Advertisment

‘ಮೊಮ್ಮಗ ಬದುಕಿರೋದೇ ಅನುಮಾನ’- ಅತುಲ್ ಸುಭಾಷ್ ತಂದೆ ಸ್ಫೋಟಕ ಹೇಳಿಕೆ; ಕೇಸ್‌ಗೆ ಹೊಸ ಟ್ವಿಸ್ಟ್!

author-image
admin
Updated On
‘ಮೊಮ್ಮಗ ಬದುಕಿರೋದೇ ಅನುಮಾನ’- ಅತುಲ್ ಸುಭಾಷ್ ತಂದೆ ಸ್ಫೋಟಕ ಹೇಳಿಕೆ; ಕೇಸ್‌ಗೆ ಹೊಸ ಟ್ವಿಸ್ಟ್!
Advertisment
  • ಅತುಲ್ ಸುಭಾಷ್‌ ಪತ್ನಿ, ಅತ್ತೆ & ಬಾಮೈದ ಅರೆಸ್ಟ್​ ಆಗಿದ್ದು ಹೇಗೆ?
  • 4 ವರ್ಷದ ಅತುಲ್ ಮಗ ಈಗ ಎಲ್ಲಿದ್ದಾನೆ ಅನ್ನೋದು ಗೊತ್ತಿಲ್ಲ!
  • ನ್ಯೂಸ್ ​ಫಸ್ಟ್ ಚಾನೆಲ್‌ ವರದಿಗೆ ಹೋರಾಟಗಾರರಿಂದ ಧನ್ಯವಾದ
ದೇಶಾದ್ಯಂತ ಸದ್ದು ಮಾಡಿರುವ ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ ಕೇಸ್‌ ಈಗ ರೋಚಕ ಘಟ್ಟ ತಲುಪಿದೆ. ಅತುಲ್‌ಗೆ ಬಾಕಿ ಇರುವ ನ್ಯಾಯ ಸಿಗೋ ಕಾಲ ಹತ್ತಿರ ಬಂದಂತೆ ಕಾಣುತ್ತಿದೆ. ಅತುಲ್ ಸುಭಾಷ್​ಗೆ ಚಿತ್ರಹಿಂಸೆ ಕೊಟ್ಟ ಆರೋಪಿಗಳ ಕೈಗೆ ಬೆಂಗಳೂರು ಪೊಲೀಸರು ಕೋಳ ಹಾಕಿದ್ದಾರೆ. ಅತುಲ್ ಸುಭಾಷ್ ಅವರ ತಂದೆ ಸೊಸೆಯ ಮೇಲೆ ಮತ್ತೊಂದು ಸ್ಫೋಟಕ ಆರೋಪ ಮಾಡಿದ್ದಾರೆ.
Advertisment
ಜಸ್ಟೀಸ್ ಇಸ್ ಡ್ಯೂ.. ಐ ವಾಂಟ್​ ಜಸ್ಟೀಸ್.. ಹೀಗೆ ಕೂಗಿ ಕೂಗಿ ಹೇಳಿದ್ದ ಅತುಲ್ ​ಸುಭಾಷ್ ಕೊನೆಗೆ ಹೆಂಡತಿಯಿಂದ ನರಳಿ ನರಳಿ ಪ್ರಾಣಬಿಟ್ಟಿದ್ದಾರೆ. ಅತುಲ್ ಕೇಸ್ ಈಗ​ ದೇಶಾದ್ಯಂತ ಪ್ರತಿಭಟನೆಯ ಕಿಚ್ಚು ಹಚ್ಚಿದೆ. ಸದ್ಯ ಅತುಲ್​​ ಸಾವಿಗೆ ಕಾರಣವಾಗಿರುವ ಮೂವರು ಆರೋಪಿಗಳು ಪೊಲೀಸರ ಕೈಗೆ ಲಾಕ್ ಆಗಿದ್ದು, ನ್ಯೂಸ್ ​ಫಸ್ಟ್ ಬ್ರೇಕ್ ಮಾಡಿದ್ದ ಸುದ್ದಿಯಲ್ಲಿ ದೊಡ್ಡ ಬೆಳವಣಿಗೆ ಆಗಿದೆ.
publive-image
ಟೆಕ್ಕಿ ಅತುಲ್ ಸುಭಾಷ್ ಕೇಸ್.. ಪತ್ನಿ, ಅತ್ತೆ & ಬಾಮೈದ ಅರೆಸ್ಟ್​
ಹರಿಯಾಣದಲ್ಲಿ ಲಾಕ್ ಮಾಡಿದ ಮಾರತ್‌ಹಳ್ಳಿ ಪೊಲೀಸ್
ಟೆಕ್ಕಿ ಅತುಲ್ ಸುಭಾಷ್​ ಕೇಸ್​ನ ಆರೋಪಿಗಳ ಬಂಧನ ಆಗಿದೆ. ಅತುಲ್ ಪತ್ನಿ ನಿಕಿತಾ ಸಿಂಘಾನಿಯ, ಅತ್ತೆ, ನಿಶಾ ಸಿಂಘಾನಿಯ ಹಾಗೂ ಬಾಮೈದ ಅನುರಾಗ್​ ಸಿಂಘಾನಿಯಾನನ್ನ ಮಾರತ್ತಹಳ್ಳಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹರಿಯಾಣದ ಗುರುಗ್ರಾಮದಲ್ಲಿ ನಿಕಿತಾಳನ್ನ ಲಾಕ್ ಮಾಡಿದ್ರೆ, ಉತ್ತರಪ್ರದೇಶದ ಅಲಹಾಬಾದ್​ನಲ್ಲಿ ನಿಶಾ ಹಾಗೂ ಅನುರಾಗ್​ನನ್ನ ಅರೆಸ್ಟ್ ಮಾಡಲಾಗಿದೆ. ಆರೋಪಿಗಳನ್ನ ಬಂಧಿಸಿ ಬೆಂಗಳೂರಿಗೆ ಕರೆತಂದಿರುವ ಪೊಲೀಸರು, ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿತ್ತು. ಸದ್ಯ, ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನ ನೀಡಿ ನ್ಯಾಯಾಧೀಶರು ಆದೇಶ ಹೊರಡಿದ್ದಾರೆ.
publive-image
ಅತುಲ್ ಸುಭಾಷ್ ತಂದೆ ಸ್ಫೋಟಕ ಹೇಳಿಕೆ! 
ನಿಕಿತಾ ಸಿಂಘಾನಿಯ ಅರೆಸ್ಟ್ ಆದ ಮೇಲೆ ಅತುಲ್ ಸುಭಾಷ್ ಅವರ ತಂದೆ ತನ್ನ ಮೊಮ್ಮಗ ಜೀವಂತವಾಗಿ ಇರುವುದೇ ಅನುಮಾನ ಅನ್ನೋ ಸಂಶಯ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, 4 ವರ್ಷದ ಅತುಲ್ ಮಗ ಸದ್ಯ ಕಾಣೆಯಾಗಿದ್ದಾನೆ. ನನ್ನ ಮೊಮ್ಮಗನನ್ನು ಇವ್ರು ಏನು ಮಾಡಿದ್ದಾರೋ ಗೊತ್ತಿಲ್ಲ. ಮೊಮ್ಮಗನ ಜೀವ ಉಳಿಸಲು ಕಾನೂನು ಹೋರಾಟ ಮಾಡಲು ಚಿಂತನೆ ನಡೆಸಿದ್ದಾರೆ.
Advertisment
ನ್ಯೂಸ್ ಫಸ್ಟ್ ಬಿತ್ತರಿಸಿದ್ದ ಸುದ್ದಿ, ಇದೀಗ ರಾಷ್ಟ್ರ ಮಟ್ಟದಲ್ಲಿ ಸದ್ದು!
ಅತುಲ್​ ಕೇಸ್​ನ ಫಸ್ಟ್​ ಬ್ರೇಕ್ ಮಾಡಿದ್ದೇ ನ್ಯೂಸ್​ಫಸ್ಟ್. ಇದೀಗ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡ್ತಿದೆ. ಅಷ್ಟಲ್ಲದೇ, ಟೆಕ್ಕಿ ನ್ಯಾಯಕ್ಕಾಗಿ ಫ್ರೀಡಂ ಪಾರ್ಕ್‌ನಲ್ಲಿ ದಿ ಸೇವ್ ಇಂಡಿಯನ್ ಫ್ಯಾಮಿಲಿ ಫೌಂಡೇಶನ್ ವತಿಯಿಂದ ಪ್ರತಿಭಟನೆ ನಡೆಸಲಾಗಿದೆ. ಅತುಲ್ ಸಾವಿಗೆ ಶರಣಾಗಿಲ್ಲ, ಇದೊಂದು ಕೊಲೆ ಎಂದು ಆಕ್ರೋಶ ಹೊರ ಹಾಕಲಾಗಿದೆ. ಯುಪಿಯಿಂದ ಆಗಮಿಸಿ SAVE INDIAN FAMILY FOUNDATION ಸಹ ಸಂಸ್ಥಾಪಕ ಅನಿಲ್ ಮೂರ್ತಿ ನ್ಯೂಸ್ ​ಫಸ್ಟ್​ಗೆ ಧನ್ಯವಾದ ತಿಳಿಸಿದ್ದಾರೆ. ಮಾಡಿದ ತಪ್ಪಿಗೆ ಆರೋಪಿಗಳು ಕಂಬಿ ಹಿಂದೆ ಸೇರಿದ್ದಾರೆ. ಮತ್ತೊಂದ್ಕಡೆ, ಟೆಕ್ಕಿ ಡೆತ್​ನೋಟ್​ನಲ್ಲಿ ಮಾಡಿರುವ ಆರೋಪಗಳೆಲ್ಲಾ ಸತ್ಯಾನಾ? ಅನ್ನೋ ತನಿಖೆ ಮುಂದುವೆರೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
Advertisment
Advertisment
Advertisment