Advertisment

ಪ್ರಭು ಚೌಹಾಣ್ ಮನೆಯಲ್ಲಿ ಬೀಗರ ಗಲಾಟೆ, ಮಾರಾಮಾರಿ.. ಕಪಾಳಕ್ಕೆ ಬಾರಿಸಿದ ಶಾಸಕ..!

author-image
Veena Gangani
Updated On
ಪ್ರಭು ಚೌಹಾಣ್ ಬೀಗರ ಗಲಾಟೆಗೆ ಟ್ವಿಸ್ಟ್​; ಮಾಜಿ ಸಚಿವನ ಪುತ್ರನ ವಿರುದ್ಧ ಯುವತಿ ಗಂಭೀರ ಆರೋಪ..
Advertisment
  • ಬಿಜೆಪಿ ಮಾಜಿ ಸಚಿವ ಪ್ರಭು ಚೌಹಾಣ್​ರಿಂದ ಕಪಾಳಮೋಕ್ಷ
  • ಪ್ರಭು ಚೌಹಾಣ್ ಮನೆಯಲ್ಲಿ ಬೀಗರ ಗಲಾಟೆ, ಮಾರಾಮಾರಿ
  • ಉದಗೀರ್ ಮೂಲದ ಯುವತಿಯ ಕುಟುಂಬಸ್ಥರಿಂದ ಗಲಾಟೆ

ಬೀದರ್: ಶಾಸಕ ಪ್ರಭು ಚೌಹಾಣ್ ಮನೆಗೆ ನುಗ್ಗಿ ಬೀಗರು ಗಲಾಟೆ ಮಾಡಿಕೊಂಡಿರೋ ಘಟನೆ ತಡರಾತ್ರಿ ಔರಾದ್ ತಾಲೂಕಿನ ಭೋಂತಿ ತಾಂಡಾದಲ್ಲಿ ನಡೆದಿದೆ.

Advertisment

ಇದನ್ನೂ ಓದಿ: ಗಣಪತಿ, ನಾಗರ ಮೂರ್ತಿಗೆ ಕಾಲಿಂದ ಒದ್ದು ವಿಕೃತಿ; ಶಿವಮೊಗ್ಗದಲ್ಲಿ ಟೈಟ್​ ಸೆಕ್ಯೂರಿಟಿ

ಔರಾದ್ ಶಾಸಕ ಪ್ರಭು ಚೌಹಾಣ್ ಮನೆಗೆ ನುಗ್ಗಿ ಗಲಾಟೆ ಮಾಡಿರೋ ವಿಡಿಯೋ ವೈರಲ್ ಆಗಿದೆ. ಪ್ರಭು ಚೌಹಾಣ್ ಅವರ ನಿವಾಸಕ್ಕೆ ಮಹಾರಾಷ್ಟ್ರದ ಉದಗೀರ್ ಮೂಲದ ಯುವತಿ ಕುಟುಂಬಸ್ಥರು ಮನೆಗೆ ನುಗ್ಗಿ ಗಲಾಟೆ ಮಾಡಿದ್ದಾರೆ. ಇದೇ ಗಲಾಟೆಯಲ್ಲಿ ಚೌಹಾಣ್ ಅವರು ಕಪಾಳಮೋಕ್ಷ ಮಾಡುವ ವಿಡಿಯೋ ವೈರಲ್ ಆಗಿದೆ.

publive-image

ಪ್ರಭು ಚೌಹಾಣ್ ಪುತ್ರ ಪ್ರತೀಕ್ ಚೌಹಾಣ್ ಮದುವೆ ವಿಚಾರವಾಗಿ ಈ ಗಲಾಟೆ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ, ಈ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಎಸ್‌ಪಿ ಪ್ರದೀಪ್ ಭೇಟಿ ನೀಡಿದ್ದಾರೆ. ಇಂದು ಪ್ರಭು ಚೌಹಾಣ್ ಅವರ 56ನೇ ವರ್ಷದ ಹುಟ್ಟು ಹಬ್ಬ. ಈ ಮಧ್ಯೆ ಮಗನ ಮದುವೆ ವಿಚಾರಕ್ಕೆ ಮನೆಯಲ್ಲಿ ಗಲಾಟೆ ನಡೆದು ಹೋಗಿದೆ..

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment