/newsfirstlive-kannada/media/post_attachments/wp-content/uploads/2024/06/Attica-Gold-Company-1.jpg)
ತುಮಕೂರು: ಅಟ್ಟಿಕಾ ಗೋಲ್ಡ್ ಕಂಪನಿಗೆ ಬನ್ನಿ. ಅಟ್ಟಿಕಾ ಗೋಲ್ಡ್ ಕಂಪನಿ ನಿಮ್ಮ ಚಿನ್ನವನ್ನು ಇಂದಿನ ಆನ್‌ಲೈನ್ ರೇಟ್‌ಗೆ ಕೊಂಡು ನಿಮಗೆ ಒಂದೇ ನಿಮಿಷದಲ್ಲಿ ಹಣ ಕೊಡ್ತಾರೆ. ಇದು ಅಟ್ಟಿಕಾ ಗೋಲ್ಡ್ ಕಂಪನಿಯ ಜಾಹೀರಾತು. ಹಳೆಯ ಚಿನ್ನದ ಆಭರಣ ಕೊಂಡು ಕೊಳ್ಳುವುದರ ಬದಲು ಅಟ್ಟಿಕಾ ಕಂಪನಿ ಮಾಲೀಕರು ಕದ್ದ ಚಿನ್ನದ ಆಭರಣ ಖರೀದಿ ಮಾಡಿ ಸಿಕ್ಕಿಬಿದ್ದಿದ್ದಾರೆ.
ಇದನ್ನೂ ಓದಿ: ಅದೊಂದು ತಪ್ಪಿನಿಂದ ಚಿಕ್ಕ ವಯಸ್ಸಿಗೆ ದುರಂತ ಅಂತ್ಯ.. ತೇಜಸ್ ಸಾವಿನ ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!
ಕಳ್ಳರಿಂದ ಕದ್ದ ಚಿನ್ನಾಭರಣವನ್ನು ಖರೀದಿಸಿದ ಆರೋಪದಲ್ಲಿ ಅಟ್ಟಿಕಾ ಗೋಲ್ಡ್ ಕಂಪನಿ ಮಾಲೀಕ ಅಟ್ಟಿಕಾ ಬಾಬು @ ಪಿ.ಎಸ್.ಅಯ್ಯೂಬ್ ಅವರನ್ನು ಬಂಧಿಸಲಾಗಿದೆ. ಬೆಂಗಳೂರಿಗೆ ಬಂದ ತುರುವೇಕೆರೆ ಪೊಲೀಸರು ಫ್ರೇಜರ್ ಟೌನ್ ಬಳಿಯಿರುವ ಮನೆಯಲ್ಲೇ ಅಟ್ಟಿಕಾ ಬಾಬು ಅವರನ್ನು ವಶಕ್ಕೆ ಪಡೆದಿದ್ದಾರೆ. ತುರುವೇಕೆರೆ ಸಿಪಿಐ ಲೋಹಿತ್ ನೇತೃತ್ವದಲ್ಲಿ ಈ ಮಿಂಚಿನ ಕಾರ್ಯಾಚರಣೆ ನಡೆದಿದೆ.
ಇದನ್ನೂ ಓದಿ: ಹೆಂಡತಿಯನ್ನ ಕಟ್ಟಿ ಹಾಕಿ, ಗಂಡನಿಗೆ ಚೂರಿ ಇರಿತ.. ಮನೆಯಲ್ಲಿದ್ದ ಹಣ, ಚಿನ್ನಾಭರಣ ದೋಚಿದ ಗ್ಯಾಂಗ್
ಅಸಲಿಗೆ ನಡೆದಿದ್ದೇನು?
ಆನೇಕಲ್ ತಾಲ್ಲೂಕಿನ ಜಿಗಣಿ ಮೂಲದ ಉದಯ್ @ ಅಶೋಕ್ ಎಂಬ ಆರೋಪಿ ಹಗಲು ಕಳ್ಳತನ ಮಾಡುತ್ತಿದ್ದ. ಆರೋಪಿ ಉದಯ್ ತುರುವೇಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಗಲು ಕಳ್ಳತನ ಮಾಡಿದ್ದ ಚಿನ್ನಾಭರಣವನ್ನು ಜಿಗಣಿಯಲ್ಲಿರುವ ಅಟ್ಟಿಕಾ ಗೋಲ್ಡ್ ಶಾಪ್‌ನಲ್ಲಿ ಮಾರಾಟ ಮಾಡಿದ್ದ. ಕಳವು ಮಾಲನ್ನು ಅಟ್ಟಿಕಾ ಬಾಬು ಅವರು ಖರೀದಿ ಮಾಡಿದ್ದರು.
ಇದನ್ನೂ ಓದಿ: ಸಾವಿಗೂ ಮುನ್ನ ತೇಜಸ್ ಕೊನೇ ವಿಡಿಯೋ ವೈರಲ್.. ಸ್ನೇಹಿತನ ನೆನೆದು ಕಣ್ಣೀರಿಟ್ಟ ವರುಣ್ ಆರಾಧ್ಯ ಬಳಗ
ಈ ಪ್ರಕರಣ ಸಂಬಂಧ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸ್ ತನಿಖೆಯಲ್ಲಿ ಆರೋಪಿ ಉದಯ್ @ ಅಶೋಕ್ ಮಾಹಿತಿ ಬಾಯ್ಬಿಟ್ಟಿದ್ದ. ಉದಯ್ ತನ್ನ ಪತ್ನಿ ಶಾರದಾ ಮೂಲಕ ಕಳವು ಮಾಡಿದ್ದ ಚಿನ್ನಾಭರಣವನ್ನ ಅಟ್ಟಿಕಾ ಗೋಲ್ಡ್ ಕಂಪನಿಯಲ್ಲಿ ಮಾರಾಟ ಮಾಡಿಸಿದ್ದ. ಪೊಲೀಸ್ ತನಿಖೆಯಲ್ಲಿ ಕಳವು ಮಾಲು ಖರೀದಿ ಮಾಡಿರೋದು ಬೆಳಕಿಗೆ ಬಂದಿತ್ತು.
ಕಳವು ಮಾಲು ಖರೀದಿ ಮಾಡಿದ ಆರೋಪದಡಿ ಅಟ್ಟಿಕಾ ಬಾಬು ಅಲಿಯಾಸ್ ಬೊಮ್ಮನಹಳ್ಳಿ ಬಾಬು ಅವರನ್ನು ಪೊಲೀಸರು ಬಂಧಿಸಿದ್ದಾರೆ. ತುರುವೇಕೆರೆ ಸಿಪಿಐ ಲೋಹಿತ್ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆದಿತ್ತು. ಸದ್ಯ ಬೆಂಗಳೂರಿನಲ್ಲಿ ಬಂಧಿಸಿರುವ ಪೊಲೀಸರು ಆರೋಪಿಯನ್ನು ತುರುವೇಕೆರೆ ಪೊಲೀಸ್ ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ