ವದ ನಾಯಕರು ಬೆಂಬಲ; ಟ್ರಂಪ್, ಪುಟಿನ್ ಏನಂದ್ರು?
ಕೃತ್ಯದ ಹೊಣೆಯನ್ನ ಎಲ್ಇಟಿಯ The Resistance Front ಹೊತ್ತುಕೊಂಡಿದೆ. ಮಧ್ಯಾಹ್ನ 3 ಗಂಟೆ ಸುಮಾರಿಗೆ ಬೈಸರನ್ ಕಣಿವೆಯಿಂದ ಇಳಿದು ಬಂದ ಉಗ್ರರು, ಪ್ರವಾಸಿಗರ ಸೋಗಿನಲ್ಲಿ ಮಾತನಾಡಿಸುವ ನೆಪದಲ್ಲಿ ದಾಳಿ ಆರಂಭಿಸಿದ್ದಾರೆ. ಇಬ್ಬರು ಸ್ಥಳೀಯರು ಸೇರಿ ಒಟ್ಟು 8 ಉಗ್ರರು ಓಪನ್ ಫೈರ್ ಮಾಡಿದ್ದಾರೆ. ಕೃತ್ಯಕ್ಕೆ ಎಕೆ-47 ಗನ್ ಬಳಕೆ ಆಗಿದ್ದು, ಸ್ಪೆಷಲಿ ಮುಸ್ಲಿಮೇತರರನ್ನು ಗುರಿಯಾಗಿಸಿ ಹೇಡಿತನ ಮೆರೆದಿದ್ದಾರೆ. ನೀವು ಹಿಂದೂಗಳಾ ಎಂದು ಕೇಳಿ ಕೇಳಿ ಟಾರ್ಗೆಟ್ ಮಾಡಿದ್ದಾರೆ. ಇದೀಗ ಓರ್ವ ಭಯೋತ್ಪಾದಕನ ಸ್ಪೆಷಲ್ ಫೋಟೋ ರಿಲೀಸ್ ಆಗಿದೆ. ಗನ್ ಹಿಡಿದು ಭೀಕರ ಕೃತ್ಯ ನಡೆಸ್ತಿರುವ ಫೋಟೋ ಅದಾಗಿದೆ.
ಇದನ್ನೂ ಓದಿ: ನಮ್ಮನ್ನೂ ಮುಗಿಸಿ ಅಂದಾಗ ‘ಮೋದಿಗೆ ಹೋಗಿ ಹೇಳು’ ಎಂದ ಉಗ್ರ- ಭೀಕರ ಕ್ಷಣ ಬಿಚ್ಚಿಟ್ಟ ಮಂಜುನಾಥ್ ಪತ್ನಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ