ಸ್ಟಾರ್​ ಆಲ್​ರೌಂಡರ್ ನಿವೃತ್ತಿ ಘೋಷಣೆ.. ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆಯಾಗಿದ್ದರೂ ದಿಢೀರ್ ಗುಡ್​ಬೈ..!

author-image
Ganesh
Updated On
ಸ್ಟಾರ್​ ಆಲ್​ರೌಂಡರ್ ನಿವೃತ್ತಿ ಘೋಷಣೆ.. ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆಯಾಗಿದ್ದರೂ ದಿಢೀರ್ ಗುಡ್​ಬೈ..!
Advertisment
  • ಕ್ರಿಕೆಟ್​ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಕೊಟ್ಟ ಸ್ಟಾರ್
  • ದಿಢೀರ್ ನಿವೃತ್ತಿ ಘೋಷಣೆ ಮಾಡಿರೋದ್ಯಾಕೆ ಈ ಆಟಗಾರ?
  • ಏಕದಿನ ಪಂದ್ಯಗಳಿಗೆ ಮಾತ್ರ ನಿವೃತ್ತಿ, ಟಿ20 ಆಡ್ತಾರೆ

ಫೆಬ್ರವರಿ 19 ರಿಂದ ಚಾಂಪಿಯನ್ಸ್​ ಟ್ರೋಫಿ ನಡೆಯಲಿದ್ದು, ವಿಶ್ವದ ದಿಗ್ಗಜ ತಂಡಗಳು ಗೆಲುವಿಗಾಗಿ ತಂತ್ರ ರೂಪಿಸುತ್ತಿವೆ. ಈ ನಡುವೆ ಆಸ್ಟ್ರೇಲಿಯಾ ತಂಡಕ್ಕೆ ಬಿಗ್ ಶಾಕ್ ಎದುರಾಗಿದೆ. ಕೆಲವು ಆಟಗಾರರು ಗಾಯಕ್ಕೆ ತುತ್ತಾರಗಿರುವ ಮಧ್ಯೆ ಸ್ಟಾರ್ ಅಲ್​ರೌಂಡರ್ ಮಾರ್ಕಸ್ ಸ್ಟೋಯ್ನಿಸ್ ಏಕದಿನ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ.

ಸ್ಟೋಯ್ನಿಸ್ ಅವರು ಚಾಂಪಿಯನ್ಸ್ ಟ್ರೋಫಿ ತಂಡಕ್ಕೆ ಆಯ್ಕೆ ಆಗಿದ್ದರು. 35 ವರ್ಷದ ಸ್ಟೋಯ್ನಿಸ್ ಅವರ ದಿಢೀರ್ ನಿವೃತ್ತಿ ಆಘಾತ ತಂದಿದೆ. ಆದರೆ ಅವರು ಟಿ-20 ಪಂದ್ಯಗಳನ್ನು ಆಡೋದಾಗಿ ತಿಳಿಸಿದ್ದಾರೆ. ಆಸ್ಟ್ರೇಲಿಯಾ ಪರ 71 ಏಕದಿನ ಪಂದ್ಯವನ್ನು ಆಡಿರುವ ಸ್ಟೋಯ್ನಿಸ್, 26.69 ಸರಾಸರಿಯಲ್ಲಿ 1495 ರನ್​ಗಳಿಸಿದ್ದರು. 146 ಅವರ ಅತ್ಯಧಿಕ ಸ್ಕೋರ್. ಆಸಿಸ್ ಪರ 48 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು.

ಇದನ್ನೂ ಓದಿ:ಯಾಕೆ ಕೊಹ್ಲಿ ನಿನ್ನೆ ಆಡಲಿಲ್ಲ..? ಅಸಲಿ ಕಾರಣ ತಿಳಿಸಿದ ರೋಹಿತ್ ಶರ್ಮಾ..!

publive-image

ಆಸ್ಟ್ರೇಲಿಯಾಗೆ ದೊಡ್ಡ ಹೊಡೆತ..

ಗಾಯದ ಸಮಸ್ಯೆ ಎದುರಿಸುತ್ತಿರುವ ಆಸ್ಟ್ರೇಲಿಯಾಗೆ ಮತ್ತೊಂದು ಆಘಾತ ಎದುರಾಗಿದೆ. ಈಗಾಗಲೇ ನಾಯಕ ಪ್ಯಾಟ್ ಕಮ್ಮಿನ್ಸ್ ಮತ್ತು ಜೊಸ್ ಹೇಜಲ್​ವುಡ್​ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಕಮ್ಮಿನ್ಸ್​ ಭಾರತ ವಿರುದ್ಧ ಟೆಸ್ಟ್ ಆಡುವಾಗ ಗಾಯಕ್ಕೆ ಒಳಗಾಗಿದ್ದರು. ಹೇಜಲ್​ವುಡ್ ಸ್ನಾಯು ಸೆಳೆತಕ್ಕೆ ಒಳಗಾದವರು ಇನ್ನೂ ಚೇತರಿಸಿಕೊಂಡಿಲ್ಲ. ಮಿಚೆಲ್ ಮಾರ್ಷ್ ಕೂಡ ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಇದನ್ನೂ ಓದಿ: ಸುಪ್ರೀಂ ಕೋರ್ಟ್​ನ ಈ ಉದ್ಯೋಗಗಳಿಗೆ ಇಂದೇ ಅಪ್ಲೇ ಮಾಡಿ.. ಎಷ್ಟು ಹುದ್ದೆಗಳು ಇವೆ?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment