ಮೆಟ್ರೋ ಪ್ರಯಾಣಿಕರೇ ಇಲ್ ಕೇಳಿ.. ಈ ಮಾರ್ಗದಲ್ಲಿ ನಾಳೆ 2 ಗಂಟೆ ಮೆಟ್ರೋ ಓಡಾಡಲ್ಲ

author-image
Ganesh
Updated On
ಈ ಮಾರ್ಗದ ಮೆಟ್ರೋ ಸಂಚಾರದಲ್ಲಿ ಜೂನ್ 22 ರಂದು ವ್ಯತ್ಯಯ.. ಕಾರಣವೇನು?
Advertisment
  • ಬಿಎಂಆರ್​ಸಿಎಲ್​​ ನೀಡಿರುವ ಮಹತ್ವದ ಮಾಹಿತಿ ಇಲ್ಲಿದೆ
  • ಬೆಳಗ್ಗೆ 7 ಗಂಟೆಯಿಂದ ಸಂಜೆ 9 ಗಂಟೆವರೆಗೆ ಮೆಟ್ರೋ ಓಡಲ್ಲ
  • ಮೆಟ್ರೋ ಪ್ರಯಾಣಿಕರು ಓದಲೇಬೇಕಾದ ಸ್ಟೋರಿ ಇದು

ಬೆಂಗಳೂರು: ನಾಳೆ ಬೆಳಗ್ಗೆ 2 ಗಂಟೆಗಳ ಕಾಲ ಮೆಟ್ರೋ ಸೇವೆಯಲ್ಲಿ ವ್ಯತ್ಯಯ ಆಗಲಿದೆ ಎಂದು ಬಿಎಂಆರ್​ಸಿಎಲ್ ತಿಳಿಸಿದೆ.

ನಮ್ಮ ಮೆಟ್ರೋ ನೇರಳೆ ಮಾರ್ಗದ ಕಾಮಗಾರಿ ಹಿನ್ನೆಲೆಯಲ್ಲಿ ನೇರಳ ಮಾರ್ಗದ ಮೆಟ್ರೋ ಟ್ರೈನ್​​ಗಳ ಓಡಾಟದಲ್ಲಿ ವ್ಯತ್ಯಯ ಆಗಲಿದೆ. ಬೆಳಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ಮೆಟ್ರೋ ಸೇವೆ ಸಂಚಾರ ಬಂದ್ ಇರಲಿದೆ.

ಯಾವೆಲ್ಲ ಮಾರ್ಗ..?

ಎಂಜಿ ರಸ್ತೆ-ಬೈಯ್ಯಪ್ಪನಹಳ್ಳಿ ಮಾರ್ಗದ ಮಧ್ಯೆ ತಾತ್ಕಾಲಿಕ ಸ್ಥಗಿತವಾಗಲಿದೆ. ಹಲಸೂರು ಮತ್ತು ಟ್ರಿನಿಟಿ ಮೆಟ್ರೋ ನಿಲ್ದಾಣಗಳ ನಡುವೆ ಬೆಳಗ್ಗೆ 7 ಗಂಟೆ ಯಿಂದ 9 ಗಂಟೆಯವರೆಗೆ ಸಂಚಾರ ವ್ಯತ್ಯಯ ಆಗಲಿದೆ. ಇನ್ನು ಚಲ್ಲಘಟ್ಟದಿಂದ ಎಂಜಿ ರಸ್ತೆ ಮತ್ತು ಬೈಯ್ಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್ ನಡುವೆ ಎಂದಿನಂತೆ ರೈಲುಗಳು ಸಂಚರಿಸಲಿವೆ ಎಂದು ನಮ್ಮ ಮೆಟ್ರೋ ತಿಳಿಸಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಅಮಾನವೀಯ ಕೃತ್ಯ.. ಗೋವಿನ ಕೆಚ್ಚಲು ಕೊಯ್ದು ವಿಕೃತಿ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment