/newsfirstlive-kannada/media/post_attachments/wp-content/uploads/2024/12/ASHWIN_ROHITH.jpg)
ಟೀಮ್ ಇಂಡಿಯಾದಲ್ಲಿ ಒಳ ರಾಜಕೀಯ ನಡೆಯುತ್ತಿದೆಯಾ, ಇಷ್ಟು ದಿನ ಇಲ್ಲದ ರಾಜಕೀಯ, ಈಗ ಹೇಗೆ ಬಂತು?. ಪ್ರತಿಭಾವಂತ ಕ್ರಿಕೆಟಿಗರಿಗೆ ಟೀಮ್ ಇಂಡಿಯಾದಲ್ಲಿ ಮರಿಯಾದೆ ಇಲ್ವಾ? ಸ್ವಾರ್ಥ, ಅಹಂ, ಗ್ರೂಪಿಸಂ, ರಾಜಕೀಯ ಟೀಮ್ ಇಂಡಿಯಾದಲ್ಲಿ ಶುರುವಾಗಿದ್ದು ಯಾವಾಗ?. ಅಶ್ವಿನ್ ನಿವೃತ್ತಿಯ ನಂತರ ಅಧಿಕಾರಿಗಳ ಕರಾಳ ಸತ್ಯ, ಆ ಮುಖವಾಡ ಕಳಚಿಬಿತ್ತಾ?.
ಬ್ರಿಸ್ಬೇನ್ ಟೆಸ್ಟ್ ಮುಗಿಯುತ್ತಿದಂತೆ ಆರ್.ಅಶ್ವಿನ್, ಕ್ರಿಕೆಟ್ ಕರಿಯರ್ಗೆ ಗುಡ್ಬೈ ಹೇಳಿದರು. ಅಶ್ವಿನ್ ದಿಢೀರ್ ನಿರ್ಧಾರ, ಎಲ್ಲರಿಗೂ ಶಾಕ್ ಆಗಿದೆ. ಆದರೆ ಅದಕ್ಕಿಂತ ದೊಡ್ಡ ಶಾಕ್, ಅಶ್ವಿನ್ ತಂದೆ ರವಿಚಂದ್ರನ್ ನೀಡಿದ್ದಾರೆ. ಅಶ್ವಿನ್ ಚೆನ್ನೈಗೆ ಬಂದಿಳಿಯುತ್ತಿದಂತೆ, ಮಗನ ನಿವೃತ್ತಿಯ ಬಗ್ಗೆ ತಂದೆ ಸ್ಫೋಟಕ ಹೇಳಿಕೆ ನೀಡಿದ್ದಾರೆ. 14 ವರ್ಷಗಳ ಕಾಲ ಭಾರತ ತಂಡಕ್ಕೆ ಸೇವೆ ಸಲ್ಲಿಸಿದ್ದ ಅಶ್ವಿನ್ಗೆ, ಟೀಮ್ ಇಂಡಿಯಾದಲ್ಲಿ ಅವಮಾನವಾಗಿದೆ. ಹಾಗಾಗಿ ಅಶ್ವಿನ್, ನಿವೃತ್ತಿ ಘೋಷಿಸಿದ್ದಾರೆ ಅಂತ ಹೇಳಿಕೆ ನೀಡಿ, ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ.
ಸ್ಪಿನ್ ಲೆಜೆಂಡ್ ಆರ್.ಅಶ್ವಿನ್ಗೆ ಅವಮಾನ ಮಾಡಿದ್ರಾ?
ಅಶ್ವಿನ್ ತಂದೆ ಕೋಪದಲ್ಲಿಯೋ, ಬೇಸರದಲ್ಲಿಯೋ ಅಥವಾ ಯಾವುದೇ ಒತ್ತಡದಲ್ಲೋ ಈ ಮಾತನ್ನ ಹೇಳಿಲ್ಲ. ಅಶ್ವಿನ್ ತಂದೆ ರವಿಚಂದ್ರನ್, ಇದ್ದಿದ್ದು ಇದ್ದಂತೆ ಹೇಳಿದ್ದಾರೆ. ಅಶ್ವಿನ್ಗೆ ಕಳೆದ ಕೆಲ ವರ್ಷಗಳಿಂದ ತಂಡದಲ್ಲಿ ಅವಮಾನದ ಮೇಲೆ ಅವಮಾನ ಆಗ್ತಿದೆ. ಹಾಗಾಗಿ ಌಶ್, ಈ ದಿಢೀರ್ ನಿವೃತ್ತಿ ತೆಗೆದುಕೊಂಡಿದ್ದಾರೆ ಎಂದು ತಂದೆ ಹೇಳಿದ್ದಾರೆ.
ಅಶ್ವಿನ್ ನಿವೃತ್ತಿ, ಬಾಲ್ಯದ ಕೋಚ್ಗೂ ಶಾಕ್..!
ಪ್ರಾಕ್ಟಿಕಲ್ ಆಗಿ ಯೋಚನೆ ಮಾಡೋದಾದ್ರೆ, ಅಶ್ವಿನ್ ನಿವೃತ್ತಿಗೂ ಮುಂಚೆ ತನಗೆ ಬೇಕಾದವರ ಜೊತೆ ಚರ್ಚೆ ನಡಸೆ ನಡೆಸುತ್ತಿದ್ದರು. ಅದರಲ್ಲೂ ಅಶ್ವಿನ್ ಕ್ರಿಕೆಟ್ ಕರಿಯರ್ಗೆ ಪಿಲ್ಲರ್ ಆಗಿದ್ದ ತಂದೆಗೆ ತಿಳಿಸುತ್ತಾರೆ. ಆದರೆ ತಂದೆಗೆ ಅಶ್ವಿನ್ ನಿವೃತ್ತಿ ಶಾಕ್ ತಂದಿದೆ. ಅಶ್ವಿನ್ ಬಾಲ್ಯದ ಕೋಚ್ ಸುಬ್ರಮಣ್ಯನ್ಗೂ ಆಘಾತ ತಂದಿಯೆಯಂತೆ.
ನಮಗೆಲ್ಲಾ ಶಾಕ್ ಆಗಿದೆ.!
'ಅಶ್ವಿನ್ ನಿವೃತ್ತಿ ನೀಡುವ ಕೆಲವೆ ನಿಮಿಷಗಳ ಮುನ್ನ ನನಗೆ ಗೊತ್ತಾಯಿತು. ಅಶ್ವಿನ್ ನಿವೃತ್ತಿ ತೆಗೆದುಕೊಳ್ಳೋದು ಬಿಡೋದು ಅವನಿಗೆ ಬಿಟ್ಟಿದ್ದು. ಆದ್ರೆ ನಿವೃತ್ತಿಯ ಹಿಂದೆ ಹಲವಾರು ಕಾರಣಗಳಿವೆ. ಆತ ಎಷ್ಟು ದಿನ ಅಂತ ಅವಮಾನಗಳನ್ನ ಸಹಿಸುತ್ತಾನೆ..?'
ರವಿಚಂದ್ರನ್, ಅಶ್ವಿನ್ ತಂದೆ
ಅಶ್ವಿನ್ ನಿವೃತ್ತಿ ನಿರೀಕ್ಷಿಸಿರಲಿಲ್ಲ..!
'ಅಶ್ವಿನ್ ವಿದಾಯದ ಸುದ್ದಿ ಕೇಳಿ ನನಗೆ ತುಂಬಾ ಆಶ್ಚರ್ಯ ಆಗಿದೆ. ಅಶ್ವಿನ್ ಇನ್ನಷ್ಟು ದಿನಗಳ ಕಾಲ ಆಡಬಹುದಿತ್ತು. ತವರಿನಲ್ಲಿ ಇನ್ನೂ ಅನೇಕ ಟೆಸ್ಟ್ ಸರಣಿಗಳನ್ನ ಆಡಿ, ನಂತರ ನಿವೃತ್ತಿ ಘೋಷಿಸಬಹದಿತ್ತು. ಆದರೆ ಅಶ್ವಿನ್ ಸಡನ್ ಆಗಿ ಈ ನಿರ್ಧಾರ ಕೈಗೊಂಡಿದ್ದಾರೆ. ಬಹುಷಃ ಅಶ್ವಿನ್ ನಿವೃತ್ತಿಗೆ ಕಾರಣಗಳಿರಬಹುದು.
ಸುಬ್ರಮಣ್ಯನ್, ಅಶ್ವಿನ್ ಬಾಲ್ಯದ ಕೋಚ್
ಅಷ್ಟಕ್ಕೂ ಅಶ್ವಿನ್ ತಂದೆ ಹೇಳಿದಂತೆ, ಆಫ್ ಸ್ಪಿನ್ನರ್ಗೆ ನಿಜವಾಗ್ಲೂ ಅವಮಾನ ಮಾಡಲಾಯ್ತಾ..? ಆಸಿಸ್ ಪ್ರವಾಸಕ್ಕೂ ಮುನ್ನ ಮತ್ತು ಪ್ರವಾಸದಲ್ಲಿ ನಡೆದಿದ್ದೇನು..?
ಇದನ್ನೂ ಓದಿ:ವಿರಾಟ್ ಕೊಹ್ಲಿ ಮಾಲಿಕತ್ವದ ರೆಸ್ಟೋರೆಂಟ್ಗೆ ನಕ್ಷೆ, ಲೈಸೆನ್ಸ್ ಏನೂ ಇಲ್ಲ.. BBMP ನೋಟಿಸ್
ಆಸ್ಟ್ರೇಲಿಯಾಕ್ಕೆ ಹೋಗಲು ಅಶ್ವಿನ್ಗೆ ಇಷ್ಟ ಇರ್ಲಿಲ್ಲ..?
ಮೂಲಗಳ ಪ್ರಕಾರ, ಆರ್.ಅಶ್ವಿನ್ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಆಡಲು, ಆಸ್ಟ್ರೇಲಿಯಾಗೆ ಹೋಗಲು ಇಷ್ಟ ಇರ್ಲಿಲ್ವಂತೆ. ಅಶ್ವಿನ್ ಕಂಡೀಷನ್ ಮೇಲೆ, ಕಾಂಗರೂಗಳ ನಾಡಿಗೆ ಹೋಗಿದ್ದಂತೆ. ಅಷ್ಟು ಅಶ್ವಿನ್ ಹಾಕಿದ್ದ ಕಂಡೀಷನ್ ಏನು ಗೊತ್ತಾ?. ನನಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಚಾನ್ಸ್ ಕೊಟ್ರೆ ಮಾತ್ರ, ಆಸಿಸ್ ಪ್ರಯಾಣ ಮಾಡುತ್ತೇನೆ. ಇಲ್ಲದಿದ್ದರೆ ನಾನು ಆಸ್ಟ್ರೇಲಿಯಾಕ್ಕೆ ಬರಲ್ಲ ಅಂತ ಹೇಳಿದ್ರಂತೆ. ಅಶ್ವಿನ್ ಕಂಡೀಷನ್ಗೆ ಒಪ್ಪಿದ್ದ ಟೀಮ್ ಮ್ಯಾನೇಜ್ಮೆಂಟ್, ಗ್ರೀನ್ ಸಿಗ್ನಲ್ ಕೂಡ ನೀಡಿತ್ತು. ಆದ್ರೆ ಪರ್ತ್ ಟೆಸ್ಟ್ ಪಂದ್ಯಕ್ಕೆ ಅಶ್ವಿನ್ರನ್ನ ಕೈಬಿಟ್ಟು, ವಾಶಿಂಗ್ಟನ್ ಸುಂದರ್ಗೆ ತಂಡದಲ್ಲಿ ಚಾನ್ಸ್ ನೀಡಲಾಯಿತು. ಇದು ಅಶ್ವಿನ್ಗೆ ನೋವು ತರಿಸಿತು. ರೆಗ್ಯುಲರ್ ಕ್ಯಾಪ್ಟನ್ ರೋಹಿತ್ ಶರ್ಮಾ ಅಲಭ್ಯತೆಯಲ್ಲಿ, ಏನು ನಡಿಬಾರದೋ ಅದೇ ನಡೆದು ಹೋಗಿದೆ. ಇದಕ್ಕೆ ಕಾರಣ, ಕೋಚ್ ಗೌತಮ್ ಗಂಭೀರ್ ಅನ್ನೋದು ಇದೀಗ ಓಪನ್ ಸೀಕ್ರೆಟ್.
ಅಶ್ವಿನ್ ನಿವೃತ್ತಿಯ ಹಿಂದೆ, ದೊಡ್ಡ ಕೈವಾಡ ಇದೆ ಅನ್ನೋದರಲ್ಲಿ ಯಾವುದೇ ಅನುಮಾನವಿಲ್ಲ. ಸ್ವಾರ್ಥ ಮತ್ತು ರಾಜಕೀಯಕ್ಕೆ ಟೀಮ್ ಇಂಡಿಯಾ ಒಬ್ಬ ಪ್ರತಿಭಾವಂತ ಕ್ರಿಕೆಟಿಗನನ್ನ ಕಳೆದುಕೊಂಡಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ