/newsfirstlive-kannada/media/post_attachments/wp-content/uploads/2024/04/CET.jpg)
2025ರ CET ಪರೀಕ್ಷೆ ಬರೆದು ಫಲಿತಾಂಶಕ್ಕೆ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್ ಇದು. ನಾಳೆ ಬೆಳಗ್ಗೆ 11.30ಕ್ಕೆ UG CET-2025 ಫಲಿತಾಂಶ ಪ್ರಕಟ ಮಾಡುವ ಮುಹೂರ್ತ ಫಿಕ್ಸ್ ಆಗಿದೆ.
ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ ಸುಧಾಕರ್ ಅವರು ಕೆಇಎ ಕಚೇರಿಯಲ್ಲಿ ಸಿಇಟಿ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟ ಮಾಡಲಾಗಿದ್ದಾರೆ.
ಬೆಳಗ್ಗೆ 11.30ಕ್ಕೆ ಸಚಿವ ಎಂ.ಸಿ ಸುಧಾಕರ್ ಅವರು ಸಿಇಟಿ ಫಲಿತಾಂಶ ಪ್ರಕಟ ಮಾಡಿದ್ರೆ, ನಾಳೆ ಮಧ್ಯಾಹ್ನ 2 ಗಂಟೆಗೆ ಅಧಿಕೃತ ವೆಬ್‌ಸೈಟ್‌ನಲ್ಲಿ CET ಫಲಿತಾಂಶ ಪ್ರಕಟವಾಗಲಿದೆ.
ಕಳೆದ ಏಪ್ರಿಲ್ 15, 16 & 17ರಂದು ರಾಜ್ಯದಲ್ಲಿ CET ಪರೀಕ್ಷೆ ನಡೆಸಲಾಗಿತ್ತು. ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಅವರು ಫಲಿತಾಂಶದ ಬಗ್ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಖಾಸಗಿ ಶಾಲೆಯಲ್ಲೂ ಹೆಣ್ಮಕ್ಕಳಿಗೆ ಮೀಸಲಾತಿ.. 50 ಪರ್ಸೆಂಟ್ ಮೀಸಲು ನಿಯಮ ಏನ್ ಹೇಳುತ್ತದೆ..?
ನಾಳೆ ಮಧ್ಯಾಹ್ನ 2 ಗಂಟೆ ನಂತರ ಈ ಕೆಳಗಿನ ವೆಬ್‌ಸೈಟ್‌ನಲ್ಲಿ UG CET-2025ರ ಫಲಿತಾಂಶ ಲಭ್ಯ ಇದೆ.
https://cetonline.Karnataka.gov.in/ugcetrank2025/checkresult.aspxhttps://karresults.nic.in
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ