newsfirstkannada.com

ಬೆಂಗಳೂರು ಪಿಜಿಗಳಲ್ಲಿ ಇರೋ ಬ್ಯಾಚುಲರ್ಸ್​ಗಳೇ ಹುಷಾರ್​​.. ನೀವೇ ಇವರ ಟಾರ್ಗೆಟ್​​!

Share :

Published May 22, 2024 at 6:11am

    ಲ್ಯಾಪ್​ಟಾಪ್ ಕದ್ದು ಐಷಾರಾಮಿ ಜೀವನ ಮಾಡುತ್ತಿದ್ದ ಈ ಕುಮಾರ್​​

    ತಮಿಳುನಾಡಿನಲ್ಲಿ ಚೀಪ್​ ರೇಟ್​ಗೆ ಸೇಲ್​ ಮಾಡುತ್ತಿದ್ದ ಕಿಲಾಡಿ ಕಳ್ಳ

    ಕಳ್ಳನಿಂದ 25ಕ್ಕೂ ಹೆಚ್ಚು ಲ್ಯಾಪ್​ಟಾಪ್ಸ್​ ಸೀಜ್​ ಮಾಡಿದ ಪೊಲೀಸರು

ಬೆಂಗಳೂರು: ನೀವು ಪಿ.ಜಿಯಲ್ಲಿ ಏನಾದ್ರು ವಾಸ ಮಾಡ್ತಿದ್ದೀರಾ? ಅಥವಾ ಹೊಸದಾಗಿ ಪಿ.ಜಿಗಳನ್ನ ಹುಡುಕ್ತಿದ್ದೀರಾ? ಹಾಗಾದ್ರೆ, ಈ ಸ್ಟೋರಿಯನ್ನು ನೀವು ಓದಲೇಬೇಕು. ನಿಮಗೆ ಗೊತ್ತಿಲ್ಲದ ಹಾಗೇ ಕಿರಾತಕನೊಬ್ಬ ನೀವಿಲ್ಲದ ಹೊತ್ತಲ್ಲಿ ನಿಮ್ಮ ರೂಂಗೆ ಬಂದು ಹೋಗ್ತಾನೆ. ಬಿ ಅಲರ್ಟ್. ​

ಇದನ್ನೂ ಓದಿ: ಟಿಸಿ ಕೊಡಲಿಲ್ಲ ಎಂದು ವಿದ್ಯಾರ್ಥಿ ಸಾವು ಕೇಸ್​ಗೆ ಟ್ವಿಸ್ಟ್​.. ಡೆತ್​ ನೋಟ್​ನಲ್ಲಿ ಏನಿದೆ?

ಕುಮಾರ್ ಎಂಬ ಖತರ್ನಾಕ್ ಕಳ್ಳ. ಈತನ ಟ್ಯಾಲೆಂಟ್​ ಸಿಕ್ಕ ಸಿಕ್ಕ ಪಿ.ಜಿಗಳಲ್ಲಿ ಲ್ಯಾಪ್​ಟಾಪ್​ ಕದಿಯೋದ್ರಲ್ಲಿ ಈತ ಪಂಟರ್ ಆಗಿದ್ದ. ಇದೀಗ ಮಳ್ಳನಂಗೆ ಕಳ್ಳಾಟವಾಡಿದ್ದ ಕಿಲಾಡಿ ಕುಮಾರ್​, ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಆರೋಪಿಯೂ ಲ್ಯಾಪ್​ಟಾಪ್​ಗಳನ್ನ ಕದಿಯಲು ಮಾಡಿದ್ದ ಪ್ಲ್ಯಾನಿಂಗ್​ ಕೇಳಿ ಪೊಲೀಸರೇ ಶಾಕ್​ ಆಗಿದ್ದಾರೆ.

ಈ ಕುಮಾರ್ ಮೂಲತಃ ಆಂಧ್ರಪ್ರದೇಶದ ಮೂಲದವನು. ಸಂಬಂಧಿಕರ ಮನೆಯಲ್ಲೇ ಠಿಕಾಣಿ ಹೂಡಿದ್ದ. ಕಳ್ಳತನವನ್ನೇ ಪಾರ್ಟ್​​ ಟೈಂ ಜಾಬ್ ಮಾಡ್ಕೊಂಡಿದ್ದ ಕುಮಾರ್​, ರಾತ್ರಿ ಹಾಗೂ ಮುಂಜಾನೆ ಮಾತ್ರ ಲ್ಯಾಪ್​ಟಾಪ್​ ಕಳ್ಳತನ ಮಾಡ್ತಿದ್ದ. ಪರಿಚಯದವರನ್ನ ಭೇಟಿ ಮಾಡೋ ಸೋಗಿನಲ್ಲಿ ಜೆಂಟ್ಸ್​ ಪಿ.ಜಿಗಳಿಗೆ ನುಗ್ತಾಯಿದ್ದ ಈತ, ಕಿಟಕಿ ಮೂಲಕ ಕೈ ಹಾಕಿ ಲ್ಯಾಪ್​ಟಾಪ್​​ಗಳನ್ನ ಕದ್ದು ಎಸ್ಕೇಪ್ ಆಗ್ತಿದ್ದ. ಹೀಗೆ ಕಳ್ಳತನ ಮಾಡ್ತಿದ್ದ ಕುಮಾರ್​, ಕದ್ದ ಲ್ಯಾಪ್​ಟಾಪ್​ಗಳನ್ನ ತಮಿಳುನಾಡಿನಲ್ಲಿ ಚೀಪ್​ ರೇಟ್​ಗೆ ಮಾರಾಟ ಮಾಡ್ತಿದ್ದ. ಬಂದ ದುಡ್ಡಲ್ಲಿ ಶೋಕಿ ಜೀವನ ಮಾಡ್ತಿದ್ದ.

ಸದ್ಯ ಪಿ.ಜಿಯಲ್ಲಿದ್ದ ಸಿಸಿಟಿವಿ ಆಧರಿಸಿ ಕುಮಾರಸ್ವಾಮಿ ಲೇಔಟ್​ ಪೊಲೀಸರು ಕುಮಾರ್​ನನ್ನ ಲಾಕ್ ಮಾಡಿದ್ದಾರೆ. ಸುಮಾರು 25 ಲ್ಯಾಪ್​ಟಾಪ್​ಗಳನ್ನ ಸೀಜ್ ಮಾಡಿ ವಿಚಾರಣೆಗೊಳಪಡಿಸಿದ್ದಾರೆ. ಲ್ಯಾಪ್​ಟಾಪ್ ಕದ್ದು ಐಷಾರಾಮಿ ಜೀವನ ಮಾಡ್ಬೇಕು ಅಂದುಕೊಂಡವನು ಮಾಡಿದ ತಪ್ಪಿಗೆ ಕಂಬಿ ಹಿಂದೆ ಸೇರಿದ್ರೆ, ಇತ್ತ, ಬೆಂಗಳೂರಿನ ಪಿ.ಜಿಗಳಲ್ಲಿ ಸೆಕ್ಯೂರಿಟಿ ವ್ಯವಸ್ಥೆ ಬಗ್ಗೆಯೇ ಅನುಮಾನ ಶುರುವಾಗಿದೆ. ಅದೇನೆ ಹೇಳಿ, ಪಿ.ಜಿಯಲ್ಲಿ ವಾಸ ಮಾಡೋರೇ ಹೊರಗೆ ಹೋಗೋ ಮುನ್ನ ಬಾಗಿಲನ್ನು ಮಿಸ್ ಮಾಡದೇ ಲಾಕ್ ಮಾಡಿ. ಆದಷ್ಟು ಜಾಗರೂಕರಾಗಿರಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರು ಪಿಜಿಗಳಲ್ಲಿ ಇರೋ ಬ್ಯಾಚುಲರ್ಸ್​ಗಳೇ ಹುಷಾರ್​​.. ನೀವೇ ಇವರ ಟಾರ್ಗೆಟ್​​!

https://newsfirstlive.com/wp-content/uploads/2024/05/lap-top1.jpg

Load More